Tuesday, October 21, 2025
Flats for sale
Homeಜಿಲ್ಲೆಉಡುಪಿ: ಸಂತೆಕಟ್ಟೆ ಅಂಡರ್‌ಪಾಸ್‌ ಬಳಿ ಸರ್ವೀಸ್‌ ರಸ್ತೆ ಕುಸಿತ.

ಉಡುಪಿ: ಸಂತೆಕಟ್ಟೆ ಅಂಡರ್‌ಪಾಸ್‌ ಬಳಿ ಸರ್ವೀಸ್‌ ರಸ್ತೆ ಕುಸಿತ.

ಉಡುಪಿ : ಉಡುಪಿಯ ಸಂತೆಕಟ್ಟೆಯಲ್ಲಿ ಕೆಳಸೇತುವೆ ನಿರ್ಮಾಣವಾಗುತ್ತಿರುವ ಸ್ಥಳಕ್ಕೆ ಹೊಂದಿಕೊಂಡಿರುವ ಸರ್ವೀಸ್ ರಸ್ತೆ ಜುಲೈ 10, ಸೋಮವಾರ ಕುಸಿದು ಬಿದ್ದಿದೆ. ಅಂಡರ್‌ಪಾಸ್‌ನ ತಡೆಗೋಡೆ ಕೂಡ ಭಾಗಶಃ ಕುಸಿದಿದೆ.

ಈ ಘಟನೆಯಿಂದ ಸರ್ವೀಸ್ ರಸ್ತೆ ಸಂಪೂರ್ಣ ಕುಸಿಯುವ ಭೀತಿ ಎದುರಾಗಿದೆ. ಕಾಮಗಾರಿಯ ಉಸ್ತುವಾರಿ ಎಂಜಿನಿಯರ್ ಸ್ಥಳಕ್ಕೆ ಆಗಮಿಸದ ಕಾರಣ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.

ಈ ನಡುವೆ ಪರ್ಯಾಯ ರಸ್ತೆ ಕಲ್ಪಿಸುವಂತೆ ಇಲ್ಲಿನ ನಿವಾಸಿಗಳು ಒತ್ತಾಯಿಸಿದ್ದಾರೆ. ಈ ಪ್ರದೇಶದಲ್ಲಿ ಸುಮಾರು 350 ಮನೆಗಳಿವೆ. ಪರ್ಯಾಯ ವ್ಯವಸ್ಥೆ ಕಲ್ಪಿಸದಿದ್ದಲ್ಲಿ ಹಾಗೂ ಅಂಡರ್‌ಪಾಸ್‌ ಕಾಮಗಾರಿ ನಿಲ್ಲಿಸದಿದ್ದರೆ ಪ್ರತಿಭಟನೆ ನಡೆಸುವುದಾಗಿ ನಿವಾಸಿಗಳು ಎಚ್ಚರಿಕೆ ನೀಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular