Saturday, July 25, 2026
Homeಜಿಲ್ಲೆಉಡುಪಿ ; ಶ್ರೀ ಲಕ್ಷ್ಮೀ ವರತೀರ್ಥ ಶ್ರೀಪಾದರ 5ನೇ ವರ್ಷದ ಆರಾಧನೆ.

ಉಡುಪಿ ; ಶ್ರೀ ಲಕ್ಷ್ಮೀ ವರತೀರ್ಥ ಶ್ರೀಪಾದರ 5ನೇ ವರ್ಷದ ಆರಾಧನೆ.

ಉಡುಪಿ ; ಶ್ರೀ ಶಿರೂರುಮಠದ ಕೀರ್ತಿಶೇಷ ಶ್ರೀಲಕ್ಷ್ಮೀವರತೀರ್ಥ ಶ್ರೀಪಾದರ ಪೂರ್ವಾಶ್ರಮದ ಕುಟುಂಬಿಕರಿಂದ ಶ್ರೀಪಾದರ ಐದನೇವರ್ಷದ ಆರಾಧನೆಯು ಉಡುಪಿಯ ಶ್ರೀರಾಘವೇಂದ್ರಮಠದಲ್ಲಿ ವೈಭವದಿಂದ ಜರಗಿತು.

ಶ್ರೀರಾಘವೇಂದ್ರ ಗುರುಸಾರ್ವಭೌಮರ ಸಮ್ಮುಖದಲ್ಲಿ ಪ್ರಾರ್ಥನೆ ಸಲ್ಲಿಸಿದ ನಂತರ ಪವಮಾನ ಕಲಶಾಭಿಷೇಕ ಹೋಮ ಹಾಗೂ ವಿರಜಾ ಹೋಮವನ್ನು ವೇದಮೂರ್ತಿ ಶ್ರೀಸುಬ್ಬಣ್ಣ ನಡೆಸಿಕೊಟ್ಟರು.

ತದನಂತರ ಶ್ರೀಲಕ್ಷ್ಮೀವರತೀರ್ಥ ಶ್ರೀಪಾದರ ಮೃತ್ತಿಕಾ ವೃಂದಾವನಕ್ಕೆ ಪಂಚಾಮೃತಾಭಿಷೇಕ ಹಾಗೂ ವಿಶೇಷ ಪೂಜೆಯನ್ನು ಪಿ.ಲಾತವ್ಯಆಚಾರ್ಯರು ನೆರವೇರಿಸಿದರು.ಅಪರಾಹ್ನ ಅನ್ನಸಂತರ್ಪಣೆ ಜರಗಿತು.

ಶ್ರೀಲಕ್ಷ್ಮೀವರತೀರ್ಥಶ್ರೀಪಾದರ ಬಗ್ಗೆ ವೇದಮೂರ್ತಿ ಅಗ್ರಹಾರ ಶ್ರೀಲಕ್ಷ್ಮೀನಾರಾಯಣ ತಂತ್ರಿಯವರು ಸ್ವರಚಿತ ಚರಮ ಶ್ಲೋಕವನ್ನು ವಾಚಿಸಿದರು.

ಈ ಶುಭಸಂದರ್ಭದಲ್ಲಿ ಶ್ರೀರಾಯರಮಠದ ಶ್ರೀಜಯತೀರ್ಥ ಆಚಾರ್ಯ, ಅಪ್ಪಣ್ಣಆಚಾರ್ಯ, ಶ್ರೀಹರಿಕೃಷ್ಣ ಪುನರೂರು, ಸೊಂಡೂರು ಪ್ರಹ್ಲಾದಆಚಾರ್ಯ, ವಿ.ಮೋಹನ್ ಮುಂಬೈ, ಅಗ್ರಹಾರ ಅನಂತತಂತ್ರಿ, ಚೆನ್ನೈನ ರಾಜಗೋಪಾಲ್, ಪ್ರಸಾದ, ಶ್ರೀಪಾದರ ಪೂರ್ವಾಶ್ರಮದ ಸಹೋದರರಾದ ಪಿ.ವಾದಿರಾಜ ಆಚಾರ್ಯ, ಪಿ.ಶ್ರೀನಿವಾಸ ಆಚಾರ್ಯ, ಪಿ.ವೃಜನಾಥ ಆಚಾರ್ಯ,ಗಾಂಧಿ ಆಸ್ಪತ್ರೆಯ ಡಾ!!ವ್ಯಾಸರಾಜ ತಂತ್ರಿ, ಅಕ್ಷೋಭ್ಯ ಆಚಾರ್ಯ, ಅರ್ಜುನ್ ಆಚಾರ್ಯ,ವಿಶಾಲ ಆಚಾರ್ಯ, ಹರೀಶ ಜೋಯಿಸ್, ಲಕ್ಷ್ಮೀಶ ಜೋಯಿಸ್, ಜಯರಾಮ ರಾವ್, ಮಡಾಮಕ್ಕಿ ವೇದವ್ಯಾಸ ತಂತ್ರಿ,ಶಂಕರನಾರಾಯಣ ಹೊಳ್ಳ ಹಾಗೂ ಇನ್ನೂ ಅನೇಕರು ಶ್ರೀಪಾದರ ಆರಾಧನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಕೇಮಾರು ಸಾಂದೀಪನಿ ಮಠದ ಆಶ್ರಮದಲ್ಲಿ ಶ್ರೀಈಶವಿಠಲದಾಸ ಸ್ವಾಮೀಜಿಯವರು ಶಿರೂರು ಶ್ರೀಪಾದರ ಆರಾಧನಾ ನಿಮಿತ್ತ ವಿಶೇಷ ಪೂಜೆ ಹಾಗೂ ಪುಷ್ಪಾರ್ಚನೆಯನ್ನು ಆಯೋಜಿಸಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular