ಉಳ್ಳಾಲ: ಹಣ ನೀಡೋ ಸೋಗಲ್ಲಿ ಅನ್ಯಮತೀಯ ಯವಕನೋರ್ವ ಸಹೋದ್ಯೋಗಿ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಘಟನೆ ನಿನ್ನೆ ರಾತ್ರಿ ಉಳ್ಳಾಲದ ಅಬ್ಬಂಜರ ಎಂಬಲ್ಲಿನ ನಿರ್ಜನ ಪೊದೆಯಲ್ಲಿ ನಡೆದಿದ್ದು ಸ್ಥಳಕ್ಕೆ ಎಂಟ್ರಿ ನೀಡಿದ ಬಜರಂಗದಳದ ಹುಡುಗರು ಕಾಮುಕನಿಗೆ ಧರ್ಮದೇಟು ನೀಡಿ ಉಳ್ಳಾಲ ಪೊಲೀಸರಿಗೆ ಒಪ್ಪಿಸಿದ್ದಾರೆ.

ಅಡ್ಯಾರ್ ಪದವು ನಿವಾಸಿ ಮುನೀರ್ (27)ಬಂಧಿತ ಆರೋಪಿ.ಮುನೀರ್ ಮತ್ತು ಉಳ್ಳಾಲ ಬೈಲ್ ನಿವಾಸಿ ಸಂತ್ರಸ್ತ ವಿವಾಹಿತ ಮಹಿಳೆ ತೊಕ್ಕೊಟ್ಟುವಿನ ಸಾಗರ್ ಕಲೆಕ್ಷನ್ ಬಟ್ಟೆ ಮಳಿಗೆಯಲ್ಲಿ ಉದ್ಯೋಗಿಗಳಾಗಿದ್ದಾರೆ.ಇವರಿಬ್ಬರು ಪರಸ್ಪರ ಪರಿಚಯಸ್ಥರಾಗಿದ್ದಾರೆ.ಬುಧವಾರ ರಾತ್ರಿ ಮುನೀರ್ ಅಬ್ಬಂಜರದ ನಿರ್ಜನ ಪ್ರದೇಶದಲ್ಲಿ ಮಹಿಳೆಯನ್ನು ಭೇಟಿ ಯಾಗಿದ್ದ.ಹಣ ಹಿಂದಿರುಗಿಸೋ ಸೋಗಲ್ಲಿ ಮುನೀರ್ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ್ದು ,ಈ ಸಂದರ್ಭ ಸ್ಥಳೀಯ ಬಜರಂಗದಳ ಕಾರ್ಯಕರ್ತರು ದಾಳಿ ನಡೆಸಿ ಆರೋಪಿ ಮುನೀರ್ಗೆ ಎರಡು ಬಿಗಿದು ಉಳ್ಳಾಲ ಪೊಲೀಸರಿಗೆ ಒಪ್ಪಿಸಿದ್ದಾರೆ.
ಸಂತ್ರಸ್ತೆ ಮಹಿಳೆಗೆ ವಿವಾಹ ಆಗಿದ್ದು,ಒಂದು ಮಗು ಕೂಡಾ ಇದೆ.ಮಹಿಳೆ ನೀಡಿದ ದೂರಿನ ಮೇರೆಗೆ ಉಳ್ಳಾಲ ಪೊಲೀಸರು ಆರೋಪಿಯನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.