ಗೋಕಾಕ : ಹೆಚ್ಚಿಗೆ ಬಡ್ಡಿ ಹಣಕ್ಕೆ ಸಾಲ ಬೇಡ ಅಂದಿದ್ದಕ್ಕೆ ಮಹಿಳೆಗೆ ಚಾಕು ಇರಿದ ಘಟನೆ ಗೋಕಾಕ ತಾಲೂಕಿನ ಘಟಪ್ರಭಾ ನಗರದಲ್ಲಿ ನಡೆದಿದೆ.
ಒಂದು ವರ್ಷದ ಹಿಂದೆ ಘಟಪ್ರಭಾದ ಮಲ್ಲಿಕಾರ್ಜುನ ನಿಂಗಪ್ಪಾ ಕುಂಬಾರ ಇತ ಘಟಪ್ರಬಾದಲ್ಲಿರುವ ನಯನಾ ಪ್ರವೀಣ ಶೆಟ್ಟಿ ಎಂಬ ಮಹಿಳೆಗೆ ಒಂದು ಲಕ್ಷರೂ ಹಣವನ್ನು ಕೊಟ್ಟು ಬಡ್ಡಿ ಸಮೇತ ಪರತ ಪಡೆದುಕೊಂಡು ಮತ್ತೆ ಹಣ ಬೇಕಾದರೆ ಕೇಳಿ ಅಂತ ಹೇಳಿದ್ದಾನೆ, ಆದರೆ ಮಹಿಳೆ ಬೇಡಾ ನೀವು ಹೆಚ್ಚಿಗೆ ಬಡ್ಡಿ ತೆಗೆದುಕೊಳ್ಳುತ್ತೀರಿ ಅಂದಿದ್ದಕ್ಕೆ ಅವಮಾನ ತಡೆಯಲಾಗದೆ ಮಲ್ಲಿಕಾರ್ಜುನ ಕುಂಬಾರ ಇತ ಮನೆಯಿಂದ ಹೊಟೇಲಗೆ ಹೊಗುವಾಗ ಮಹಿಳೆಯನ್ನು ಹಿಂಬಾಲಿಸಿ ಮದ್ಯದಲ್ಲಿ ತಡೆದು ಕೈಯಲ್ಲಿದ್ದ ಚಾಕುವಿನಿಂದ ಮನಸೊ ಇಚ್ಚೆ ಇರಿದು ಕೊಲೆಗೆ ಯತ್ನ ಮಾಡಿದ್ದಾನೆ.
ಇನ್ನು ಸುದ್ದಿ ತಿಳಿದ ಘಟಪ್ರಭಾ ಪೋಲಿಸರು ಸ್ಥಳಕ್ಕೆ ದಾವಿಸಿ ಮಲ್ಲಿಕಾರ್ಜುನ ಇತನನ್ನು ಬಂದಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಗಂಬೀರವಾಗಿ ಗಾಯಗೊಂಡ ಮಹಿಳೆಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಳಗಾವಿಯ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿದ್ದಾರೆ.


