Friday, March 13, 2026
Flats for sale
Homeರಾಜ್ಯಕುರುಗೋಡು : ಸಿದ್ದು, ಡಿಕೆಶಿಗೆ ತೆಲಂಗಾಣ ಮತ್ತು ರಾಜಸ್ಥಾನ ಚುನಾವಣೆ ಚಿಂತೆ ರೈತರ ಬಗ್ಗೆ ಕಾಳಜಿ...

ಕುರುಗೋಡು : ಸಿದ್ದು, ಡಿಕೆಶಿಗೆ ತೆಲಂಗಾಣ ಮತ್ತು ರಾಜಸ್ಥಾನ ಚುನಾವಣೆ ಚಿಂತೆ ರೈತರ ಬಗ್ಗೆ ಕಾಳಜಿ ಇಲ್ಲ : ರಾಜುನಾಯಕ್.

ಕುರುಗೋಡು : ಆಡಳಿತಾರೂಡ ಕಾಂಗ್ರೆಸ್ ಸರ್ಕಾರದಲ್ಲಿ ಮುಖ್ಯಮಂತ್ರಿ ಹುದ್ದೆಗಾಗಿ ನಾನಾ ನೀನಾ ಎಂಬುದರಲ್ಲಿಯೇ ದೊಡ್ಡ ಚರ್ಚೆ ನಡೆಯುತ್ತಿದೆ. ಆದರೆ ರಾಜ್ಯದಲ್ಲಿ ತೀವ್ರ ಬರಗಾಲ ಎದುರಾಗಿ ಜನ ತತ್ತರಿಸಿ ಹೋಗುತ್ತಿದ್ದಾರೆ. ರೈತರ ಬಗ್ಗೆ ಕಾಳಜಿ ಮಾಡುವುದನ್ನು ಬಿಟ್ಟು ತಮ್ಮ ಒಳ ರಾಜಕೀಯದಲ್ಲಿ ಜನರ ಸಮಸ್ಯೆ ಆಲಿಸುವುದನ್ನು ಮರೆತುಹೋಗುತ್ತಿದ್ದಾರೆ ಎಂದು ಕಂಪ್ಲಿ ಕ್ಷೇತ್ರದ ಪರಾಜಿತ ಜೆಡಿಎಸ್ ಆಭ್ಯರ್ಥಿ ಹಾಗೂ ಮುಖಂಡ ರಾಜುನಾಯಕ್ ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದರು.

ತಾಲೂಕಿನ ಬೈಲೂರು ಗ್ರಾಮದಲ್ಲಿ ಬುಧುವಾರ ಜೆಡಿಎಸ್ ಪಕ್ಷದ ವತಿಯಿಂದ ಹಮ್ಮಿಕೊಂಡ ಬರ ಅಧ್ಯಯನ ತಂಡ ಮಳೆ ಇಲ್ಲದೆ ಹಾನಿಯಾಗಿರುವ ವಿವಿಧ ಬೆಳೆಗಳನ್ನು ವೀಕ್ಷಣೆ ಮಾಡಿ ಮಾತನಾಡಿದ ಅವರು, ತೆಲಂಗಾಣ ಮತ್ತು ರಾಜಸ್ಥಾನ ಚುನಾವಣೆ ಗೆ ಆದ್ಯತೆ ನೀಡುತ್ತಿದ್ದಾರೆ ಹೊರೆತು ರೈತರ ಬಗ್ಗೆ ಕಾಳಜಿ ವಹಿಸುತ್ತಿಲ್ಲ. ಬೈಲೂರು ಗ್ರಾಮದಲ್ಲಿ 2500 ಹೇಕ್ಟರ್ ನಷ್ಟು ಹಾನಿಯಾಗಿದೆ ಅಲ್ಲದೆ ಮೆಣಿಸಿನಕಾಯಿ, ಭತ್ತ, ಜೋಳ, ಮೆಕ್ಕೆಜೋಳ ವಿವಿಧ ಬೆಳೆಗಳು ಸಂಪೂರ್ಣ ನೀರಿಲ್ಲದೆ ಬರುಡವಾಗಿದೆ ಆದ್ದರಿಂದ ಮೆಣಿಸಿನಕಾಯಿ ಬೆಳೆ ನಷ್ಟಕ್ಕೆ 1 ಲಕ್ಷ ನೀಡಬೇಕು ಮತ್ತು ಮೆಕ್ಕೆಜೋಳ, ಜೋಳ, ಭತ್ತ ಕ್ಕೆ 25 ಸಾವಿರ ನೀಡಬೇಕು ಜೊತೆಗೆ ಬರ ಪರಿಹಾರ ಕೂಡ ಒದಗಿಸಬೇಕು ಇನ್ನೂ ಬೆಳೆಗೆ ವ್ಯಯಿಸಿದ ಸಾಲವನ್ನು ಮನ್ನಾ ಮಾಡಬೇಕು ಎಂದು ರಾಜ್ಯ ಸರಕಾರಕ್ಕೆ ಆಗ್ರಹಿಸಿದರು.ಬಿಜೆಪಿ ಸರ್ಕಾರದ ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ರಾಜ್ಯಕ್ಕೆ ಇಲ್ಲಿಯವರಿಗೆ 13 ಸಾವಿರ ಕೋಟಿ ರೂ ಹಣ ಬಂದಿದೆ. ಇಂತಹ ಸಂದರ್ಭದಲ್ಲಿ ಕೇಂದ್ರದ ಮೇಲೆ ಗೂಭೆ ಕುಡಿಸುವುದನ್ನು ಬಿಟ್ಟು ಜನರ ಸಮಸ್ಯೆಗೆ ಸ್ಪಂದಿಸಬೇಕು ಎಂದು ಒತ್ತಾಯಿಸಿದರು.

