ಕಾರವಾರ : ರಾಜ್ಯದಲ್ಲಿ ಆಡಳಿತಾರೂಢ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ನಂತರ ಮಂಡ್ಯ ಕಾರವಾರ ದಲ್ಲಿ ಹಾರಿಸಿದ ಹನುಮಧ್ವಜದ ಕಟ್ಟೆಯನ್ನು ಹೊಡೆದು ತೆರವು ಮಾಡಿತ್ತು ಇದಕ್ಕೆ ಸ್ಥಳೀಯ ಹಿಂದೂ ಕಾರ್ಯಕರ್ತರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು ಈ ಬಗ್ಗೆ ಮಂಡ್ಯದಲ್ಲಿ ಬೃಹತ್ ಪ್ರತಿಭಟನೆ ಕೂಡ ನಡೆತಿದ್ದು ಆದರೆ ಇದೀಗ ಭಟ್ಕಳದಲ್ಲಿ ಬಿಜೆಪಿ ಸಂಸದ ಅನಂತ್ ಕುಮಾರ್ ಹೆಗಡೆ ಅವರು ಹನುಮ ಧ್ವಜ ತೆರವು ಮಾಡಿದ್ದ ಸ್ಥಳದಲ್ಲೇ ಧ್ವಜವನ್ನು ಹಾರಿಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ತೆಂಗಿನಗುಂಡಿ ಗ್ರಾಮದ ನಡೆದಿದೆ.
ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಅನಧಿಕೃತವಾಗಿ ಧ್ವಜ ಕಟ್ಟೆ ನಿರ್ಮಾಣ ಮಾಡಲಾಗಿದೆ ಎಂದು ತೆಂಗಿನಗುಂಡಿ ಗ್ರಾಮದಲ್ಲಿ ಕಟ್ಟಲಾಗಿದ್ದ ಧ್ವಜ ಕಟ್ಟೆ ಹಾಗೂ ಸಾವರ್ಕರ್ ಬೊರ್ಡ್ ಅನ್ನು ತೆರವು ಮಾಡಲಾಗಿತ್ತು,ಇದಕ್ಕೆ ಸ್ಥಳಿಯ ಹಿಂದೂ ಕಾರ್ಯಕರ್ತರು ಭಾರೀ ವಿರೋಧ ವ್ಯಕ್ತಪಡಿಸಿದ್ದರು.ಆದರೆ ಇದೀಗ ಬಿಜೆಪಿ ಸಂಸದ ಅನಂತ್ ಕುಮಾರ್ ಹೆಗಡೆ ಯವರು ತೆರವು ಮಾಡಿದ್ದ ಸ್ಥಳದಲ್ಲೇ ಧ್ವಜವನ್ನು ಹಾರಿಸಿ ಮತ್ತೆ ಧ್ವಜ ದಂಗಲ್ ಕಿಡಿ ಹೊತ್ತಿಸಿದ್ದಾರೆ. ಈ ವೇಳೆ ಸ್ವತಃ ಸಂಸದರೇ ತೆಂಗಿನಗುಂಡಿ ಗ್ರಾಮಕ್ಕೆ ಭೇಟಿ ನೀಡಿ ನಾನಿದ್ದೇನೆ ನಡಿರಿ ಎಂದು ಹೇಳಿ ತೆರವು ಮಾಡಲಾಗಿದ್ದ ಸ್ಥಳದಲ್ಲೇ ಹನುಮ ಧ್ವಜ ಹಾರಿಸಿದದ್ದು ಅಲ್ಲದೆ, ಸಾವರ್ಕರ್ ಬೋರ್ಡ್ ಕೂಡ ಹಾಕಿದ್ದಾರೆ.ಈ ಸಂದರ್ಭದಲ್ಲಿ ಸ್ಥಳದಲ್ಲಿ ನೆರೆದಿರುವ ಹಿಂದೂ ಕಾರ್ಯಕರ್ತರು ಜೈ ಶ್ರೀ ರಾಮ್ ಎಂದು ಘೋಷಣೆ ಕೂಗಿ ಸಂತೋಷ ವ್ಯಕ್ತಪಡಿಸಿದ್ದಾರೆ.


