ಗಂಗಾವತಿ : ಎಲ್ಲಾ ಮುನಿಸು ಬದಿಗೊತ್ತಿ ಪಕ್ಷದ ಹಾಲಿ-ಮಾಜಿಗಳು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಪರವಾಗಿ ಕೆಲಸ ಮಾಡಬೇಕು. ಎಂಬ ಸಿಎಂ ಸಿದ್ದರಾಮಯ್ಯ ಕೊಪ್ಪಳ ಜಿಲ್ಲೆಯ ಕಾಂಗ್ರೆಸ್ ಪಕ್ಷದ ಹಾಲಿ-ಮಾಜಿ ನಾಯಕರಿಗೆ ಸೂಚನೆ ನೀಡಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಚುನಾವಣೆಯ ಪ್ರಚಾರಕ್ಕೆ ತೆರಳದೇ ಮುನಿಸಿಕೊಂಡಿರುವ ಗಂಗಾವತಿಯ ಮಾಜಿಸಚಿವ, ಅಲ್ಪಸಂಖ್ಯಾತರ ಸಮುದಾಯದ ಪ್ರಭಾವಿ ನಾಯಕ ಇಕ್ಬಾಲ್ ಅನ್ಸಾರಿಯನ್ನು ತಮ್ಮಲ್ಲಿಗೆ ಕರೆಯಿಸಿಕೊಂಡು ಚಚರ್ೆ ಮಾಡಿದ ಸಿಎಂ, ಮುನಿಸಿ ಮರೆತು ಚುನಾವಣೆಗೆ ಹೋಗುವಂತೆ ಸೂಚನೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಅನ್ಸಾರಿ, ಕೊಪ್ಪಳ ಲೋಕಸಭಾ ಕ್ಷೇತ್ರದ ಹಾಲಿ ಅಭ್ಯಥರ್ಿ ರಾಜಶೇಖರ್ ಹಿಟ್ನಾಳ್ ಹಾಗೂ ಕುಟುಂಬ ಕಳೆದ ವಿಧಾನಸಭಾ ಚುನಾವಣೆಯಲ್ಲಿ ತನ್ನ ವಿರುದ್ಧ ಕೆಲಸ ಮಾಡಿದ್ದರ ಪರಿಣಾಮ ನನಗೆ ಸೋಲಾಗಿದೆ ಎಂದು ದಾಖಲೆ ಸಮೇತ ವಿವರಣೆ ನೀಡಿದರು. ಕೊಪ್ಪಳದಲ್ಲಿರುವ ನಮ್ಮದೇ ಪಕ್ಷದ ಪ್ರಭಾವಿ ರಾಜಕೀಯ ಕುಟುಂಬವಾದ ಹಿಟ್ನಾಳ್ ಫ್ಯಾಮಿಲಿ ತೆರೆಯ ಮರೆಯಲ್ಲಿ ಆಟವಾಡಿದ್ದರಿಂದ ಹಾಲುಮತ ಸಮಾಜದ ಮತಗಳು ಚದುರಿ ಹೋಗಿವೆ. ಮುಸ್ಲಿಂ, ದಲಿತ, ಹಿಂದುಳಿದ ಮತ್ತು ಕುರುಬ ಸಮದಾಜದವರು ಕಾಂಗ್ರೆಸ್ ಪಕ್ಷಕ್ಕೆ ಯಾವಾಗಲೂ ಬೆಂಬಲಿಸುತ್ತಾರೆ.
ಆದರೆ ಕೊಪ್ಪಳದಿಂದ ಬಂದ ಆದೇಶದ ಹಿನ್ನೆಲೆ ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ ಹಾಲುಮತ ಸಮಾಜದ ಮತಗಳು, ಕೆಆರ್ಪಿಪಿ ಪಕ್ಷದ ರೆಡ್ಡಿಯನ್ನು ಬೆಂಬಲಿಸುವಂತಾಗಿದೆ. ಇಲ್ಲವಾಗಿದ್ದರೆ ಕೊಪ್ಪಳ ಜಿಲ್ಲೆಯಲ್ಲಿ ಕಾಂಗ್ರೆಸ್ ಪರವಾದ ಮೊದಲ ಫಲಿತಾಂಶ ನನ್ನಿಂದಲೇ ಶುರುವಾಗುತಿತ್ತು ಎಂದು ಅನ್ಸಾರಿ ನೋವು ತೋಡಿಕೊಂಡರು ಎನ್ನಲಾಗಿದೆ.
ನಾನು ಅಲ್ಪ ಸಂಖ್ಯಾತರ ಸಮುದಾಯಕ್ಕೆ ಸೇರಿದವನು ಎಂಬ ಏಕೈಕ ಕಾರಣಕ್ಕೆ ರಾಜಕಿವಾಗಿ ಏಳ್ಗೆಯಾಗದಂತೆ ನಮ್ಮದೇ ಪಕ್ಷದ ನಾಯಕರು ಅಡಡ್ಗಾಲು ಹಾಕಿದ್ದಾರೆ. ನಾನು ಕಳೆದ 30 ವರ್ಷದಿಂದ ಜಾತ್ಯತೀತ ಮುಖ್ಯವಾಗಿ ಕಾಂಗ್ರೆಸ್ ಪಕ್ಷದ ತತ್ವಸಿದ್ಧಾಂತಗಳನ್ನು ನಂಬಿಕೊಂಡು ಬಂದಿದ್ದೇನೆ ಎಂದು ಅನ್ಸಾರಿ ವಿವರಣೆ ನೀಡಿದ್ದಾರೆ ಎಂದು ಗೊತ್ತಾಗಿದೆ.
ಸಿಎಂ ಭರವಸೆ:
ಕೊಪ್ಪಳ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಗೆಲುವಿನ ಸಾಧ್ಯತೆ ಹೆಚ್ಚಿರುವ ಸುಳಿವು ಸಿಕ್ಕಿದೆ. ಇಂತಹ ಸಂದರ್ಭದಲ್ಲಿ ಪಕ್ಷದ ಎಲ್ಲಾ ನಾಯಕರು ಒಂದಾಗಿ ಕೆಲಸ ಮಾಡಿ ನಮ್ಮಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬರುವ ಕೆಲಸ ಮಾಡಬೇಕು ಎಂದು ಸಿಎಂ ಸಲಹೆ ನೀಡಿದ್ದಾರೆ. ಅಲ್ಲದೇ ಲೋಕಸಭಾ ಚುನಾವಣೆಯ ಬಳಿಕ ಸೂಕ್ತ ರಾಜಕೀಯ ಸ್ಥಾನಮಾನ ಕಲ್ಪಿಸಿಕೊಡುವುದಾಗಿ ಭರವಸೆ ನೀಡಿದ ಸಿಎಂ, ಅನ್ಸಾರಿ ಅವರ ಕೆಲಸಗಳನ್ನು ಆದ್ಯತೆಯ ಮೇರೆಗೆ ಮಾಡಿ ಕೊಡುವಂತೆ ಸ್ಥಳದಲ್ಲಿದ್ದ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಅವರಿಗೆ ಸಿಎಂ ಸೂಚನೆ ನೀಡಿದ್ದಾರೆ ಎಂದು ಗೊತ್ತಾಗಿದೆ.


