Thursday, March 12, 2026
Flats for sale
Homeಕ್ರೈಂಗಂಗಾವತಿ ; ರಾಮನಾಮ ಜಪಕ್ಕೊತ್ತಾಯಿಸಿ ಅಂಧ ವೃದ್ಧನ ಮೇಲೆ ಹಲ್ಲೆ‌.

ಗಂಗಾವತಿ ; ರಾಮನಾಮ ಜಪಕ್ಕೊತ್ತಾಯಿಸಿ ಅಂಧ ವೃದ್ಧನ ಮೇಲೆ ಹಲ್ಲೆ‌.

ಗಂಗಾವತಿ ; ರಾಮನಾಮ ಜಪ ಮಾಡುವಂತೆ ಒತ್ತಾಯಿಸಿ ಮೂರು-ನಾಲ್ಕು ಯುವಕರ ಗುಂಪೊಂದು ಅನ್ಯ ಕೋಮಿನ ಅಂದ ವೃದ್ಧನ ಮೇಲೆರಗಿ ಥಳಿಸಿದ ಘಟನೆ ನಗರದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಈ ಸಂಬಂಧ ನಗರಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪರಿಚಿತ ಯುವಕರಗುಂಪೊಂದು ತನ್ನ ಮೇಲೆ ಮಾಡಿದೆ ಎಂದು ನೊಂದ ವೃದ್ಧ ನ.25ರಂದು ನಗರಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಬಿಕ್ಷಾಟನೆ ಮಾಡುವ ಮೂಲಕ ಜೀವನ ಸಾಗಿಸುತ್ತಿರುವ ವಯೋವೃದ್ಧನ ಮೇಲೆ ಹಲ್ಲೆ ಮಾಡಿರುವ ಘಟನೆಯಿಂದಾಗಿ ನಗರದಲ್ಲಿ ಆತಂಕ ನಿಮರ್ಾಣವಾಗಿದೆ.

ನಡೆದಿದ್ದೇನು…,?:
ಇಲ್ಲಿನ ಮಹೆಬೂಬನಗರದ ನಿವಾಸಿ ಹುಸೇನಸಾಬ ಎಂಬ 70 ವರ್ಷಕ್ಕೂ ಹೆಚ್ಚು ವಯಸ್ಸಿನ ವ್ಯಕ್ತಿ ಬಿಕ್ಷಾಟನೆ ಮಾಡುತ್ತಾ ಜೀವನ ನಡೆಸುತ್ತಿದ್ದಾರೆ. ನ.20ರಂದು ಗಂಗಾವತಿ ಜಯನಗರದ ಬೈಪಾಸ್ ರಸ್ತೆಯಲ್ಲಿ ನಡೆದು ಹೋಗುತ್ತಿರುವಾಗ ಯುವಕರ ಗುಂಪೊಂದು ವೃದ್ಧನನ್ನು ಅಡ್ಡಗಟ್ಟಿದೆ.

ಮಾಜಿಸಚಿವ ಇಕ್ಬಾಲ್ ಅನ್ಸಾರಿ ನಿವಾಸದ ಸಮೀಪದಲ್ಲಿ ಈ ಘಟನೆ ನಡೆದಿದ್ದು, ಸರಿಯಾಗಿ ಮಾತು ಬಾರದ ವೃದ್ಧನಿಗೆ ಯುವಕರ ಗುಂಪು, ಜೈ ಶ್ರೀರಾಮ್ ಎಂದು ಘೋಷಣೆ ಹಾಗುವಂತೆ ಹಾಗೂ ರಾಮನಾಮ ಜಪ ಮಾಡುವಂತೆ ಒತ್ತಾಯಿಸಿದೆ.

ಸರಿಯಾಗಿ ಕಿವಿಯೂ ಕೇಳದ ವೃದ್ಧನಿಗೆ ಯುವಕರ ಗುಂಪು ಥಳಿಸಿದೆ ಎನ್ನಲಾಗಿದೆ. ಅಲ್ಲದೇ ಗಡ್ಡಕ್ಕೆ ಬೆಂಕಿ ಹಚ್ಚಲು ಯತ್ನಿಸಿದ್ದು ಸಮಯಕ್ಕೆ ಸರಿಯಾಗಿ ಸಮೀಪದಲ್ಲಿದ್ದ ಕುರಿಗಾಹಿ ಯುವಕರು ಸ್ಥಳಕ್ಕೆ ಆಗಮಿಸಿ ವೃದ್ಧನ ರಕ್ಷಣೆ ಮಾಡಿದ್ದಾರೆ ಎನ್ನಲಾಗಿದೆ.

