Saturday, March 14, 2026
Flats for sale
Homeರಾಜ್ಯಕಲಬುರಗಿ : ಶಖಾಪೂರ ತಪೋನಮಠದಲ್ಲಿ ರೊಟ್ಟಿ ಜಾತ್ರೆ: ಸಿದ್ದರಾಮ ಶ್ರೀ.

ಕಲಬುರಗಿ : ಶಖಾಪೂರ ತಪೋನಮಠದಲ್ಲಿ ರೊಟ್ಟಿ ಜಾತ್ರೆ: ಸಿದ್ದರಾಮ ಶ್ರೀ.

ಕಲಬುರಗಿ : ಹತ್ತರಿಂದ ಹದಿನೈದು ಸಾವಿರ ಭಕ್ತರು ಸೇರುವ ಸಾಧ್ಯತೆ ಇದೆ ಎಂದು ಶಾಖಾಪುರ ಎಸ್ಎ ಗ್ರಾಮದ ಸದ್ಗುರು ವಿಶ್ವರಾಧ್ಯರ ತಪೋನಮಠದ ಲಿಂಗೈಕ್ಯ ಸಿದ್ದರಾಮ ಶಿವಯೋಗಿಗಳ 3/11/23 ರಂದು 73ನೇ ಪುಣ್ಯರಾಧನೆ ಮಠದ ಆವರಣದಲ್ಲಿ ಜರುಗುಲಿದೆ ಎಂದು ತಪೋನ ಮಠದ ಪೀಠಾಧಿಪತಿಗಳಾದ ಡಾ. ಸಿದ್ದರಾಮ ಶಿವಾಚಾರ್ಯರು ತಿಳಿಸಿದ್ದಾರೆ.

ಶಖಾಪೂರ ತಪೋನಮಠ ಸಿದ್ದರಾಮ ಶಿವಯೋಗಿಗಳ 73ನೇ ಪುಣ್ಯರಾಧನೆ ಅಂಗವಾಗಿ ರೊಟ್ಟಿ ಜಾತ್ರೆ ಮಾಡಲ್ಲಾಗುವುದು ಎಂದು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಶಿವಾಚಾರ್ಯರತ್ನ ಪರಮಪೂಜ್ಯ ಡಾ. ಸಿದ್ದರಾಮ ಶಿವಾಚಾರ್ಯ ಮಾತನಾಡಿದರು.

ಸುಮಾರು 23 ವರ್ಷಗಳ ಸತತವಾಗಿ ಮಠದ ಆವರಣದಲ್ಲಿ ಒಲೆ ಹೂಡಿ ರೊಟ್ಟಿ ತಯಾರು ಮಾಡಿ ಹತ್ತು ಸಾವಿರಕ್ಕಿಂತ ಹೆಚ್ಚು ಭಕ್ತರಿಗೆ ಉಣಬಡಿಸುತ್ತಿರುವುದು ಸಂಪ್ರದಾಯ ಇಲ್ಲಿ ನಡೆಯುತ್ತಿದೆ. 35 ರಿಂದ 40 ಕ್ವಿಂಟಲ್ ರೊಟ್ಟಿ ಮತ್ತು ಬಾಜಿ ಪಲ್ಯ ರೆಡಿ ಮಾಡಿ ಬಂದ ಭಕ್ತಾದಿಗಳಿಗೆ ಪ್ರಸಾದವನ್ನು ನೀಡಲಾಗುತ್ತದೆ ಎಂದು ಹೇಳಿದರು.

ಸದ್ಗುರು ವಿಶ್ವರಾಧ್ಯ ತಪೋನಮಠ ಶಾಖಾಪೂರದಲ್ಲಿ ಲಿಂಗೈಕೆ ಸಿದ್ದರಾಮ ಶಿಯೋಗಿಗಳ 73ನೇ ಪುಣ್ಯ ಸ್ಮರಣೆ ಅಂಗವಾಗಿ ಕರ್ತೃಗ್ರದ್ದಿಗೆ ವಿಶೇಷ ಪೂಜೆ ಅಲಂಕಾರ ಅಭಿಷೇಕ ಜರುಗುವುದು. ನಂತರ ರಾತ್ರಿ ಭಜನೆ ಮತ್ತು ಪಲ್ಲಕ್ಕಿ ಮೆರವಣಿಗೆ ಹಾಗೂ ಧರ್ಮಸಭೆ ಜರುಗುವುದು ಎಂದು ಹೇಳಿದರು.

ಈ ಒಂದು ರೊಟ್ಟಿ ಜಾತ್ರೆಗೆ ಪಾಳಶ್ರೀಗಳು, ಆಂದೋಲಶ್ರೀಗಳು, ಕಡಗಂಚಿ ಶ್ರೀಗಳು, ಏಕದಂಡಿ ಮಠದ ಶ್ರೀಗಳು, ಮಾಚಬಾಳ ಶ್ರೀಗಳು, ವೆಂಕಟ ಬೇನೂರು ಶ್ರೀಗಳು, ರಾಜಕೀಯ ಮುಖಂಡರಾದ ಶಾಸಕ ಕೆಕೆಆರ್‌ಡಿಬಿ ಅಧ್ಯಕ್ಷರಾದ ಅಜಯ್ ಸಿಂಗ್, ಅಲ್ಲಮ ಪ್ರಭು ಪಾಟೀಲ್, ಎಂ ವ್ಯ ಪಾಟೀಲ್, ಸಚಿವರಾದ ಶರಣ್ ಪ್ರಕಾಶ್ ಪಾಟೀಲ್, ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ್, ಕೇದಾರಲಿಂಗಯ್ಯ ಹಿರೇಮಠ್, ಶಿವರಾಜ್ ಪಾಟೀಲ್ ರದ್ದೇವಡಗಿ, ರಾಜಕುಮಾರ್ ಪಾಟೀಲ್ ತೆಲ್ಕೂರ್, ರಾಜಶೇಖರ್ ಸೀರಿ, ಕಾಸರಾಯ್ ಗೌಡ ಯಲಗೋಡ, ಮಠದ ಭಕ್ತರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

RELATED ARTICLES

LEAVE A REPLY

Please enter your comment!
Please enter your name here

Most Popular