ಗದಗ : ಜಿಲ್ಲೆಯ ಮುಂಡರಗಿ ಪಟ್ಟಣದಲ್ಲಿ ಆಸ್ತಿಗಾಗಿ ತಂಗಿಯ ಕೊಲೆ ಮಾಡಿರುವ ಘಟನೆ ನಡೆದಿದೆ.
ಮೃತಪಟ್ಟ ಮಹಿಳೆಯನ್ನು ಕಾವ್ಯಾ (32) ಎಂದು ಗುರುತಿಸಲಾಗಿದೆ.
ಈಶಪ್ಪ ಕ್ಯಾದಗಿಹಳ್ಳಿ ಎಂಬಾತನಿಂದ ಕೃತ್ಯ ನಡೆದಿದ್ದು ತಂಗಿ ಕೊಲೆ ಮಾಡಿ ಈಶಪ್ಪ ಪೊಲೀಸರಿಗೆ ಶರಣಾಗಿದ್ದಾನೆ. ಈ ಮೊದಲೇ ಪ್ರಶಾಂತ ಹಡಪದ (37) ಜೊತೆ ಕಾವ್ಯಾಳ ಮದುವೆಯಾಗಿತ್ತು ಬಳಿಕ ಅನ್ಯಕೋಮಿನ ಯುವಕನ ಜೊತೆ ಮದುವೆಯಾಗಿದ್ದಲು.ಆಸ್ತಿಗಾಗಿ ಅಣ್ಣನ ವಿರುದ್ಧ ಕೇಸ್ ದಾಖಲಿಸಲು ಮುಂದಾಗಿದ್ದು ಈ ಹಿನ್ನೆಲೆ ಮನೆಗೆ ಬಂದು ತಂಗಿ ಕಾವ್ಯಾ ಜೊತೆ ವಾಗ್ವಾದ ನಡೆಸಿ ಮಾರಕಾಸ್ತ್ರಗಳಿಂದ ಕೊಲೆಮಾಡಿ ತಾನೇ ಪೊಲೀಸರಿಗೆ ಶರಣಾಗಿದ್ದನೆಂದು ಮಾಹಿತಿ ದೊರೆತಿದೆ.
ಗದಗ ಜಿಲ್ಲೆಯ ಮುಂಡರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಸ್ಥಳಕ್ಕೆ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ.
.