ಗದಗ ; ಅಪ್ರಾಪ್ತ ಬಾಲಕಿ ಕರೆದ್ಯೊಯ್ದು ಅತ್ಯಾಚಾರ ಎಸಗಿದ ಘಟನೆ ಗದಗ ಜಿಲ್ಲೆಯ ನರೇಗಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಅತ್ಯಾಚಾರ ಎಸಗಿ ಬಳಿಕ ಇನ್ನೊಬ್ನ ಯುವಕನಿಂದ ಅತ್ಯಾಚಾರದ ವಿಡಿಯೋ ಮಾಡಿ ವಿಕೃತಿ ಮೆರೆದಿದ್ದು ಇದೀಗ ಪೋಲಿಸರ ಅತಿಥಿಯಾಗಿದ್ದಾನೆ.
ಡಿಸೆಂಬರ್ ತಿಂಗಳಲ್ಲಿ ಈ ಘಟನೆ ನಡೆದಿದ್ದು ವಿಡಿಯೋ ಮಾಡಿ ಕಾಮುಕರು ಬೆದರಿಕೆ ಹಾಕಿದ್ದಾರೆ.
ಪಾಲಕರಿಗೆ ತಡವಾಗಿ ಗೊತ್ತಾಗಿದ್ದು ವಿಷಯ ಗೊತ್ತಾದ ಬಳಿಕ ನರೇಗಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಅತ್ಯಾಚಾರಿ ಆರೋಪಿ ಸುಲೇಮಾನ್, ವಿಡಿಯೋ ಮಾಡಿದ ಅಲ್ತಾಫ್ ನನ್ನು ಪೊಲೀಸರು ಬಂಧಿಸಿದ್ದು ನರೇಗಲ್ ಪೊಲೀಸರಿಂದ ತನಿಖೆ ನಡೆಯುತ್ತಿದೆ.