Thursday, November 21, 2024
Flats for sale
Homeದೇಶಕೊಟ್ಟಾಯಂ : ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ಬರುವ ಎಲ್ಲಾ ಭಕ್ತರಿಗೆ ಅವಕಾಶ,ಸ್ಪಾಟ್ ಬುಕ್ಕಿಂಗ್ ಇಲ್ಲ:...

ಕೊಟ್ಟಾಯಂ : ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ಬರುವ ಎಲ್ಲಾ ಭಕ್ತರಿಗೆ ಅವಕಾಶ,ಸ್ಪಾಟ್ ಬುಕ್ಕಿಂಗ್ ಇಲ್ಲ: ದೇವಸ್ವಂ ಸಚಿವ ವಿ ಎನ್ ವಾಸವನ್..!

ಕೊಟ್ಟಾಯಂ : ಮಂಡಲಪೂಜೆ ಹಾಗೂ ಮಕರವಿಳಕ್ಕು ಯತ್ರಾ ಸಮಯದಲ್ಲಿ ಅಯ್ಯಪ್ಪ ದರ್ಶನ ಪಡೆಯಲು ಬರುವ ಎಲ್ಲರಿಗೂ ದರ್ಶನಾವಕಾಶ ನೀಡಲಾಗುವುದು ಎಂದು ಕೇರಳ ದೇಗುಲ ಸಚಿವ ವಿ.ಎನ್‌.ವಾಸವನ್‌ ಅವರು ಭಾನುವಾರ ಸ್ಪಷ್ಪಪಡಿಸಿದ್ದಾರೆ.

ಪಂದಳಂ ಅರಮನೆಯ ನೇತೃತ್ವದಲ್ಲಿ ಅಯ್ಯಪ್ಪ ಭಕ್ತರುಹಾಗೂ ಹಲವಾರು ಸಂಘಟನೆಗಳು ಪಂದಳಂನಲ್ಲಿ ಸಭೆ ನಡೆಸಿ ಅಕ್ಟೋಬರ್ 26 ರಂದು ಸರ್ಕಾರದ ನಿರ್ಧಾರವನ್ನು ವಿರೋಧಿಸಿ ಪ್ರತಿಭಟಿಸುವ ಹಿನ್ನೆಲೆ ಸಚಿವರು ಈ ನಿರ್ಧಾರ ತೆಗೆದುಕೊಂಡಿದ್ದಾರೆ .ಆನ್‌ಲೈನ್‌ ಮೂಲಕ ಟಿಕೆಟ್‌ ಕಾದಿರಿಸಿದರಷ್ಟೇ ಅವಕಾಶ ನೀಡುವ ಸರ್ಕಾರ ನೀತಿಯನ್ನು ಹಿಂಪಡೆಯದಿದ್ದರೆ ಹೋರಾಟ ನಡೆಸುವುದಾಗಿ ಬಿಜೆಪಿ ಹೇಳಿತ್ತು. ಅದರ ಬೆನ್ನಲ್ಲೇ ಅವರು ಸ್ಪಷ್ಟನೆ ನೀಡಿದ್ದಾರೆ. ‘ಸ್ಪಾಟ್‌ ಬುಕಿಂಗ್‌’ಗೆ ಅವಕಾಶ ನೀಡುವುದಿಲ್ಲ. ಆದರೆ, ಯಾತ್ರಿಕರ ವಿಶ್ರಾಂತಿ ಹಾಗೂ ನಿರೀಕ್ಷಣೆಗಾಗಿ ತೆರೆಯಲಾಗುವ ಅಕ್ಷಯ ಕೇಂದ್ರಗಳಲ್ಲಿ ಅವರು ಟಿಕೆಟ್‌ ಕಾದಿರಿಸಲು ಅವಕಾಶ ನೀಡಲಾಗುವುದು. ಎಲ್ಲ ಸಂಪ್ರದಾಯ ಪಾಲಿಸಿ ಬರುವ ಯಾತ್ರಿಕರಿಗೆ ದರ್ಶನ ಅವಕಾಶ ನಿರಾಕರಿಸುವುದಿಲ್ಲ. ದಿನವೊಂದಕ್ಕೆ 80 ಸಾವಿರ ಮಂದಿಗಷ್ಟೇ ದರ್ಶನಾವಕಾಶವಿರಲಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಅಗತ್ಯವಿದ್ದರೆ, ಭಕ್ತರು ತಮ್ಮ ಸ್ಲಾಟ್‌ಗಳನ್ನು ಕಾಯ್ದಿರಿಸಲು ಸಹಾಯ ಮಾಡಲು ‘ಎಡತಾವಲಮ್’ಗಳಲ್ಲಿ (ಸ್ಟಾಪ್-ಓವರ್ ಪಾಯಿಂಟ್‌ಗಳು) ಅಕ್ಷಯ ಕೇಂದ್ರಗಳನ್ನು ಸ್ಥಾಪಿಸಲಾಗುವುದು, ”ಎಂದು ಅವರು ಭಾನುವಾರ ಕೊಟ್ಟಾಯಂನಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಕಳೆದ ವರ್ಷ ಏಕಾಏಕಿ ಲಕ್ಷಾಂತರ ಭಕ್ತರು ಅಯ್ಯಪ್ಪ ದರ್ಶನಕ್ಕೆ ಆಗಮಿಸಿದ್ದರಿಂದ ಮತ್ತು ಅದನ್ನು ನಿರ್ವಹಿಸಲು ಸರ್ಕಾರ ಸೂಕ್ತ ವ್ಯವಸ್ಥೆ ಮಾಡಿ ಕೊಂಡಿರದ ಕಾರಣ ಭಾರೀ ಅವ್ಯವಸ್ಥೆ ಉಂಟಾಗಿತ್ತು. ಹೀಗಾಗಿ ಪ್ರಸಿದ್ದ ಶಬರಿಮಲೆ ದೇಗುಲದ ವಾರ್ಷಿಕ ಮಂಡಲ೦- ಮಕರವಿಳಕ್ಕು ಯಾತ್ರೆಗೆ ಕ್ಷಣಗಣನೆ ಆರಂಭವಾಗಿರುವ ಬೆನ್ನಲ್ಲೇ, ಈ ವರ್ಷ ಆನ್‌ಲೈನ್‌ನಲ್ಲಿ ಬುಕ್ ಮಾಡಿದವರಿಗೆ ಮಾತ್ರ ಶಬರಿಮಲೆಗೆ ಪ್ರವೇಶ ನೀಡಲು ಕೇರಳ ಸರ್ಕಾರ ನಿರ್ಧರಿಸಿತ್ತು. ಆದರೆ ಇದಕ್ಕೆ ವಿರೋಧ ವ್ಯಕ್ತವಾಗಿತ್ತು. ಹೀಗಾಗಿ ಎಲ್ಲರಿಗೂ ಅವಕಾಶ ನೀಡಲು ಸರ್ಕಾರ ನಿರ್ಧರಿಸಿದೆ ಎಂದು ತಿಳಿದುಬಂದಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular