Wednesday, November 5, 2025
Flats for sale
Homeಜಿಲ್ಲೆಉಳ್ಳಾಲ : ಬಿಜೆಪಿವತಿಯಿಂದ 79 ನೇ ಸ್ವಾತಂತ್ರೊತ್ಸವದ ಪ್ರಯುಕ್ತ ತಿರಂಗಯಾತ್ರೆಯ ಮೂಲಕ ರಾಣಿ ಅಬ್ಬಕ್ಕನ ಪ್ರತಿಮೆಗೆ...

ಉಳ್ಳಾಲ : ಬಿಜೆಪಿವತಿಯಿಂದ 79 ನೇ ಸ್ವಾತಂತ್ರೊತ್ಸವದ ಪ್ರಯುಕ್ತ ತಿರಂಗಯಾತ್ರೆಯ ಮೂಲಕ ರಾಣಿ ಅಬ್ಬಕ್ಕನ ಪ್ರತಿಮೆಗೆ ಮಾಲಾರ್ಪಣೆ…!

ಉಳ್ಳಾಲ : ಸ್ವಾತಂತ್ರೋತ್ಸವದ ಹಿನ್ನೆಲೆ ತಿರಂಗ ಯಾತ್ರೆ ಮತ್ತು ರಾಣಿ ಅಬ್ಬಕ್ಕ ಪ್ರತಿಮೆಗೆ ಮಾಲಾರ್ಪಣ ಮಾಡುವ ಕಾರ್ಯಕ್ರಮ ಇಂದು ಉಳ್ಳಾಲದ ರಾಣಿ ಅಬ್ಬಕ್ಕ ಸರ್ಕಲ್ ನಲ್ಲಿ ನಡೆಯಿತು.

ನೂರಾರು ಬಿಜೆಪಿ ಕಾರ್ಯ ಕರ್ತರು ಉಳ್ಳಾಲ ಬೈಲ್ ನಿಂದ ಪಾದಯಾತ್ರೆ ಮೂಲಕ ಅಬ್ಬಕ್ಕ ಸರ್ಕಲ್ ವೆರೆಗೆ ಆಗಮಿಸಿದರು. ಕಾರ್ಯಕ್ರಮದ ಉಧ್ಘಾಟನೆಯನ್ನು ಸ್ವಾತಂತ್ರ್ಯ ಹೋರಾಟಗಾರ್ತಿ ರಾಣಿ ಅಬ್ಬಕ ಮೂರ್ತಿ ಗೆ ಮಾಲಾರ್ಪಣೆ ಮಾಡುವ ಮೂಲಕ ದ.ಕ ಜಿಲ್ಲೆಯ ಸಂಸದ ಕ್ಯಾಪ್ಟನ್ ಬ್ರಿಜೇಶ್ ರವರು ನೆರೆವೆರೆಸಿದರು‌.

ಬಳಿಕ ಮಾತನಾಡಿದ ಕ್ಯಾಪ್ಟನ್ ಚೌಟರವರು ದೇಶಕ್ಕಾಗಿ ತಮ್ಮ ಪ್ರಾಣತ್ಯಾಗ ಮಾಡಿದ ವೀರರನ್ನು ನೆನೆಸಿದರು.ರಾಣಿ ಅಬ್ಬಕ್ಕ ಅವರು 16ನೇ ಶತಮಾನದಲ್ಲಿ ಪೋರ್ಚುಗೀಸರ ವಿರುದ್ಧ ಹೋರಾಡಿದ ತುಳುನಾಡಿನ ವೀರ ರಾಣಿ. ಅವರು ಪೋರ್ಚುಗೀಸರ ಆಕ್ರಮಣಗಳನ್ನು ಎದುರಿಸಿ ನಾಲ್ಕು ದಶಕಗಳ ಕಾಲ ಹೋರಾಡಿದರು. ಅವರ ಧೈರ್ಯಕ್ಕಾಗಿ ಅವರನ್ನು “ಅಭಯಾ ರಾಣಿ” ಎಂದು ಕರೆಯಲಾಗುತ್ತಿತ್ತು. ಅವರು ಭಾರತದ ಮೊದಲ ಮಹಿಳಾ ಸ್ವಾತಂತ್ರ್ಯ ಹೋರಾಟಗಾರ್ತಿಯರಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟಿದ್ದಾರೆ ಎಂದು ಹೇಳಿದರು.ಪ್ರತಿ ಬೂತ್ ಮಟ್ಟದ ಕಾರ್ಯಕರ್ತರು ಪ್ರತಿಯೊಬ್ಬರ ಮನೆಗೆಹೋಗಿ ನರೇಂದ್ರ ಮೋದಿಯವರ ಅರ್ ಘರ್ ತಿರಂಗಾ ಅಬಿಯಾನಕ್ಕೆ ಶಕ್ತಿ ಯನ್ನು ತುಂಬಿಸುವಂತಹ ಕೆಲಸ ಮಾಡಬೇಕೆಂದರು.ನಮ್ಮ ದೇಶದ ಸ್ವಾತಂತ್ರ್ಯ ಕ್ಕೆ ಬಲಿದಾನ ಸಲ್ಲಿಸಿದ ವೀರರಿಗೆ ನಮನ ಸಲ್ಲಿಸಿದರು.

