ಕುರುಗೋಡು : ಕುರುಗೋಡು ತಾಲೂಕಿನ ಗುತ್ತಿಗನೂರು ಗ್ರಾಮದದಿಂದ ಬಾಗಲಕೋಟೆ ಜಿಲ್ಲೆಗೆ ಭತ್ತದ ಹುಲ್ಲು ಸಾಗಾಣಿಕೆ ಮಾಡುತಿದ್ದ ಲಾರಿಗೆ ಗುತ್ತಿಗನೂರು ಗ್ರಾಮದ ಹೃದಯ ಭಾಗದಲ್ಲಿ ವಿದ್ಯುತ್ ತಂತಿಗಳ ಸ್ಪರ್ಶದಿಂದ ಏಕಾಏಕಿ ಲಾರಿನ ಲೋಡ್ ಭತ್ತದ ಹುಲ್ಲಿನ ಭಣವೆಗೆ ಬೆಂಕಿ ತಗಲಿ ಕಾರಣ ಹೊತ್ತಿಉರಿದ ಘಟನೆ ನಡೆದಿದೆ.
ಈ ವೇಳೆ ಸಮಯ ಪ್ರಜ್ಞೆ ವಹಿಸಿದ ಲಾರಿ ಚಾಲಕ ಗ್ರಾಮದ ಹೊರ ಹೊಲಯದಲ್ಲಿ ಗ್ರಾಮದ ನಡುವೆ ದೈರ್ಯದಿಂದ ಬೆಂಕಿ ಹತ್ತಿರದ ಲಾರಿಯ ಜೊತೆ ಚಾಲಕ ಸಾಗಿದ್ದು ಗ್ರಾಮದಲ್ಲಿ ಇರುವ ರಸ್ತೆಯ ಪಕ್ಕದಲ್ಲಿ ಹೆಚ್ಚಿನ ಅನಾಹುತ ತಡೆಗೆ ಜಾಗೃತಿ ವಹಿಸಿ ಲಾರಿಯನ್ನು ಬದಿಗೆ ಕೊಂಡೊಯ್ದು ನಿಲ್ಲಿಸಿದ್ದಾರೆ.
ಲಾರಿ ಚಾಲಕನ ಸಮಯ ಪ್ರಜ್ಞೆಗೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ ಎನ್ಮಲಾಗಿದೆ . ನಂತರ ಕುರುಗೋಡು ಅಗ್ನಿಶಾಮಕ ದಳ ಬೆಂಕಿ ಸ್ಥಳಕ್ಕೆ ಧಾವಿಸಿದ್ದು ಬೆಂಕಿಯನ್ನು ನಿಂದಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಅಲ್ಲಿನ ಪ್ರತ್ಯಕ್ಷ ಗ್ರಾಮದ ಮಲ್ಲಿಗೌಡ ತಿಳಿಸಿದ್ದಾರೆ.


