ಗಂಗಾವತಿ : ಶಾಲೆಯಲ್ಲಿ ನೀಡಿದ ಮಧ್ಯಾಹ್ನದ ಬಿಸಿಯೂಟ ಮಾಡಿದ 32 ಮಕ್ಕಳು ಅಸ್ವಸ್ಥರಾದ ಘಟನೆ ತಾಲ್ಲೂಕಿನ ಸಂಗಾಪುರ ಗ್ರಾಮದಲ್ಲಿ ನಡೆದಿದೆ.
ಅಸ್ವಸ್ಥಗೊಂಡ ಮಕ್ಕಳನ್ನು ಊರಿನ ಜನ ಕೂಡಲೆ ಗ್ರಾಮದ ಸರಕಾರಿ ಆಸ್ಪತ್ರಗೆ ದಾಖಲಿಸಿದ್ದಾರೆ. ಒಂದರಿಂದ ಐದನೇ ತರಗತಿವತೆಗಿನ ಒಟ್ಟು 32 ಮಕ್ಕಳು ಮಂಗಳವಾರ ಶಾಲೆಗೆ ಹಾಜರಾಗುದ್ದರು. ಎಲ್ಲಾ ಮಕ್ಕಳು ಮಧ್ಯಾಹ್ನದ ಬಿಸಿಯೂಟ ಮಾಡಿದ ಬಳಿಕ ಕೆಲವರಿಗೆ ವಾಂತಿಯಾಗಿದ್ದು, ಇನ್ನು ಕೆಲವರಿಗೆ ತಲೆಸುತ್ತು ಬಂದಿದೆ. ಮಕ್ಕಳು ಬಳಲುತ್ತಿರುವುದನ್ನು ಗಮನಿಸಿದ ಪಾಲಕರು ತಕ್ಷದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಪೈಕಿ ಆರು ಮಕ್ಕಳಿಗೆ ಆರೋಗ್ಯದಲ್ಲಿ ಏರುಪೇರಾಗಿದ್ದು ಒಳ ರೋಗಿಗಳನ್ನಾಗಿ ದಾಖಲಿಸಿಕೊಂಡು ಚಿಕಿತ್ಸೆ ನೀಡುತ್ತಿದ್ದಾರೆ.
ಸ್ಥಳಕ್ಕೆ ಡಿಎಚ್ಒ ಲಿಂಗರಾಜ, ಸಹಾಯಕ ಆಯುಕ್ತ ಮಹೇಶ್ ಕುಮಾರ, ತಹಸೀಲ್ದಾರ್ ನಾಗರಾಜ್ಸೇರಿದಂತೆ ತಾಲ್ಲೂಕು ಹಂತದ ಅಧಿಕಾರಿಗಳು ಸ್ಥಳದಲ್ಲಿದ್ದಾರೆ. ಘಟನೆಗೆ ಖಚಿತ ಕಾರಣ ಏನೆಂಬುವುದು ಗೊತ್ತಾಗಿಲ್ಲ ಬಹುಷ್ಯ ಹಲ್ಲಿ ಬಿದ್ದಿರುವ ಆಹಾರ ತಿಂದು ಮಕ್ಕಳಿಗೆ ಆರೋಗ್ಯದಲ್ಲಿ ಸಮಸ್ಯೆ ಕಾಣಿಸಿಕೊಂಡಿರಬಹುದು ಎಂದು ಶಂಕಿಸಲಾಗಿದೆ.


