ಕೋಲಾರ ; ಸಮೀಕ್ಷೆಗೆ ತೆರಳಿ ನಾಪತ್ತೆಯಾಗಿದ್ದ ಶಿಕ್ಷಕಿ ಶವವಾಗಿ ಪತ್ತೆಯಾದ ಘಟನೆ ಕೋಲಾರ ಜಿಲ್ಲೆಯ ಕೆಜಿಎಫ್ ತಾಲ್ಲೂಕಿನ ಅಯ್ಪಲ್ಲಿ ಕೆರೆಯ ಬಳಿ ನಡೆದಿದೆ.
ಕೋಲಾರ ತಾಲ್ಲೂಕು ಕೆ.ಬಿ.ಹೊಸಹಳ್ಳಿ ಶಾಲಾ ಶಿಕ್ಷಕಿ.
ಮೃತಪಟ್ಟ ಶಿಕ್ಷಕಿಯನ್ನು ಅಖ್ತರಿ ಬೇಗಂ (53) ಎಂದು ತಿಳಿದುಬಂದಿದೆ. ಇವರು ಕೋಲಾರ ತಾಲ್ಲೂಕು ನರಸಾಪುರ ಗ್ರಾಮದಲ್ಲಿ ಸಮೀಕ್ಷೆ ಮುಗಿಸಿ ನಾಪತ್ತೆಯಾಗಿದ್ದರು.
ಎರಡು ದಿನಗಳ ಹಿಂದೆ ನಾಪತ್ತೆಯಾಗಿದ್ದ ಇವರ ಮೃತದೇಹ ಕೆರೆಯಲ್ಲಿ ಪತ್ತೆಯಾಗಿದೆ. ಕೋಲಾರ ನಗರದ ಮಹಾಲಕ್ಷ್ಮಿ ಬಡಾವಣೆಯ ನಿವಾಸಿಯಾದ ಇವರು ಮನೆಯಲ್ಲಿ ಮೊಬೈಲ್, ಒಡವೆ ಚಿಚ್ಚಿಟ್ಟು ಕೆಲಸದ ನಿಮಿತ್ತ ಹೋಗಿದ್ದರು. ಸ್ಥಳಕ್ಕೆ ಕೋಲಾರ ನಗರ ಠಾಣಾ ಪೊಲೀಸರು ಬೇಟಿನೀಡಿ ಪರಿಶೀಲನೆ ನಡೆಸಿದ್ದಾರೆ.