ಖಾನಾಪೂರ : ತಾಲೂಕಿನ ನಂದಗಡ ಗ್ರಾಮ ಇತಿಹಾಸ ಪ್ರಸಿದ್ದವಾಗಿದೆ ಕ್ರಾಂತಿವೀರ ಸಂಗೋಳ್ಳಿ ರಾಯಣ್ಣನನ್ನ ಬ್ರೀಟಿಷರು ಗಲ್ಲಿಗೇರಿಸಿ ಸಮಾದಿ ಮಾಡಿದ ಸ್ಥಳ ಇಲ್ಲಿನ ಗ್ರಾಮ ಪಂಚಾಯಿತಿಯಲ್ಲಿ ಇಂದು ಅದ್ಯಕ್ಷರಾಗಿ ಶ್ರೀ ಯಲ್ಲಪ್ಪ ಗುರವರವರು ಆಯ್ಕೆಯಾದರೆ ಉಪಾಧ್ಯಕ್ಷರಾಗಿ ಶ್ರೀಮತಿ ಸಂಗೀತಾ ಗಂಗಾಧರ ಮಡ್ಡಿಮನಿಯವರು ಆಯ್ಕೆಯಾಗಿದ್ದಾರೆ
ಸಂಗೀತಾ ಮಡ್ಡಿಮನಿಯವರು ಸುಮಾರು ಮೂವತ್ತು ವರ್ಷದಿಂದ ಸಮಾಜ ಸೇವೆಯಲ್ಲಿ ತೋಡಗಿ ಸಾವಿರಾರು ಜನರಿಗೆ ಬದುಕು ಕಟ್ಟಿಕೋಟ್ಟ ಶ್ರೀ ಗಂಗಾಧರ ಮಡ್ಡಿಮನಿಯವರ ಧರ್ಮ ಪತ್ನಿ.ಗಂಗಾಧರ ಮಡ್ಡಿಮನಿಯವರು ಮೂಲತಃ ತಾಲೂಕಿನ ಮಂಗೇನಕೋಪ್ಪ ಗ್ರಾಮದವರು ಮೂರ್ತಿ ಚಿಕ್ಕದಾದರು ಕೀರ್ತಿ ದೊಡ್ಡದೆನ್ನುವ ಗಾದೆ ಮಾತಿಗೆ ಸ್ಪೂರ್ತಿಯಾದ ಇವರು ಕಿತ್ತೂರು ತಾಲೂಕಿನ ಕುಲವಳ್ಳಿ ಗ್ರಾಮ ಪಂಚಾಯಿತಿಗೆ ಸಂಭಂದಪಟ್ಟ ಸುಮಾರು ಹಳ್ಳಿಯ ಅಂತಂತ್ರ ಪರಿಸ್ಥಿತಿಯಲ್ಲಿರುವ ರೈತರಿಗೆ ಸಂಗೋಳ್ಳಿ ರಾಯಣ್ಣನ ಹಿಡಿದು ಕೋಟ್ಟಿದ್ದಕ್ಕೆ ಸಾವಿರಾರು ಎಕರೆ ಜಮಿನನ್ನ ಅನುಭವಿಸುತ್ತಿದ್ದ ಮಾಲಿಕರ ವಿರುದ್ದ ತೋಡೆತಟ್ಟಿ ಹೋರಾಡಿ ಅಲ್ಲಿ ವಾಸಿಸುವ ಸಾವಿರಾರು ರೈತ ಕುಟುಂಬಗಳ ಬದುಕು ಕಟ್ಟಿಕೋಟ್ಟು ನಂತರ ಖಾನಾಪೂರ ತಾಲೂಕಿನಲ್ಲಿ ಜಾಗೃತಿ ಎಂಬ ಸಂಸ್ಥೆಯನ್ನ ಹುಟ್ಟುಹಾಕಿ ಸಾಕಷ್ಟು ಜನಪರ ಸಮಾಜಮುಖಿ ಕೆಲಸ ಮಾಡುತ್ತ ಬಂದಿದ್ದಾರೆ
ಇವರ ಧರ್ಮ ಪತ್ನಿಯ ತವರು ಮನೆಯಲ್ಲಿ ಇದ್ದುಕೊಂಡು ಅಪಾರ ಅಬಿಮಾನಿಗಳನ್ನೂ ಹೊಂದಿ ಜನಗಳ ಒತ್ತಾಯದ ಮೆರೆಗೆ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ತಮ್ಮ ಪತ್ನಿಯನ್ನ ಗೆಲ್ಲಿಸಿ ಸದಸ್ಯರನ್ನ ಮಾಡಿದ್ದರು ಈಗ ಇವರ ಕಾರ್ಯ ವೈಕರಿಯನ್ನ ಮೆಚ್ಚಿ ಎಲ್ಲಾ ಸದಸ್ಯರ ಸರ್ವಾನುಮತದಿಂದ ಇಂದು ಉಪಾಧ್ಯಕ್ಷ ಸ್ಥಾನವನ್ನ ಅಲಂಕರಿಸಿದ್ದಾರೆ ಈ ಸಂಧರ್ಭದಲ್ಲಿ ಎಲ್ಲಾ ಸದಸ್ಯರು ಹಾಗೂ ಪಂಚಾಯಿತಿ ಸಿಬ್ಬಂದಿಗಳು ಉಪಸ್ಥಿತರಿದ್ದರು