ತಡವಾಗಿ ಪ್ರಕರಣ:
ವೃದ್ಧನಿಗೆ ಕೀಟಲೆ ಮಾಡಿದ ಅಪರಿಚಿತ ಯುವಕರು ಗುಂಪು ಬೆದರಿಕೆ ಹಾಕಿದೆ ಎನ್ನಲಾಗಿದ್ದು, ಈ ಹಿನ್ನೆಲೆ ವೃದ್ಧ ಘಟನೆಯ ಬಗ್ಗ ಯಾರಿಗೂ ಹೇಳಿಲ್ಲ. ಎನ್ನಲಾಗಿದೆ. ಆದರೆ ಘಟನೆ ಹೇಗೋ ಕೆಲವರಿಗೆ ಗೊತ್ತಾಗಿದೆ. ಬಳಿಕ ಕಾರಟಗಿ ತಾಲ್ಲೂಕಿನ ಸಿಂಗನಾಳ ಗ್ರಾಮದ ಕೆಲವರು ಗಂಗಾವತಿಯ ಕೆಲ ಯುವಕರ ಗಮನಕ್ಕೆ ತಂದಿದ್ದಾರೆ.
ಕೂಡಲೆ ಕಾರ್ಯ ಪ್ರವೃತ್ತರಾದ ಯುವಕರು ವೃದ್ಧನನ್ನು ಹುಡುಕಿ ಘಟನೆಯ ಬಗ್ಗೆ ವಿವರಣೆ ಪಡೆದುಕೊಂಡಿದ್ದಾರೆ. ಅಲ್ಲದೇ ಮಾನಸಿಕವಾಗಿ ಕುಗ್ಗಿದ್ದ ವೃದ್ಧನಿಗೆ ಸಮಾಧಾನ ಹೇಳಿ ಪೊಲೀಸ್ ಠಾಣೆಯಲ್ಲಿ ಲಿಖಿತ ದೂರು ನೀಡಿ ಪ್ರಕರಣ ದಾಖಲಿಸಿದ್ದಾರೆ.

ಬಂಧನಕ್ಕೆ ಒತ್ತಾಯ:
ಘಟನೆ ನಡೆದು ಹತ್ತು ದಿನ ಕಳೆದಿದೆ. ಪ್ರಕರಣ ದಾಖಲಾಗಿ ಒಂದು ವಾಆರ ಕಳೆದಿದೆ. ಆದರೆ ಇದುವರೆಗೂ ಪೊಲೀಸರು ಆರೋಪಿಗಳ ಪತ್ತೆ ಮಾಡಿಲ್ಲ. ಕೂಡಲೆ ಆರೋಪಿಗಳನ್ನು ಪತ್ತೆ ಮಾಡಬೇಕು ಎಂದು ಸ್ಟೂಡೆಂಟ್ ಡೆಮಾಕ್ರಟಿಕ್ ಪಾಟರ್ಿ ಆಫ್ ಇಂಡಿಯಾದ ಕೊಪ್ಪಳ ಜಿಲ್ಲಾ ಅಧ್ಯಕ್ಷ ಸಲೀಂ ಮನಿಯಾರ ಒತ್ತಾಯಿಸಿದ್ದಾರೆ.
ಗಂಗಾವತಿ ಶಾಂತಿ-ನೆಮ್ಮದಿಯ ತವರೂರಾಗಿತ್ತು. ಎಲ್ಲಾ ಕೋಮಿನ ಜನ ಪರಸ್ಪರ ಪ್ರೀತಿ-ವಿಶ್ವಾಸದಿಂದ ಬದುಕುತ್ತಿದ್ದಾರೆ. ಆದರೆ ಇಂತಹ ಘಟನೆಗಳಿಂದ ಸಮಾಜದ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುತ್ತಿದ್ದು, ಕೂಡಲೆ ಆರೋಪಿಗಳನ್ನು ಬಂಧಿಸಬೇಕು ಎಂದು ಸಲೀಂ ಪೊಲೀಸರನ್ನು ಒತ್ತಾಯಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular