Sunday, July 12, 2026
Homeರಾಜ್ಯಕಲಬುರಗಿ : ಸರಕಾರಿ ಆಸ್ಪತ್ರೆಯಿಂದ ನವಜಾತ ಶಿಶು ಅಪಹರಣ ಪ್ರಕರಣ : ತಾಯಿ ಮಡಿಲು ಸೇರಿದ...

ಕಲಬುರಗಿ : ಸರಕಾರಿ ಆಸ್ಪತ್ರೆಯಿಂದ ನವಜಾತ ಶಿಶು ಅಪಹರಣ ಪ್ರಕರಣ : ತಾಯಿ ಮಡಿಲು ಸೇರಿದ ಮಗು..!

ಕಲಬುರಗಿ : ಕಲಬುರಗಿ ಜಿಲ್ಲಾಸ್ಪತ್ರೆಯಿಂದ ಹಸುಗೂಸು ಅಪಹರಣವಾದ ಘಟನೆ ನಡೆದಿತ್ತು ಜಿಲ್ಲಾಸ್ಪತ್ರೆ ವಾರ್ಡ್ ನಂಬರ್ 115 ರಲ್ಲಿ ಕಸ್ತೂರಿ ಎಂಬುವರಿಗೆ ಹೆರಿಗೆಯಾಗಿದ್ದು ನಿನ್ನೆ ನಸುಕಿನ ಜಾವ 4 ಗಂಟೆಗೆ ಗಂಡು ಮಗುವಿಗೆ ಜನ್ಮ ನೀಡಿದ್ದರು ಆದರೆ ಇದ್ದಕಿದ್ದಂತೆ ಮಗು ಕಾಣೆಯಾಗಿದ್ದು ಆಸ್ಪತ್ರೆಯ ನಿರ್ಲಕ್ಸ್ಯೆಯೇ ಕರಣ ಎಂದು ಪೋಷಕರು ಆಕ್ರೋಶಹೊರಹಾಕಿದ್ದರು ಆದರೆ ಇದೀಗ ಪೊಲೀಸರು 36 ಗಂಟೆಯಲ್ಲಿ ಹಸೂಗುಸನ್ನು‌ ಪತ್ತೆ ಹಚ್ಚಿ ತಾಯಿ ಮಡಿಲು ಸೇರಿಸಿದ್ದಾರೆ.

ರಾಜ್ಯದಲ್ಲಿ ಇತ್ತೀಚ್ಚಿಗೆ ಸರಕಾರಿ ಆಸ್ಪತ್ರೆಯಲ್ಲಿ ಮಕ್ಕಳ ಅಪಹರಣ ಹೆಚ್ಚಾಗಿದ್ದು ಜನಸಾಮನ್ಯರು ಭಯಭೀತಗೊಂಡಿದ್ದರು. ಚಿತ್ತಾಪುರ ತಾಲ್ಲೂಕಿನ ರಾವೂರ ಗ್ರಾಮದ ರಾಮಕೃಷ್ಣ ಸಗರ ಹಾಗೂ ಕಸ್ತೂರಿ ದಂಪತಿಯ ಶಿಶುವನ್ನು ಅಪಹರಿಸಲಾಗಿತ್ತು. ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ಈ ಕುರಿತು ನಾಲ್ಕು ವಿಶೇಷ ತನಿಖೆ ತಂಡ ರಚನೆ ಮಾಡಲಾಗಿತ್ತು. ಪೊಲೀಸರು ತ್ವರಿತ ಗತಿಯಲ್ಲಿ ತನಿಖೆ ನಡೆಸಿ ಮಗುವನ್ನು ಪತ್ತೆ ಹಚ್ಚಿದ್ದಾರೆ. ಸಂಜೆ ನರ್ಸ್​ ವೇಷದಲ್ಲಿ ಸಂಪೂರ್ಣ ಮುಖ ಮುಚ್ಚಿಕೊಂಡು ಬಂದಿದ್ದ ಇಬ್ಬರು ಮಹಿಳೆಯರು ರಕ್ತ ತಪಾಸಣೆ ಮಾಡಬೇಕು ಮಗು ಕರೆದುಕೊಂಡು ಬನ್ನಿ ಎಂದು ಹೇಳಿದ್ದರು. ಹೀಗಾಗಿ, ಕಸ್ತೂರಿ ಅವರ ಸಂಬಂಧಿ ರಕ್ತ ತಪಾಸಣೆಗಾಗಿ ಮಗುವನ್ನು ತೆಗೆದುಕೊಂಡು ಹೋಗಿದ್ದರು. ಈ ವೇಳೆ ಮಹಿಳೆಯರು ಮಗುವನ್ನು ನಮಗೆ ಕೊಡಿ ಎಂದಿದ್ದರು. ನಂತರ, ಮಗುವನ್ನು ಎತ್ತಿಕೊಂಡು ಅಲ್ಲಿಂದ ಪರಾರಿಯಾಗಿದ್ದರು.

ಮಾಧ್ಯಮದಲ್ಲಿ ಸುದ್ದಿ ಪ್ರಸಾರವಾಗುತ್ತಿದ್ದಂತೆ ಕಲಬುರಗಿಯ MSK ಮಿಲ್ ಬಡಾವಣೆಯ ಉಮೇರಾ, ನಸರೀನ್ ಮತ್ತು ಫಾತಿಮಾ ಎಂಬುವರ ಮನೆಯಲ್ಲಿ ಮಗುಪತ್ತೆಯಾಗಿದೆ ಈ ಬಗ್ಗೆ ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದರು ಪ್ರಕರಣ ಗಂಭೀರವಾಗಿ ಪರಿಗಣಿಸಿದ ಪೊಲೀಸ್ ಇಲಾಖೆ, ನಾನಾ ಹಂತಗಳಲ್ಲಿ ತನಿಖೆ, ಕಾರ್ಯಾಚರಣೆ ನಡೆಸಿ ಮಗುವನ್ನು ರಕ್ಷಣೆ ಮಾಡಿದ್ದಾರೆ ಖದೀಮರು ಹೆಡೆಮೂರಿಕಟ್ಟಿದ್ದಾರೆ .ಹೊತ್ತಿನಲ್ಲಿ ಏನು ತಿಳಿಯದ ಹಸುಗೂಸು ಕೊನೆಗೂ ಅಮ್ಮನ ಮಡಿಲು ಸೇರಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular