ಗಂಗಾವತಿ : ಕಾಯಕದ ಮೂಲಕವೇ ಕೈಲಾಸ ಕಾಣಬೇಕು ಎಂದು ಆದರ್ಶ ನೀಡಿದ ಬಸವಣ್ಣನವರ ತತ್ವಾದರ್ಶಗಳಿಗೆ ವಿರುದ್ಧವಾಗಿ ಇಂದು ಉಚಿತ ಭಾಗ್ಯಗಳನ್ನು ನೀಡುವ ಮೂಲಕ ಜನರನ್ನು ಪರವಾಲಂಬಿಗಳನ್ನಾಗಿ ಮಾಡಲಾಗುತ್ತಿದೆ ಎಂದು ಸಂಸದ ಕರಡಿ ಸಂಗಣ್ಣ ಪರೋಕ್ಷವಾಗಿ ಕಾಂಗ್ರೆಸ್ ಸಕರ್ಾರದ ಉಚಿತ ಭಾಗ್ಯಗಳ ವಿರುದ್ಧ ವಾಗ್ದಾಳಿ ಮಾಡಿದರು.
ನಗರದ ಚನ್ನಬಸವಸ್ವಾಮಿ ಕಲಾ ಮಂದಿರದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾದ ಕೊಪ್ಪಳ ಜಿಲ್ಲಾ ಘಟಕ ಹಮ್ಮಿಕೊಂಡಿದ್ದ ಪರೀಕ್ಷೆಗಳಲ್ಲಿ ಹೆಚ್ಚು ಅಂಕಪಡೆದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ವ್ಯಕ್ತಿ ಸೋಮಾರಿಯಾಗಬಾರದು ಎಂಬ ಉದ್ದೇಶಕ್ಕೆ ಕಾಯಕದ ಮೂಲಕ ಕೈಲಾಸ ಕಾಣಬೇಕು. ವ್ಯಕ್ತಿ ತನ್ನನ್ನು ತಾನು ಕಾಯಕದಲ್ಲಿ ತೊಡಗಿಸಿಕೊಂಡರೆ ದೇಹ ಮತ್ತು ಬುದ್ಧಿ ಎರಡೂ ಶುದ್ಧವಾಗಿರುತ್ತವೆ. ಅಲ್ಲದೇ ವ್ಯಕ್ತಿ ಸ್ವಾವಲಂಬಿ ಜೀವನ ನಡೆಸಲು ಸಾಧ್ಯವಾಗುತ್ತದೆ ಎಂಬ ಹಿನ್ನೆಲೆ ಬಸವಣ್ಣ ಕಾಯಕದ ಕಲ್ಪನೆಯನ್ನು ಸಮಾಜದಲ್ಲಿ ಬಿತ್ತಿದರು.ಆದರೆ ಇಂದು ಉಚಿತ ಕೊಡುಗೆಗಳನ್ನು ನೀಡುವ ಮೂಲಕ ಜನರನ್ನು ಪರವಾಲಂಬಿಯನ್ನಾಗಿ ಮಾಡುವ ಕೆಲಸ ಸಮಾಜದಲ್ಲಿ ನಡೆಯುತ್ತಿದೆ. ಇದು ಸ್ವಾಸ್ಥ್ಯ ಸಾಮಾಜ ನಿಮರ್ಾಣಕ್ಕೆ ಮಾರಕವಾಗಲಿದೆ ಎಂದು ಸಂಸದ ಕಳವಳ ವ್ಯಕ್ತಪಡಿಸಿದರು.
ಇಡೀ ಸಮುದಾಯಕ್ಕೆ ಅನ್ನ, ಅಕ್ಷರ, ಆಥರ್ಿಕ ಮತ್ತು ಆಧ್ಯಾತ್ಮಿಕ ಪರಿಕಲ್ಪನೆ ನೀಡಿರುವ ವೀರಶೈವ ಸಮಾಜವು, ಇತರ ಸಮುದಾಯಗಳನ್ನು ಮೇಲಕೆತ್ತುವ ಕೆಲಸ ಮಾಡುತ್ತದೆ. ಭಾರತದಲ್ಲಿ ವಿವಿಧತೆಯಲ್ಲಿ ಏಕತೆ ಕಾಣುವಂತೆ ನಮ್ಮ ಲಿಂಗಾಯತ ಸಮಾಜವೂ ಒಳಪಂಗಡಗಳು ನೂರಿದ್ದರೂ ವಿವಿಧತೆಯಲ್ಲಿ ಏಕತೆ ಕಾಣಬೇಕಿದೆ.
ಲಿಂಗವನ್ನು ಧರಿಸಿಕೊಂಡು ಲಿಂಗಾಯತ ಸಮಾಜಕ್ಕೆ ಬಂದಂತ ಇತರನ್ನು ನಾವು ಮುಕ್ತ ಮನಸ್ಸಿನಿಂದ ಸ್ವಾಗತಿಸಿ ಗೌರವಿಸಬೇಕಿದೆ. ಇದರಿಂದ ಮಾತ್ರ ಸಮಾನತೆ ಸಾಧ್ಯ. ಸಮಾನತೆ ಎಂಬುವುದು ಲಿಂಗಾಯತ ಸಮಾಜಕ್ಕೆ ಯಾರೂ ಹೇಳಿಕೊಡಬೇಕಿಲ್ಲ ಎಂದು ಸಂಸದ ಹೇಳಿದರು.


