ಕನಕಪುರ : ಆಡಳಿತಾರೂಢ ಕಾಂಗ್ರೆಸ್ ಪಕ್ಷವು ಸೋಲು ಕಂಡು ಭಾರೀ ಮುಖಭಂಗ ಅನುಭವಿಸಿದೆ. 5ನೇ ವಾರ್ಡಿನ ನಗರಸಭೆಯ ಅಧ್ಯಕ್ಷರಾಗಿದ್ದ ಕೃಷ್ಣಪ್ಪ ರವರ ನಿಧನದಿಂದ ತೆರವಾದ ಸ್ಥಾನಕ್ಕೆ ಚುನಾವಣೆ ನಡೆದಿತ್ತು,ಕಣದಲ್ಲಿ ಕಾಂಗ್ರೆಸ್ ನಿಂದ ಚಾಮರಾಜು ಜೆ ಡಿ ಎಸ್ ನಿಂದ ಲೋಕೇಶ್ ಬಿ ಜೆ ಪಿ ಯಿಂದ ಶಿವರುದ್ರ ಸ್ಪರ್ಧೆಯಲ್ಲಿದ್ದರು. ತೀವ್ರ ಕುತೂಹಲ ಮೂಡಿಸಿದ್ದ ತ್ರಿಕೋನ ಸ್ಪರ್ಧೆಯಲ್ಲಿ ಇಂದು ಫಲಿತಾಂಶ ಹೊರಬಿದ್ದಿದ್ದು ಜೆ ಡಿ ಎಸ್ ಪಕ್ಷದ ಅಭ್ಯರ್ಥಿ ಲೋಕೇಶ್ 50 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆಂದು ಚುನಾವಣಾಧಿಕಾರಿ ರಾಜು ಘೋಷಣೆ ಮಾಡಿದ್ದಾರೆ.
ಪಡೆದ ಮತಗಳು ಜೆ ಡಿ ಎಸ್ ಅಭ್ಯರ್ಥಿ ಲೋಕೇಶ್ 569 ಮತಗಳು,ಕಾಂಗ್ರೆಸ್ ನ ಅಭ್ಯರ್ಥಿ ಚಾಮರಾಜು 519 ಮತಗಳು ಬಿ ಜೆ ಪಿ ಯ ಅಭ್ಯರ್ಥಿ ಶಿವರುದ್ರ 18 ಮತಗಳು ನೋಟ 09 ಮತಗಳು ಚಲಾವನೆಗೂಡಿದ್ದವು. ನಗರಸಭೆಯ ಕಾಂಗ್ರೆಸ್ ನ ದುರಾಡಳಿತದಿಂದ ಬೇಸತ್ತ ಮತದಾರರು ಜೆ ಡಿ ಎಸ್ ಪಕ್ಷಕ್ಕೆ ಮತ ನೀಡುವ ಮೂಲಕ ಗೆಲುವು ತಂದುಕೊಟ್ಟಿದ್ದಾರೆ ಎಂದು ತಾಲ್ಲೂಕು ಜೆ ಡಿ ಎಸ್ ಅಧ್ಯಕ್ಷ ಬಿ ನಾಗರಾಜು ಹಾಗೂ ಹಿಂದುಳಿದ ವರ್ಗಗಳ ರಾಜ್ಯ ಉಪಾಧ್ಯಕ್ಷ ಚಿನ್ನಸ್ವಾಮಿ ತಿಳಿಸಿದರು.
ವಿಜೇತ ಅಭ್ಯರ್ಥಿ ಲೋಕೇಶ್ ಮಾತನಾಡಿ ನನ್ನ ಗೆಲುವಿಗೆ ಹಗಲಿರುಳೆನ್ನದೆ ದುಡಿದ ಎಲ್ಲಾ ಮುಖಂಡರುಗಳಿಗೆ ಹಾಗೂ ಕಾರ್ಯಕರ್ತರುಗಳಿಗೆ ಅಭಿನಂದನೆ ಸಲ್ಲಿಸಿದರು. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಈ ಫಲಿತಾಂಶ ಮರುಕಳಿಸಲಿದೆ ಎಂದು ಜೆ ಡಿ ಎಸ್ ಮುಖಂಡರು ಹಾಗೂ ಕಾರ್ಯಕರ್ತರು ಅಭಿಪ್ರಾಯ ವ್ಯಕ್ತಪಡಿಸಿದರು.


