ಚಳ್ಳಕೆರೆ : ಸಾರಿಗೆ ಬಸ್ ಹಾಗೂ ಬೈಕ್ ಮುಖಾಮುಖಿ ಡಿಕ್ಕಿ ವ್ಯಕ್ತಿಯೋರ್ವ ಸ್ಥಳದಲ್ಲೇ ಮೃತಪಟ್ಟ ಘಟನೆ ತಳಕು ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಚಳ್ಳಕೆರೆ ತಾಲೂಕಿನ ರಾಷ್ಟ್ರೀಯ ಹೆದ್ದಾರಿ ತಳಕು ಠಾಣೆ ವ್ಯಾಪ್ತಿಯ ಗರಣಿ ಕ್ರಾಸ್ನಲ್ಲಿ ಬಳಿ ಘಟಪರ್ತಿ ಗ್ರಾಮದ ರಂಗಪ್ಪ (27) ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಚಳ್ಳಕೆರೆಯಿಂದ ಘಟಪರ್ತಿ ಗ್ರಾಮಕ್ಕ ಹೋಗುತ್ತಿದ್ದ ವೇಳೆ ಬಳ್ಳಾರಿ ಕಡೆಯಿಂದ ಬಂದ ಸರ್ಕಾರಿ ಬಸ್ ಡಿಕ್ಕಿ ಪಡಿಸಿದೆ. ಈ ಸವಾರ ಸ್ಥಳದಲ್ಲಿ ಸಾವನಪ್ಪಿದ್ದಾನೆ .ಘಟನೆ ಥಳುಕು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು ಸ್ಥಳಕ್ಕೆ ತಳಕು ಠಾಣೆಯ ವೃತ್ತನಿರೀಕ್ಷಕ ಕೆ.ಸಮೀವುಲ್ಲ.ಪಿ ಎಸ್ ಐ ಲೋಕೇಶ್ ಹಾಗೂ ಕೆಎಸ್ಆರ್ಟಿಸಿ ಡಿಪೋ ಮ್ಯಾನೇಜರ್ ಎಸ್ ಪ್ರಭು ಭೇಟಿ ನೀಡಿ ಪರಿಶೀಲನೆ ನಡೆಸಿ ತಳಕು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.


