ಗಂಗಾವತಿ: ವೇಗವಾಗಿ ಹೋಗುತ್ತಿದ್ದ ಲಾರಿ ಮತ್ತು ಬಸ್ ಎರಡು ಮುಖಾಮುಖಿಯಾಗುವುದನ್ನು ತಪ್ಪಿಸಲು ಲಾರಿ ಚಾಲಕ ಸಮಯ ಪ್ರಜ್ಞೆ ಮೆರೆದು ಸಾರಿಗೆ ವಾಹನದಲ್ಲಿದ್ದ ಸುಮಾರು 30ಕ್ಕೂ ಹೆಚ್ಚು ಜನರ ಪ್ರಾಣವನ್ನು ಕಾಪಾಡಿದ ಘಟನೆ ಸಮೀಪದ ಚಿಕ್ಕಜಂತಕಲ್ನಲ್ಲಿ ಶುಕ್ರವಾರ ರಾತ್ರಿ ನಡೆದಿದೆ.
ಘಟನೆಯು ತುಂಗಭದ್ರಾ ನದಿ ಸಮೀಪದಲ್ಲಿಯೇ ಇರುವ ಈರಣ್ಣ ಗುಡಿ ಮತ್ತು ಹಜರತ್ ಅಲಿ ದುಗರ್ಾದ ಮಧ್ಯ ಇರುವ ಕಾಲುವೆ ಸೇತುವೆ ಬಳಿ ಸಂಭವಿಸಿದ್ದು, ಲಾರಿ ಚಾಲಕನ ಸಮಯ ಪ್ರಜ್ಞೆಯಿಂದಾಗಿ ಸಾರಿಗೆ ವಾಹನದಲ್ಲಿದ್ದ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ.
ನಡೆದಿದ್ದೇನು…?:
ಗಂಗಾವತಿಯಿಂದ ಕಂಪ್ಲಿಯತ್ತ ಹೊರಟಿದ್ದ ಲಿಂಗಸೂರು-ಧರ್ಮಸ್ಥಳ ಸಾರಿಗೆ ವಾಹನಕ್ಕೆ ಕಂಪ್ಲಿಯಿಂದ ಬರುತ್ತಿದ್ದ ಲಾರಿಯೊಂದು ಎದುರಾಗಿದೆ. ಎರಡು ವಾಹನಗಳು ವೇಗವಾಗಿದ್ದರಿಂದ ಇಬ್ಬರೂ ಚಾಲಕರಿಗೆ ನಿಯಂತ್ರಣ ಸಿಗದೇ ಕಾಲುವೆ ಸೇತುವೆ ಮೇಲೆ ವಾಹನಗಳು ಬಂದಿವೆ.ಇನ್ನೇನನು ಮುಖಾಮುಖಿ ಸಂಭವಿಸಿ ಸಾವು-ನೋವು ಉಂಟಾಯಿತು ಎನ್ನುವಷ್ಟರಲ್ಲಿ ಲಾರಿ ಚಾಲಕ ಚಿತ್ರದುರ್ಗ ಮೂಲದ ಸುದೀಪ್ ಕುಮಾರ ತನ್ನ ವಾಹನವನ್ನು ದಿಢೀರ್ ಎಂದು ಕಾಲುವೆ ಮೇಲೆ ನಿಮರ್ಿಸಲಾಗಿದ್ದ ಸೇತುವೆ ಮೇಲೆ ಏರಿಸಿದ್ದಾನೆ. ಹೀಗಾಗಿ ಸಂಭಾವ್ಯ ಭಾರಿ ಅಪಘಾತ ತಪ್ಪಿದೆ.ಕಿರಿದಾರ ಸೇತುವೆ ಮೇಲೆ ಏಕಕಾಲಕ್ಕೆ ಎರಡು ವಾಹನಗಳು ಬಂದಿದ್ದರಿಂದ ಕೂಡಲೆ ಲಾರಿ ಚಾಲಕ, ತನ್ನ ವಾಹನವನ್ನು ಸೇತುವೆ ಮೇಲೆ ಲಾರಿ ಏರಿಸಿದ್ದಾನೆ. ಹೀಗಾಗಿ ಸಾರಿಗೆ ವಾಹನದ ಬಲಭಾಗದ ಗಾಜುಗಳು ಪುಡಿಯಾಗಿದ್ದು, ಲಾರಿಯ ಎಡ ಭಾಗದಲ್ಲಿ ಹಾನಿನಿಯಾಗಿದೆ.
ಘಟನೆಯಿಂದಾಗಿ ಕೆಲಕಾಆಲ ರಸ್ತೆ ಸಂಚಾರ ಸ್ಥಗಿತವಾಗಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಕೂಡಲೆ ಸ್ಥಳಕ್ಕೆ ಆಗಮಿಸಿದ ಗಂಗಾವತಿ ಗ್ರಾಮೀಣ ಠಾಣೆಯ ಪೊಲೀಸರು, ಕಾಲುವೆ ಸೇತುವೆ ಸಮೀಪದ ಹೊಲದಲ್ಲಿ ವಾಆಹನಗಳ ಓಡಾಟಕ್ಕೆ ಅವಕಾಶ ಕಲ್ಪಿಸಿ ಕ್ರೇನ್ ಸಹಾಯದಿಂದ ಅಪಘಾತಕ್ಕೀಡಾಗಿದ್ದ ವಾಹನಗಳನ್ನು ತೆರವು ಮಾಡಿದರು.