ಪ್ರಸಕ್ತ ಸಾಲಿನಲ್ಲಿ ತೀವ್ರ ಬರಗಾಲ ಎದುರಾಗಿ ರೈತರು ಸಂಕಷ್ಟದ ಸ್ಥಿತಿಯಲ್ಲಿ ಇದ್ದಾರೆ.ಕಂಪ್ಲಿ ಕ್ಷೇತ್ರ ಕುರುಗೋಡು ತಾಲೂಕನ್ನು ಬರಗಾಲ ಬರಪಿಡಿತ ಪ್ರದೇಶ ಎಂದು ಘೋಷಣೆ ಮಾಡಿದ್ದಾರೆ. ಆದರೂ ಜಿಲ್ಲಾ ಉಸ್ತುವಾರಿ ಸಚಿವರು ರೈತರ ಕಷ್ಟ ಹೈಡ್ರಾಮ ಸಮೀಕ್ಷೆ ನೆಡೆಸಿದ್ದು,ಕಂದಾಯ ಮತ್ತು ಕೃಷಿ ಸಮರ್ಪಕವಾಗಿ ರಾಜ್ಯ ಸರ್ಕಾರ ರೈತರ ಬೆಳೆಗಳನ್ನು ಸಮೀಕ್ಷೆ ಮಾಡಿ ಸೂಕ್ತ ಪರಿಹಾರವನ್ನು ಕೂಡಲೇ ಒದಗಿಸಬೇಕು ಎಂದರು.

ನಂತರ ಕಮ್ಮಾರಚೇಡು ಕಲ್ಯಾಣ ಶ್ರೀಗಳು ಮಾತನಾಡಿ, ಇತರದ ಬರಗಾಲ ರೈತರನ್ನು ಬೆನ್ನೆತ್ತಿದ್ದು ಇದೆ ಮಾದಲು, ನೀರಿಲ್ಲದೇ ಕಂಪ್ಲಿ ಮತ್ತು ಕುರುಗೋಡು ಕ್ಷೇತ್ರದಲ್ಲಿ ಬಿತ್ತಿದ ಬೆಳೆಗಳು ಸಂಪೂರ್ಣ ಒಣಗಿ ಹೋಗಿವೆ ಇದರಿಂದ ರೈತರ ತುಂಬಾ ನಷ್ಟಕ್ಕೆ ಹಿಡಗಿದ್ದಾರೆ ಆದ್ದರಿಂದ ಸರಕಾರಗಳು ರೈತರ ಕಷ್ಟಕ್ಕೆ ನೆರವು ಆಗಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡ ರಾಜುನಾಯಕ್, ಕಮ್ಮಾರಚೇಡು ಕಲ್ಯಾಣ ಶ್ರೀಗಳು, ಮೇಘರಾಜು, ತಾಯಪ್ಪ,ಮಲ್ಲಿಕಾರ್ಜುನ, ನಾಗರಾಜು, ಹನುಮಂತ, ವೀರೇಶ್ ಸೇರಿ ರೈತ ಮುಖಂಡರು ಇದ್ದರು

RELATED ARTICLES

LEAVE A REPLY

Please enter your comment!
Please enter your name here

Most Popular