ಬಳಿಕ ಮಾತನಾಡಿದ ಮಾಜಿ ಸಂಸದ ನಳೀನ್ ಕುಮಾರ್ ಕಟೀಲ್ ಮಳೆಯನ್ನು ಲೆಕ್ಕಿಸದೆ ಕಾರ್ಯ ಕ್ರಮದಲ್ಲಿ ಬಾಗಿಯಾದ ಕಾರ್ಯಕರ್ತರಿಗೆ ಅಬಿನಂದಿಸಿದರು. ತುಳುನಾಡಿನ ವೀರ ರಾಣಿ ಅಬ್ಬಕ್ಕರನ್ನು ರಾಷ್ಟ್ರೀಯ ಸಂಕೇತವಾಗಿ ಗುರುತಿಸಿದ ಗೃಹ ಸಚಿವ ಅಮಿತ ಷಾ ರವರನ್ನು ಅಬಿನಂದಿಸಿದರು.ಮಾಜಿ ಶಾಸಕ ಜಯರಾಮ್ ಶೆಟ್ಟಿಯವ ನೇತ್ರತ್ವದಲ್ಲಿ ರಾಜ್ಯ ದಲ್ಲಿ ರಾಣಿ ಹಬ್ವಕ್ಕ ಉತ್ಸವಕ್ಕೆ ಚಾಲನೆ ನೀಡಿದ್ದು ಭಾರತೀಯ ಹಾಗೂ ಪಾರ್ಟಿ ಹಾಗೂ 25 ಲಕ್ಷ ರೂ ಬಿಡುಗಡೆಗೊಳಿಸಿ ಪೂರ್ಣ ಸಹಕಾರ ಕೊಟ್ಟ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ರವರನ್ನು ಶ್ಲಾಘಿಸಿದರು.ದೇಶದ ಸ್ವತಂತ್ರಕ್ಕೆ ಬಲಿದಾನವಾದ ವೀರರು ವೀರ ಯೋಧರನ್ನು ನಮಿಸಿದರು.

ಈ ಸಂದರ್ಭದಲ್ಲಿ ಯುವ ಮೋರ್ಚಾ ಜಿಲ್ಲಾ ಅಧ್ಯಕ್ಷ ನಂದನ್ ಮಲ್ಯ,ಬಿಜೆಪಿ ಜಿಲ್ಲಾ ಅಧ್ಯಕ್ಷರಾದ ಸತೀಶ್ ಕುಂಪಲ.. ಯುವ ಮೋರ್ಚಾ ಜಿಲ್ಲಾ ಮಹಿಳಾ ಅಧ್ಯಕ್ಷರಾದ ಮಂಜುಳ ರಾವ್. ಜಯರಾಂ ಶೆಟ್ಟಿ..ನಿಶಾಂತ್ ಪೂಜಾರಿ.ಮುರಳಿ ಕೊಣಾಜೆ..ವರುಣ್ ರಾಜ್ ಅಂಬಾಟ್ ಪೂಜಾ ಪೈ. ಫಾಧರ್ ವಿಲಿಯಂಸ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular