Wednesday, October 22, 2025
Flats for sale
Homeರಾಜ್ಯಗಂಗಾವತಿ : ಮಸೀದಿಯ ಮುಂದೆ ಮಂಗಳಾರತಿ ಮಾಡಿದ ಪ್ರಕರಣ - ಪಿಐ ಸೇರಿ ಮೂವ್ವರು ಸಸ್ಪೆಂಡ್

ಗಂಗಾವತಿ : ಮಸೀದಿಯ ಮುಂದೆ ಮಂಗಳಾರತಿ ಮಾಡಿದ ಪ್ರಕರಣ – ಪಿಐ ಸೇರಿ ಮೂವ್ವರು ಸಸ್ಪೆಂಡ್

ಗಂಗಾವತಿ:ನಗರದಲ್ಲಿ ನಡೆದ ಗಣೇಶನ ಮೆರವಣಿಗೆಯ ಸಂದರ್ಭದಲ್ಲಿ ಮಸೀದಿಯ ಮುಂದೆ ಮಂಗಳಾರತಿ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರಠಾಣೆಯ ಪಿಐ ಸೇರಿದಂತೆ ಮೂವ್ವರನ್ನು ಅಮಾನತು ಮಾಡಿ ಪೊಲೀಸ್ ಇಲಾಖೆ ಶಿಸ್ತುಕ್ರಮ ಕೈಗೊಂಡಿದೆ.

ನಗರ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ಅಡಿವೆಪ್ಪ ಗೋಡಿಗೊಪ್ಪ, ಪಿಎಸ್ಐ ಕಾಮಣ್ಣ, ಪಿಸಿ ಮರಿಯಪ್ಪ ಎಂಬ ಮೂವ್ವರನ್ನು ಅಮಾನತು ಮಾಡಿ ಇಲಾಖೆ ಆದೇಶ ನೀಡಿದೆ.

ಹಿಂದು ಮಹಾಮಂಡಳಿಯ ಗಣೇಶನ ಮೆರವಣಿಗೆಯ ಸಂದರ್ಭದಲ್ಲಿ ಜುಮ್ಮಾ ಮಸೀದಿಯ ಮುಂದೆ ಮೆರವಣಿಗೆಕಾರರು ಮಂಡಲ ಬರೆದು, ಪೂಜೆ ಸಲ್ಲಿಸಿದ್ದಲ್ಲದೇ ಮಸೀದಿಗೆ ಮಂಗಳಾರತಿ ಮಾಡಿದ್ದರು. ಇದು ನಗರದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣಕ್ಕೆ ಕಾರಣವಾಗಿತ್ತು. ಪರಿಸ್ಥಿತಿ ತಿಳಿಗೊಳಿಸುವಲ್ಲಿ ಹಾಗೂ ಕಾನೂನು ಪಾಲನೆಯಲ್ಲಿ ಅಶಿಸ್ತು ತೋರಿದ ಕಾರಣ ತೋರಿಸಿ ಮೂವ್ವರ ಮೇಲೆ ಕ್ರಮ ಕೈಗೊಳ್ಳಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular