ಕಲಬುರಗಿ : ಲೋಕಸಭಾ ಚುನಾವಣೆ ನೀತಿಸಂಹಿತೆ ಜಾರಿ ಮುನ್ನ ಪಂಚಮಸಾಲಿ ಲಿಂಗಾಯದ ಸಮಾಜಕ್ಕೆ 2ಎ ಮೀಸಲಾತಿ ಘೋಷಣೆ ಮಾಡಬೇಕು. ಇಲ್ಲದಿದ್ದರೆ ನಮ್ಮ ಸಮಾಜ ಬಹಳಷ್ಟು ಅಸಮಾಧಾನಗೊಳ್ಳುತ್ತದೆ ಎಂದು ಪಂಚಮಸಾಲಿ ಲಿಂಗಾಯ ಸಮಾಜದ ಸ್ವಾಮೀಜಿ ಜಯಮೃತ್ಯುಂಜಯಶ್ರೀ ಹೆಚ್ಚರಿಕೆ ನೀಡಿದ್ದಾರೆ.
ಕಾಂತರಾಜ ವರದಿ ನಮ್ಮ ಸಮಾಜ ಯಾವುದೇ ಕಾರಣಕ್ಕೂ ಒಪ್ಪಲ್ಲ. ನಾವು ಸುಮ್ಮನೆ ಕುಳಿತರೆ ನಮ್ಮ ಹೋರಾಟ ತಣ್ಣಗಾಗುತ್ತದೆ, ಅದಕ್ಕಾಗಿ ಮಲ್ಲಿಕಾರ್ಜುನ ಖರ್ಗೆಯವರ ಕ್ಷೇತ್ರದಲ್ಲಿ ಈ ಸಮಾವೇಶ ಮಾಡಲಾಗುತ್ತಿದೆ. ನಾವು ಎಂದೂ ಸಮಾಜ ಒಡೆಯುವ ಕೆಲಸ ಮಾಡಿಲ್ಲ, ಪಂಚಮಸಾಲಿ ಸಮಗ್ರ ಲಿಂಗಾಯತರು ಒಂದು ಎಂಬ ಭಾವನೆ ಮೂಡಿದೆ ಎಂದು ತಿಳಿಸಿದರು.
ಈ ಸರ್ಕಾರಕ್ಕೂ ನಾವು ನಮ್ಮ ಹಕ್ಕನ್ನು ಮಂಡಿಸಿದ್ದೇವೆ. ಈಗ ಆರನೇ ಹಂತದ ಹೋರಾಟ ಹಮ್ಮಿಕೊಳ್ಳಲಾಗಿದೆ. ಪಂಚಮಸಾಲಿ ಮೀಸಲಾತಿಗಾಗಿ ಇಡೀ ಕರ್ನಾಟಕ ಒಂದಾಗಿದೆ. ಹೊಸ ಸರ್ಕಾರ ಬಂದಮೇಲೂ ಪಂಚಮಸಾಲಿ ಹೋರಾಟ ಮುಂದುವರಿದಿದೆ. ಪಂಚಮಸಾಲಿ ಹೋರಾಟ ಮುಗಿದೆ ಹೋಯಿತು ಅಂತ ಕೆಲವರು ಅಂದುಕೊಂಡಿದ್ದಾರೆ. ಆದರೆ, ನಮಗೆ ನ್ಯಾಯ ಸಿಗುವವರೆಗೆ ಹೋರಾಟ ನಿಲ್ಲಲ್ಲ. ನಮ್ಮ ಸಮಾಜದ ಎಲ್ಲಾ ಶಾಸಕರು ಗಟ್ಟಿ ಧ್ವನಿ ಎತ್ತಬೇಕು. ಕಾಂತರಾಜ ವರದಿ ನಮ್ಮ ಸಮಾಜ ಯಾವುದೇ ಕಾರಣಕ್ಕೂ ಒಪ್ಪಲ್ಲ. ನಾವು ಸುಮ್ಮನೆ ಕುಳಿತರೆ ನಮ್ಮ ಹೋರಾಟ ತಣ್ಣಗಾಗುತ್ತದೆ, ಅದಕ್ಕಾಗಿ ಮಲ್ಲಿಕಾರ್ಜುನ ಖರ್ಗೆಯವರ ಕ್ಷೇತ್ರದಲ್ಲಿ ಈ ಸಮಾವೇಶ ಮಾಡಲಾಗುತ್ತಿದೆ. ನಾವು ಎಂದೂ ಸಮಾಜ ಒಡೆಯುವ ಕೆಲಸ ಮಾಡಿಲ್ಲ, ಪಂಚಮಸಾಲಿ ಹೋರಾಟದಿಂದ ಸಮಗ್ರ ಲಿಂಗಾಯತರು ಒಂದು ಎಂಬ ಭಾವನೆ ಮೂಡಿದೆ ಎಂದು ತಿಳಿಸಿದರು.


