ಕಲಬುರಗಿ ; ಕಲಬುರಗಿಯಲ್ಲಿ ಬೆಳ್ಳಂ ಬೆಳಿಗೆ ಜವರಾಯ ಅಟ್ಟಹಾಸಕ್ಕೆವ ನಾಲ್ವರು ಬಲಿಯಾಗಿದ್ದಾರೆ.
ಪಿಕಪ್ ಬುಲೇರೋ ಹಾಗೂ ಕಾರು ನಡುವೆ ನಡೆದ ಅಪಘಾತದಲ್ಲಿ ಸ್ಥಳದಲ್ಲೇ 4ಜನ ಮೃತಪಟ್ಟಿದ್ದಾರೆ. ಕಮಲಾಪುರ ತಾಲೂಕಿನ ಮರಗುತ್ತಿ ಕ್ರಾಸ್ ಬಳಿ ಈ ಘಟನೆ ನಡೆದಿದ್ದು ಹೈದರಾಬಾದ್ ಮೂಲದ ಭಾರ್ಗವ್ ಕೃಷ್ಣ (55) ಅವರ ಪತ್ನಿ ಸಂಗೀತ (45) ಪುತ್ರ ಉತ್ತಮ್ ರಾಘವನ್ (28) ಮೃತಪಟ್ಟಿದ್ದಾರೆ.
ಕಾರಿನಲ್ಲಿದ್ದವರು ಅಫಜಲಪುರ ತಾಲೂಕಿನ ದೇವಲಗಾಣಗಾಪುರಕ್ಕೆ ಶ್ರೀದತ್ತಾತ್ರೆಯನ ದರ್ಶನಕ್ಕೆ ತೆರಳುತ್ತಿದ್ದರೆಂದು ತಿಳಿದಿದೆ.
ಕಮಲಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲಗಲಿ ಈ ಘಟನೆ ನಡೆದಿದ್ದು ಪ್ರಕರಣದ ತನಿಖೆ ನಡೆಯುತ್ತಿದೆ.