Monday, February 2, 2026
Flats for sale
Homeರಾಜ್ಯಗೋಕಾಕ್ ; ಅಯೋದ್ಯೆ ಮಂತ್ರಾಕ್ಷತೆ ಆಮಂತ್ರಣದ ಶೋಭಾ ಯಾತ್ರೆಗೆ ಶಾಸಕ ರಮೇಶ ಜಾರಕಿಹೋಳಿ ಚಾಲನೆ.

ಗೋಕಾಕ್ ; ಅಯೋದ್ಯೆ ಮಂತ್ರಾಕ್ಷತೆ ಆಮಂತ್ರಣದ ಶೋಭಾ ಯಾತ್ರೆಗೆ ಶಾಸಕ ರಮೇಶ ಜಾರಕಿಹೋಳಿ ಚಾಲನೆ.

ಗೋಕಾಕ : ಬರುವ 22 ಜನೇವರಿ 2024 ರಂದು ಅಯೋಧ್ಯೆಯಲ್ಲಿ ನಡೆಯಲಿರುವ ಅಯೋಧ್ಯೆ ಶ್ರೀ ರಾಮ ಪ್ರಾಣ ಪ್ರತಿಷ್ಠಾಪನೆ ಅಂಗವಾಗಿ ಗೋಕಾಕದ ಮಹರ್ಷಿ ಶ್ರೀ ವಾಲ್ಮಿಕಿ ದೇವಸ್ಥಾನಕ್ಕೆ ಆಗಮಿಸಿದ್ದ ಶ್ರೀರಾಮ ಜನ್ಮಭೂಮಿ ಮಂತ್ರಾಕ್ಷತೆ ಕಲಶ ಆಮಂತ್ರಣಕ್ಕೆ ಶಾಸಕ ರಮೇಶ ಜಾರಕಿಹೋಳಿಯವರು ಹೂ ಹಾರಿಸುವ ಮೂಲಕ ಶೋಭಾ ಯಾತ್ರೆಗೆ ಚಾಲನೆ ನೀಡಿದರು.

ನೂರಾರು ಹನುಮ ಮಾಲಾಧಾರಿಗಳು ಮತ್ತು ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳೊಂದಿಗೆ ಹೊರಟ ಅದ್ದೂರಿ ಶೋಭಾಯಾತ್ರೆಗೆ ಕುಣಿಯುತ್ತಾ ದಾರಿಯುದ್ದಕ್ಕೂ ಜೈ ಶ್ರೀರಾಮ ಶ್ರೀರಾಮ ಜೈ ಜೈ ರಾಮ ಘೋಷಣೆ ಕೂಗುತ್ತ ನಗರದ ಪ್ರಮುಖ ಬೀದಿಗಳಾದ ಕುರುಬರ ಪೂಲ, ಬಾಪನಾ ಕೂಟ,ಸಂಗೋಳ್ಳಿ ರಾಯಣ್ಣ, ಅಪ್ಸರಾ ಕೂಟದ ಮುಖಾಂತರ ತೆರಳಿ ಶ್ರೀ ರಾಮ ಮಂದಿರಕ್ಕೆ ತಲುಪಿತು.ವಿವಿದ ಕಲಾ ತಂಡಗಳು ಈ ಶೋಭಾಯಾತ್ರೆಯಲ್ಲಿ ಬಾಗಿಯಾಗಿದ್ದವು ಇನ್ನು ದಾರಿಯುದ್ದಕ್ಕೂ ಇಸ್ಕಾನ್ ದೇವಸ್ಥಾನದ ಕಾರ್ಯಕರ್ತರು ರಂಗೋಲಿ ಬಿಡಿಸಿ ಸ್ವಾಗತಿಸುತಿದ್ದರು.

ದಾರಿಯುದ್ದಕ್ಕೂ ಸಾಗಿದ ಈ ಶೋಭಾಯಾತ್ರೆಯಲ್ಲಿ ಕೇಸರಿ ದ್ವಜಗಳು, ಟೋಪಿ ಧರಿಸಿದ ಶ್ರೀರಾಮ ಭಕ್ತರ ನೋಟ ಕಣ್ಮನ ಸೇಳೆಯಿತು. ಸೇರಿದಂತೆ ಆರ್,ಎಸ್,ಎಸ್,ಸರ್ವ ಸದಸ್ಯರು ನೂರಾರು ಸುಮಂಗಲಿಯರು ಮತ್ತು ಸ್ಥಳಿಯ ರಾಮ ಭಕ್ತರು ಈ ಮೆರವಣಿಗೆಯಲ್ಲಿ ಬಾಗಿಯಾಗಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular