Saturday, November 23, 2024
Flats for sale
Homeರಾಜಕೀಯಕೊಪ್ಪಳ : ಗ್ಯಾರಂಟಿ ಯೋಜನೆ ನಮ್ಮ ಕೈಯನ್ನ ಕಟ್ಟಾಕಿಬಿಟ್ಟಿದೆ, ಸರ್ಕಾರದಲ್ಲಿ ಅಭಿವೃದ್ಧಿಗೆ ಹಣ ಇಲ್ಲ :...

ಕೊಪ್ಪಳ : ಗ್ಯಾರಂಟಿ ಯೋಜನೆ ನಮ್ಮ ಕೈಯನ್ನ ಕಟ್ಟಾಕಿಬಿಟ್ಟಿದೆ, ಸರ್ಕಾರದಲ್ಲಿ ಅಭಿವೃದ್ಧಿಗೆ ಹಣ ಇಲ್ಲ : ಬಸವರಾಜ ರಾಯರೆಡ್ಡಿ.

ಕೊಪ್ಪಳ : ಗ್ಯಾರಂಟಿ ಯೋಜನೆಯ ಮೂಲಕ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ಸರಕಾರ ಇದೀಗ ಆರ್ಥಿಕ ಹೊಡೆತಕ್ಕೆ ಸಿಲುಕಿ ಇಕ್ಕಟ್ಟಿನಲ್ಲಿ ಸಿಲುಕಿದೆ ಈ ಕಡೆ ಕ್ಷೇತ್ರದ ಅಭಿವೃದ್ಧಿ ಹಣ ಇಲ್ಲದೆ ಶಾಸಕರು ತಲೆಗೆ ಕೈಯಿಟ್ಟುಕೊಂಡಿದ್ದಾರೆ.

ಕ್ಷೇತ್ರದ ಶಾಸಕರು ಅವರವರ ಕ್ಷೇತ್ರಗಳಲ್ಲಿ ಅಭಿವೃದ್ಧಿ ಮಾಡೋಕೆ ಕೇಳ್ತಾಯಿದ್ದಾರೆ ಆದ್ರೆ ಹಣ ಇಲ್ಲ ನಮ್ಮ ಕ್ಷೇತ್ರಕ್ಕೆ ಮಾತ್ರ ಹಣ ಬಂದಿದೆ ಗ್ಯಾರಂಟಿ ಯೋಜನೆ ನಮ್ಮನ್ನ ಮುಚ್ಚಿ ಬಿಟ್ಟಿದೆ ಯಲಬುರ್ಗಾ ತಾಲೂಕಿನ ಮಂಗಳೂರು ಗ್ರಾಮದಲ್ಲಿ ಬಸವರಾಜ ರಾಯರೆಡ್ಡಿ ಹೇಳಿದ್ದಾರೆ.

ರಾಜ್ಯದಲ್ಲಿ ಸದ್ಯ ಸಿಎಂ ಸಿದ್ದರಾಮಯ್ಯ ಸರ್ಕಾರ ೪.೧೦ ಕೋಟಿ ಜನರಿಗೆ ಅಂದರೆ ಶೇ.೮೫.೩ರಷ್ಟು ಜನರಿಗೆ ಆಹಾರ ಧಾನ್ಯ, ಗೃಹಲಕ್ಷ್ಮೀ ಯೋಜನೆಯಲ್ಲಿ ೧.೨೯ ಕೋಟಿ ಮಹಿಳೆಯರಿಗೆ ₹೨೫೦೦ ಕೋಟಿ ಹಣ, ಶಕ್ತಿ ಯೋಜನೆಯಲ್ಲಿ ಮಹಿಳೆಯರಿಗೆ ಉಚಿತ ಬಸ್ ವ್ಯವಸ್ಥೆ ಇದ್ದು, ನಿತ್ಯ ೬೩ ಲಕ್ಷ ಜನ ಪ್ರಯಾಣ ಮಾಡುತ್ತಿದ್ದಾರೆ. ಉಚಿತ ವಿದ್ಯುತ್‌ಗಾಗಿ ₹೧.೨೪ ಕೋಟಿ ನೀಡಿದ್ದೇವೆ. ವರ್ಷಕ್ಕೆ ₹65 ಸಾವಿರ ಕೋಟಿ ಗ್ಯಾರಂಟಿ ಯೋಜನೆಗೆ ಭರಿಸಲಾಗುತ್ತಿದೆ. ₹೧೮ ಸಾವಿರ ಕೋಟಿ ರೈತರ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ನೀಡಲು ಬಳಕೆ ಮಾಡಲಾಗುತ್ತಿದೆ. ಶಾಲಾ ಮಕ್ಕಳಿಗೆ ಶೂ, ಬಟ್ಟೆ, ಬಿಸಿಯೂಟ, ಪುಸ್ತಕ ವಿತರಣೆ ಮಾಡಿದ್ದೇವೆ ಎಂದರು.

970 ಕೋಟಿ ಮೊತ್ತದ ಕೆರೆ ನಿರ್ಮಾಣಕ್ಕೂ ಹಣವಿಲ್ಲ ನಾನು ಸಿ ಎಂ ಆರ್ಥಿಕ ಸಲಹೆಗಾರನಾಗಿದ್ದಿನಿ, ದಿನನಿತ್ಯ ಅಲ್ಲಿರೋದಕ್ಕೆ ನನ್ನ ಕ್ಷೇತ್ರಕ್ಕೆ ಹಣ ಬಂದಿದೆ ಇಲ್ಲ ಅಂದ್ರೆ ಯಾವುದೆ ಕಾರಣಕ್ಕೂ ಹಣ ಬರ್ತಾಯಿರಲಿಲ್ಲ,ಇದು ಒಂದೇ ಕೆಲಸ ಆಗಿರೋದು ಈ ರಾಜ್ಯದಲ್ಲಿ ಯಾಕಂದ್ರೇ ಗ್ಯಾರಂಟಿನೇ ನಮ್ಮಣ್ಣ ಮುಚ್ಚಿ ಬಿಟ್ಟಿದೆ,60, 65 ಸಾವಿರ ಕೋಟಿ ಹಣ ಕೊಡಬೇಕು ನಾವು, ಹಣ ಕೊಡೊದು ಎಷ್ಟು ತ್ರಾಸ್ ಇದೆ ಅನ್ನೋದು ನನಗೆ ಗೊತ್ತಿದೆ ಹಣಕಾಸಿನ ಆಂತರಿಕ ವಿಚಾರ, ನನಗೆ ಮಾತ್ರ ಗೊತ್ತು ಎಂದು ರಾಯರೆಡ್ಡಿ ಸಿ ಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಹೇಳಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular