ಕಡಬ : ರಿಯಲ್ ಎಸ್ಟೇಟ್ ದಂದೆಯ ಖದೀಮರು ನಕಲಿ ದಾಖಲೆ ಸೃಷ್ಟಿಸಿ ದಲಿತ ಕುಟುಂಬದ ಭೂಮಿ ಮೇಲೆ ಅಕ್ರಮ ಅತಿಕ್ರಮಿಸಿಕೊಂಡು ಜೆಸಿಬಿ ಮೂಲಕ ಸಮ ತಟ್ಟುಗೊಳಿಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ದಲ್ಲಿ ವರದಿಯಾಗಿದೆ.
ಕಡಬ ಗ್ರಾಮದ ಪಿಜಕಳದ ಸ್ಥಳೀಯ ನಿವಾಸಿ ಕುಂಞ ಮೇರ ಎಂಬವರು ಹೆಸರಲ್ಲಿ ಇದ್ದ ಭೂಮಿ ಮೃತಪಟ್ಟ ಬಳಿಕ ಅವರ ಪತ್ನಿ ಮಾಣಿಗ ಎಂಬವವರ ಹೆಸರಗೆ ಭೂಮಿ ದಾಖಲಾಗಿತ್ತು,ವಾರಿಸುದಾರರು ಇಲ್ಲದ ಕಾರಣ ಆ ಜಾಗವನ್ನು ಅನ್ಯ ವ್ಯಕ್ತಿಗಳಿಂದ ಅತಿಕ್ರಮಣ ಮಾಡಲಾಗಿತ್ತು,ಪರಿಶಿಷ್ಟ ಜಾತಿಗೆ ಸೇರಿದ ಕುಂಞ ಮೇರ ಎಂಬುವವರಿಗೆ ಸೇರಿದ ಸರ್ವೆ ನಂಬ್ರ 121/2 ರಲ್ಲಿ ಇರುವ 0.99 ಎಕ್ರೆ ಜಾಗ ಇದಾಗಿದ್ದು ದಲಿತ ವ್ಯಕ್ತಿಗಳ ಭೂಮಿಯನ್ನು ಅತಿ ಕ್ರಮಿಸಿ ಕೊರಗಜ್ಜನ ಕಟ್ಟೆಯನ್ನು ದ್ವಂಸ ಮಾಡಿ ಕಟ್ಟೆಯ ಸುತ್ತ ಇರುವ ಸರ್ಕಾರಿ ಜಾಗವನ್ನು ಅತಿಕ್ರಮಿಸಿರುವ ಬಗ್ಗೆ ಹಿಂದೂ ಪರ ಸಂಘಟನೆ, ಬೀಮ್ ಆರ್ಮಿ ಸಂಘಟನೆಗಳಿಂದ ಪ್ರತಿಭಟನೆ ನಡೆಸಿತ್ತು.
ಈ ಬಗ್ಗೆ ಹೆಚ್ಚೆತ್ತ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದು ದಾಖಲೆಗಳನ್ನು ಪರಿಶೀಲಿಸಿದ ನಂತರ ಅಕ್ರಮವಾಗಿ ನಕಲಿ ದಾಖಲೆ ಸೃಷ್ಠಿಸಿ ಭೂಮಿ ಅಕ್ರಮ ಒತ್ತುವರಿಯಾದೆ ಎಂದು ಕಂದಾಯ ನಿರೀಕ್ಷಕ ಶೇಷಾದ್ರಿ ತಿಳಿಸಿದ್ದಾರೆ,ಬಳಿಕ ಭೂಮಿಯನ್ನು ಸರ್ವೆ ಮಾಡಿ ಕೂಡಲೇ ಸರಕಾರದ ವಶಕ್ಕೆ ಪಡೆದುಕೊಂಡಿದ್ದಾರೆ.
ದಾಖಲೆಗಳನ್ನು ಇಲಾಖೆಗೆ ಸಲ್ಲಿಸುವಂತೆ ಅಧಿಕಾರಿಗಳು ತಿಳಿಸಿದ್ದು,ವಾರಸುದಾರರು ಇಲ್ಲದ ಖಾಸಗಿ ಹಾಗೂ ಸರ್ಕಾರಿ ಭೂಮಿಯನ್ನು ಪರಿಶಿಷ್ಟ ಜಾತಿ ಮತ್ತು ಪಂಗಡದವರ ಉಪಯೋಗಕ್ಕೆ ಮೀಸಲಿಡಬೇಕು ದಲಿತ ಹಾಗೂ ಹಿಂದೂ ಪರ ಸಂಘಟನಾ ಒತ್ತಾಯಿಸಿದ್ದಾರೆ,ಹಾಗೂ ಅತಿಕ್ರಮಣವನ್ನು ತೆರವುಗೊಳಿಸಿ ಸೂಕ್ರ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
.