ಕುಂದಾಪುರ : ಕುಂದಾಪುರ ತಾಲೂಕಿನ ಅಜ್ರಿಯ ಯುವಕನೊಬ್ಬ ಜರ್ಮನ್ ಯುವತಿಯೊಂದಿಗೆ ಹಿಂದೂ ಸಂಪ್ರದಾಯದಂತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾನೆ.
ಜನವರಿ 1 ರಂದು ಸಿದ್ದಾಪುರ ಬಳಿಯ ಚಿತ್ತೇರಿ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನದಲ್ಲಿ ಕುಟುಂಬಸ್ಥರು ಹಾಗೂ ಎರಡೂ ಕಡೆಯ ಬಂಧುಗಳ ಸಮ್ಮುಖದಲ್ಲಿ ವಿವಾಹ ಸಮಾರಂಭ ನೆರವೇರಿತು.
ಅಜ್ರಿಯ ಕರಿಮನೆ ಸುವರ್ಣ ಮತ್ತು ಪಂಜು ಪೂಜಾರಿ ದಂಪತಿಯ ಪುತ್ರ ಚಂದನ್ ಜರ್ಮನ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ವೃತ್ತಿಯಲ್ಲಿ ಶಿಕ್ಷಕಿಯಾಗಿದ್ದ ಕ್ಯಾರಿನ್ ಮತ್ತು ಅವನ ನಡುವೆ ಪ್ರೀತಿ ಅರಳಿತು. ಉಭಯ ಕುಟುಂಬಗಳು ಒಪ್ಪಿಗೆ ಸೂಚಿಸಿದ ನಂತರ ಕುಂದಾಪುರದಲ್ಲಿ ವಿವಾಹ ನಡೆದಿದ್ದು, ಸ್ನೇಹಿತರು ಮತ್ತು ಬಂಧುಗಳು ನವದಂಪತಿಗಳಿಗೆ ಆಶೀರ್ವದಿಸಿದರು.


