Thursday, July 23, 2026
Homeರಾಜ್ಯಕೊಪ್ಪಳ : ತುಂಗಭದ್ರಾ ಡ್ಯಾಂನ 19ನೇ ಕ್ರಸ್ಟ್ ಗೇಟ್‌ ಚೈನ್‌ ಕಟ್‌ ಬಳಿಕ ಇತರ ಭಾಗಗಳಲ್ಲಿ...

ಕೊಪ್ಪಳ : ತುಂಗಭದ್ರಾ ಡ್ಯಾಂನ 19ನೇ ಕ್ರಸ್ಟ್ ಗೇಟ್‌ ಚೈನ್‌ ಕಟ್‌ ಬಳಿಕ ಇತರ ಭಾಗಗಳಲ್ಲಿ ಬಿರುಕು,ಭಯಭೀತರಾದ ಜನ .!

ಕೊಪ್ಪಳ : ರಾಯಚೂರು ಬಳ್ಳಾರಿ ಹಾಗೂ ಆಂಧ್ರಪ್ರದೇಶದ ಕೆಳಭಾಗದ ಜೀವನಾಡಿಯಾಗಿರುವ ತುಂಗಭದ್ರಾ ನದಿಗೆ ಅಡ್ಡಲಾಗಿ ಕಟ್ಟಿರುವ ಆಣೆಕಟ್ಟಿನ ಗೇಟ್ ನಂಬರ್ 19 ಚೈನ ಲಿಂಕ್ ಕಳಚಿ ಹಾನಿಗೊಳಗಾಗಿದ್ದು ಸಾರ್ವಜನಿಕರಲ್ಲಿ ಆತಂಕ ಸೃಷ್ಟಿ ಮಾಡಿದ್ದು ಅಂತೂ ನಿಜ ಆದರೆ ಇದೀಗ ಜಲಾಶಯಯ ಮೇಲ್ಭಾಗದಲ್ಲೂ ಹಲವೆಡೆ ಬಿರುಕುಗಳು ಕಾಣಿಸಿಕೊಂಡಿವೆ ಮತ್ತು ಕ್ರೆಸ್ಟ್ ಗೇಟ್ ಗಳನ್ನು ಅಳವಡಿಸಿರುವ ಜಾಗಗಳಲ್ಲೂ ಸಣ್ಣ ಸಣ್ಣ ಬಿರುಕುಗಳು ಗೋಚರಿಸುತ್ತಿವೆ ಎಂದು tv9 ವರದಿಮಾಡಿದೆ.

ಕೊಪ್ಪಳ ತಾಲೂಕಿನ ಮುನಿರಾಬಾದ್ ಹತ್ತಿರ ತುಂಗಭದ್ರಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಅಣೆಕಟ್ಟಿನ ಗೇಟ್ ನ ಕಟ್ ಆಗಿದ್ದು ಕೊಪ್ಪಳ ವಿಧಾನಸಭಾ ಕ್ಷೇತ್ರದ ಶಾಸಕ ರಾಘವೇಂದ್ರ ಹಿಟ್ನಾಳ ಆಣೆಕಟ್ಟೆ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದರು. ಆದರೆ ಜಲಾಶಯದ ನಿರ್ವಹಣೆ ಟಿ ಬಿ ಡ್ಯಾಂ ನಿಗಮದ ಅಧಿಕಾರಿಗಳ ಜವಾಬ್ದಾರಿಯಾಗಿರುತ್ತದೆ ಅವರು ಬೇಜವಾಬ್ದಾರಿಯ ಉತ್ತರಗಳನ್ನು ನೀಡುತ್ತಿದ್ದಾರಂತೆ. ಬೇಸಿಗೆ ಸಮಯದಲ್ಲಿ ದುರಸ್ತಿ ಕಾರ್ಯ ಮಾಡಲಾಗಿತ್ತು ಅಂತ ಅವರು ಹೇಳುವುದಾದರೆ ಬಿರುಕುಗಳು ಕಾಣಿಸುತ್ತಿರುವುದು ಯಾಕೆ? ಸರ್ಕಾರ ಮಧ್ಯಸ್ಥಿಕೆ ವಹಿಸುವ ಅವಶ್ಯಕತೆ ಸ್ಪಷ್ಟವಾಗಿ ಕಾಣುತ್ತಿದೆ, ಮತ್ತಷ್ಟು ಅನಾಹುತಗಳು ಜರುಗುವ ಮೊದಲು ಸಂಬಂಧಪಟ್ಟವರೆಲ್ಲ ಎಚ್ಚೆತ್ತುಕೊಳ್ಳಬೇಕು ಎಂದು ಸ್ಥಳಕ್ಕೆ ತೆರಳಿದ ವರದಿಗಾರರ ಮಾತು.

ಒಟ್ಟಿನಲ್ಲಿ ಹಲವು ಜಿಲ್ಲೆಗಳಲ್ಲಿ ಸಾಕಷ್ಟು ಭೀತಿಯನ್ನು ಮೂಡಿಸಿರುವ ವಿಷಯ ರಾಜ್ಯದೆಲ್ಲೆಡೆ ಚರ್ಚೆಯಾಗುತ್ತಿದ್ದು ಜಲಾಶಯಕ್ಕೆ ವಸ್ತುಸ್ಥಿತಿಯ ವರದಿ ಮಾಡಲು ತೆರಳಿದ್ದ ಸಂದರ್ಭದಲ್ಲಿ ಗಾಬರಿ ಹುಟ್ಟಿಸುವ ಮತ್ತಷ್ಟು ಸಂಗತಿಗಳು ಬಯಲಿಗೆ ಬಂದಿವೆ ಎಂದು ತಿಳಿದುಬಂದಿದೆ. ಈ ಬಗ್ಗೆ ಸರಕಾರ ಎಚ್ಚೆತ್ತುಕೊಂಡು ಮುಂದೆ ನಡೆಯುವ ಅನಾಹುತಗಳು ಜರುಗುವ ಮೊದಲು ಸರಿಯಾದ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯ ನಿವಾಸಿಗಳು ಆಗ್ರಹಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular