ಉತ್ತರ ಪ್ರದೇಶ (ಬದೌನ್) : ಇಬ್ಬರು ಮಕ್ಕಳನ್ನು ಬರ್ಬರವಾಗಿ ಕೊಲೆ ಮಾಡಿದ ಕೊಲೆಗಾರ ಕ್ಷೌರಿಕನನ್ನು ಪೊಲೀಸರು ಎನ್ ಕೌಂಟರ್ ನಡೆಸಿ ಹತ್ಯೆ ಮಾಡಿದ್ದಾರೆ.
ಪಕ್ಕದ ಮನೆಯಲ್ಲೇ ವಾಸಿಸುತ್ತಿದ್ದ ಸಾಜಿದ್ ಎಂಬ ಕ್ಷೌರಿಕ ನೆರೆಮನೆಯವನ ಸುಂದರ ಸಂಸಾರವನ್ನು ಸರ್ವನಾಶ ಮಾಡಿದ್ದಾನೆ. ಮಕ್ಕಳನ್ನು ಕೊಲ್ಲುವುದಕ್ಕೂ ಮೊದಲು ಈತ ಅವರ ತಾಯಿಯ ಬಳಿ ಸಾಲವನ್ನೂ ಕೇಳಿ ಪಡೆದಿದ್ದ.ಈ ಜೋಡಿ ಕೊಲೆಗಳು ನಗರದಲ್ಲಿ ಉದ್ವಿಗ್ನ ಪರಿಸ್ಥಿತಿಯನ್ನು ಉಂಟುಮಾಡಿದೆ.
ಸ್ಥಳೀಯ ಹಿಂದೂ ನಿವಾಸಿಗಳು ಕುಪಿತಗೊಂಡಿದ್ದಾರೆ. ಕ್ಷೌರಿಕನ ಅಂಗಡಿಗೆ ಬೆಂಕಿ ಹಚ್ಚಿದ್ದಾರೆ. ಕೊಲೆ ಪ್ರಕರಣದಲ್ಲಿ ಕ್ರೌರ್ಯದ ಆಘಾತಕಾರಿ ವಿವರಗಳು ಹೊರಬಂದಿವೆ. ಕೊಲೆಗಾರ ಸಾಜಿದ್, ಸಂತ್ರಸ್ತರ ಮನೆಯ ಎದುರು ಕ್ಷೌರದ ಅಂಗಡಿಯನ್ನು ನಡೆಸುತ್ತಿದ್ದ. ಮಕ್ಕಳ ತಂದೆ ವಿನೋದ್ ಅವರಿಗೆ ಆತನ ಪರಿಚಯವಿತ್ತು. ನಿನ್ನೆ ಸಂಜೆ ಸಾಜಿದ್, ವಿನೋದ್ ಮನೆಗೆ ಭೇಟಿ ನೀಡಿದ್ದ. ಆಗ ವಿನೋದ್ ಮನೆಯಲ್ಲಿ ಇರಲಿಲ್ಲ. ವಿನೋದ್ ಅವರ ಪತ್ನಿ ಸಂಗೀತಾ ಅವರಿಗೆ, ತನ್ನ ಗರ್ಭಿಣಿ ಪತ್ನಿ ಆಸ್ಪತ್ರೆಯಲ್ಲಿದ್ದು, ಆಕೆಯ ಚಿಕಿತ್ಸೆಗೆ 5000 ಅಗತ್ಯವಿದೆ ಎಂದು ಸಾಜಿದ್ ಹೇಳಿದ್ದಾನೆ. ಸಂಗೀತಾ ಪತಿ ವಿನೋದ್ಗೆ ಫೋನ್ ಮಾಡಿದ್ದಾಳೆ. ಹಣ ಕೊಡುವಂತೆ ವಿನೋದ್ ಪತ್ನಿಗೆ
ಸೂಚಿಸಿದ್ದಾರೆ.
ಸಂಗೀತಾ ಹಣವನ್ನು ಸಾಜಿದ್ಗೆ ಕೊಟ್ಟು, ಆತನಿಗೆ ಚಹಾ ಮಾಡಲೆಂದು ಕಿಚನ್ಗೆ ತೆರಳಿದ್ದರು. ಈ ಸಂದರ್ಭದಲ್ಲಿ ಆತ ಮೂವರು ಮಕ್ಕಳ ಮೇಲೆ ದಾಳಿ ನಡೆಸಿದ್ದ. ಮೊದಲು ಸಾಜಿದ್, ವಿನೋದ್ನ ಹಿರಿಯ ಮಗ 11 ವರ್ಷದ ಆಯುಷ್ಗೆ ಮೇಲಿನ ಮಹಡಿಯಲ್ಲಿರುವ ಆತನ ತಾಯಿಯ ಬ್ಯೂಟಿ ಸಲೂನ್ ಅನ್ನು ತೋರಿಸಲು ಕೇಳಿದ್ದಾನೆ. ಹುಡುಗ ಅವನನ್ನು ಎರಡನೇ ಮಹಡಿಗೆ ಕರೆದೊಯಿದ್ದ. ಎರಡನೇ ಮಹಡಿಯಲ್ಲಿ ಸಾಜಿದ್ ಲೈಟ್ ಆಫ್ ಮಾಡಿ ಆಯುಷ್ ಕುತ್ತಿಗೆಯನ್ನು ಚಾಕುವಿನಿಂದ ಸೀಳಿದ್ದಾನೆ. ಅಷ್ಟರಲ್ಲಿ ಆಯುಷ್ನ ಕಿರಿಯ ಸಹೋದರ ಅಹಾನ್ (6) ಒಳಗೆ ಬಂದಿದ್ದು, ಅಹಾನ್ನನ್ನು ಕೂಡ ಸಾಜಿದ್ ಹಿಡಿದು ಅದೇ ರೀತಿಯಲ್ಲಿ ಕೊಂದಿದ್ದಾನೆ. ಅದನ್ನು ಇನ್ನೊಬ್ಬ ಸಹೋದರ ಪಿಯೂಷ್ ನೋಡಿದ್ದಾನೆ. ಪಿಯೂಷ್ ಮೇಲೆ ಸಾಜಿದ್ ದಾಳಿ ಮಾಡುವಷ್ಟರಲ್ಲಿ ಏಳು ವರ್ಷದ ಆ ಮಗು ಓಡಿಹೋಗಿ ಅಡಗಿಕೊಂಡಿದ್ದಾನೆ.
ಆಯುಷ್ ಮತ್ತು ಅಹಾನ್ ಸಾವನ್ನಪ್ಪಿದ್ದಾರೆ. ಪಿಯೂಷ್ ಸಣ್ಣ ಗಾಯಗಳಾಗಿವೆ. ಇದಾದ ನಂತರ ಹೊರಗೆ ಬೈಕ್ನೊಂದಿಗೆ ಕಾಯುತ್ತಿದ್ದ ತನ್ನ ಸಹೋದರ ಜಾವೇದ್ನೊಂದಿಗೆ ಸಾಜಿದ್ ಪರಾರಿಯಾಗಿದ್ದ. ಸಾಜಿದ್ ಮತ್ತು ಜಾವೇದ್ ಇಬ್ಬರೂ ಅಪರಾಧದಲ್ಲಿ ಭಾಗಿಯಾಗಿದ್ದಾರೆ ಎಂದು ಕುಟುAಬದವರು ಆರೋಪಿಸಿದ್ದಾರೆ.
ಪೊಲೀಸರು ಸಾಜಿದ್ನ ಬೆನ್ನು ಹತ್ತಿದ್ದು, ಆತ ಸಿಕ್ಕಿಬಿದ್ದಾಗ ಪೊಲೀಸರ ಗನ್ ಕಸಿದುಕೊಂಡು ಅವರ ಮೇಲೆ ಗುಂಡು ಹಾರಿಸಲು ಯತ್ನಿಸಿದ್ದ. ಪೊಲೀಸರು ಗುಂಡು ಹಾರಿಸಿ ಆತನನ್ನು ಕೊಂದುಹಾಕಿದ್ದಾರೆ.
ಇನ್ಸ್ಪೆಕ್ಟರ್ಗೆ ಗುಂಡು ತಗುಲಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಜಾವೇದ್ ಇನ್ನೂ ನಾಪತ್ತೆಯಾಗಿದ್ದಾನೆ. ಸಹೋದರರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಕೊಲೆಯ ಹಿಂದಿನ ಉದ್ದೇಶ ಇದುವರೆಗೆ ದೃಢಪಟ್ಟಿಲ್ಲ. ಸಾಜಿದ್ ಮತ್ತು ವಿನೋದ್ ನಡುವೆ ವಿವಾದ ಇದ್ದಿರಬಹುದು ಎಂದು ಊಹಿಸಲಾಗಿದೆ. ಆದರೆ ಅಂಥ ಯಾವುದೂ ಇಲ್ಲ ಎಂದು ವಿನೋದ್ ನಿರಾಕರಿಸಿದ್ದಾರೆ.


