Friday, March 13, 2026
Flats for sale
Homeಜಿಲ್ಲೆಉಳ್ಳಾಲ: ಅಬ್ಬಕ್ಕನ ಪ್ರತಿಮೆ ಮೇಲೆ ಹತ್ತಿ ಹಸಿರು ಬಾವುಟ ಹಾರಿಸಿದ ಯುವಕರಿಗೆ ಪೊಲೀಸರು ನೋಟಿಸ್.

ಉಳ್ಳಾಲ: ಅಬ್ಬಕ್ಕನ ಪ್ರತಿಮೆ ಮೇಲೆ ಹತ್ತಿ ಹಸಿರು ಬಾವುಟ ಹಾರಿಸಿದ ಯುವಕರಿಗೆ ಪೊಲೀಸರು ನೋಟಿಸ್.

ಮಂಗಳೂರು : ಉಳ್ಳಾಲದ ಅಬ್ಬಕ್ಕ ವೃತ್ತದಲ್ಲಿರುವ ವೀರರಾಣಿ ಅಬ್ಬಕ್ಕನ ಪ್ರತಿಮೆಗೆ ಯುವಕರ ಗುಂಪು ಹತ್ತಿ ಹಸಿರು ಬಾವುಟ ಬೀಸುತ್ತಿರುವ ದೃಶ್ಯ ವೈರಲ್ ಆಗಿರುವ ವಿಡಿಯೋವನ್ನು ಗಂಭೀರವಾಗಿ ಪರಿಗಣಿಸಿರುವ ಉಳ್ಳಾಲ ಪೊಲೀಸರು ಆರೋಪಿಗಳಿಗೆ ನೋಟಿಸ್ ಜಾರಿ ಮಾಡಿದ್ದಾರೆ. ಸೆಪ್ಟೆಂಬರ್ 26 ರಂದು ಈದ್ ಮಿಲಾದ್ ಮೆರವಣಿಗೆ ವೇಳೆ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ.

ಘಟನೆಯಿಂದ ತೀವ್ರ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಉಳ್ಳಾಲ ಪೊಲೀಸರು ವಿಡಿಯೋ ದೃಶ್ಯಾವಳಿಗಳನ್ನು ಸಂಗ್ರಹಿಸಿ ಕೃತ್ಯದಲ್ಲಿ ಭಾಗಿಯಾದ ಯುವಕರನ್ನು ಗುರುತಿಸಿ ಅವರಿಗೆ ನೋಟಿಸ್ ಜಾರಿ ಮಾಡಿದ್ದಾರೆ.

ಯುವಕರು ನಿರಂತರವಾಗಿ ಹಾರ್ನ್ ಮಾಡಿ ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದರು ಎನ್ನಲಾಗಿದೆ. ಆರೋಪಿ ಯುವಕರು ಉಳ್ಳಾಲ, ಕೊಣಾಜೆ, ದೇರ್ಲಕಟ್ಟೆ, ಬೆಳ್ತಂಗಡಿ, ಬಂಟ್ವಾಳ, ಮದಕ ಮತ್ತು ಮಂಜನಾಡಿ ಪ್ರದೇಶದವರು ಎಂದು ತಿಳಿದು ಬಂದಿದೆ.
RELATED ARTICLES

LEAVE A REPLY

Please enter your comment!
Please enter your name here

Most Popular