Friday, January 16, 2026
Flats for sale
Homeಕ್ರೀಡೆಗುವಾಹಟಿ : ಭಾರತ ಮತ್ತು ಬಾಂಗ್ಲಾದೇಶ ನಡುವಿನ ರಾಜತಾಂತ್ರಿಕ ಸಂಘರ್ಷ : ಬಾಂಗ್ಲಾ ವೇಗಿ ಮುಸ್ತಾಫಿಜುರ್...

ಗುವಾಹಟಿ : ಭಾರತ ಮತ್ತು ಬಾಂಗ್ಲಾದೇಶ ನಡುವಿನ ರಾಜತಾಂತ್ರಿಕ ಸಂಘರ್ಷ : ಬಾಂಗ್ಲಾ ವೇಗಿ ಮುಸ್ತಾಫಿಜುರ್ ರೆಹಮಾನ್ ಕೈಬಿಟ್ಟ ಕೆ.ಕೆ.ಆರ್.

ಗುವಾಹಟಿ : ಮುಂಬರುವ ಐಪಿಎಲ್ ಟೂರ್ನಿಗೂ ಮುನ್ನ ಬಿಸಿಸಿಐ, ಐಪಿಎಲ್ ಫ್ರಾಂಚೈಸಿ ಕೋಲ್ಕತ್ತಾ ನೈಟ್ ರೈಡ್ಸ್ ತಂಡ ವೇಗಿ ಮುಸ್ತಾಫಿಜುರ್ ರೆಹಮಾನ್ ಅವರನ್ನು ತಂಡದಿAದ ಕೈಬಿಟ್ಟಿದೆ. ಭಾರತ ಮತ್ತು ಬಾಂಗ್ಲಾದೇಶ ನಡುವೆ ರಾಜತಾಂತ್ರಿಕ ಸಂಘರ್ಷ ನಡೆಯುತ್ತಿರುವ ಹಿನ್ನೆಲೆಯಲ್ಲಿ ಬಿಸಿಸಿಐ ಕೋಲ್ಕತ್ತಾ ಫ್ರಾಂಚೈಸಿಗೆ ಸೂಚಿಸಿತ್ತು. ಅಗತ್ಯಬಿದ್ದಲ್ಲಿ ಬೇರೆ ಆಟಗಾರರನ್ನು ಖರೀದಿಸಲು ಕೋಲ್ಕತ್ತಾ ತಂಡಕ್ಕೆ ಅವಕಾಶ ನೀಡಲಾಗುವುದೆಂದು ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ತಿಳಿಸಿದ್ದರು.

ಕಳೆದ ತಿಂಗಳು ನಡೆದ ಐಪಿಎಲ್ ಹರಾಜಿನಲ್ಲಿ ಕೋಲ್ಕತ್ತಾ ನೈಟ್ ರೈಡ್ಸ್ ತಂಡ ಬಾಂಗ್ಲಾ ವೇಗಿ ಮುಸ್ತಾಫಿಜುರ್ ರೆಹಮಾನ್ ಅವರನ್ನು ೯.೨೦ ಕೋಟಿ ರೂ.ಗೆ ಖರೀದಿ ಮಾಡಿತ್ತು. ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯದಂತಹ ಘಟನೆಗಳ ಬೆಳವಣಿಗೆಯನ್ನು ಖಂಡಿಸಿ ಈ ಕ್ರಮಕ್ಕೆ ಮುಂದಾಗಿರುವುದಾಗಿ ದೇವಜಿತ್ ಸೈಕಿಯಾ ವಿವರಿಸಿದ್ದಾರೆ.

ಬಿಸಿಸಿಐನ ಸೂಚನೆ ಮೇರೆಗೆ ಸಲಹೆಗಳನ್ನು ಪಡೆದು ವೇಗಿ ಮುಸ್ತಾಫಿಜುರ್ ರೆಹಮಾನ್ ಅವರನ್ನು ತಂಡದಿAದ ಕೈಬಿಟ್ಟಿರುವುದಾಗಿ ಕೆಕೆಆರ್ ತಂಡ ತಿಳಿಸಿದೆ. ಇತ್ತೀಚೆಗೆ ಬಾಂಗ್ಲಾದಲ್ಲಿ ಹಿಂದೂ ವ್ಯಕ್ತಿಯ ಹತ್ಯೆಯಾಗಿತ್ತು. ಈ ಹಿನ್ನೆಲೆಯಲ್ಲಿ ಮುಸ್ತಾಫಿಜುರ್ ರೆಹಾಮನ್ ಐಪಿಎಲ್ ಆಡುವ ಬಗ್ಗೆ ಸಾಕಷ್ಟು ವಿರೋಧ ಬಂದಿದ್ದವು.ಮುಸ್ತಾಫಿಜುರ್ ರೆಹಮಾನ್ ಈವರೆಗೂ ೮ ಐಪಿಎಲ್ ಆವೃತ್ತಿಗಳನ್ನ ಆಡಿದ್ದಾರೆ. ಬಿಸಿಸಿಐನ ಈ ಕ್ರಮವನ್ನು ಕೇರಳ ಸಂಸದ ಶಶಿ ತರೂರ್ ಖಂಡಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular