Thursday, March 12, 2026
Flats for sale
Homeಜಿಲ್ಲೆಉಡುಪಿ : ಬಸ್ಸಿನಲ್ಲಿ ಅಸ್ವಸ್ಥಗೊಂಡ ಯುವತಿಯನ್ನು ನೇರವಾಗಿ ಆಸ್ಪತ್ರೆಗೆ ಸಾಗಿಸಿ ಪ್ರಾಣ ಉಳಿಸಿದ ​ ಚಾಲಕ,ನಿರ್ವಾಹಕ..!

ಉಡುಪಿ : ಬಸ್ಸಿನಲ್ಲಿ ಅಸ್ವಸ್ಥಗೊಂಡ ಯುವತಿಯನ್ನು ನೇರವಾಗಿ ಆಸ್ಪತ್ರೆಗೆ ಸಾಗಿಸಿ ಪ್ರಾಣ ಉಳಿಸಿದ ​ ಚಾಲಕ,ನಿರ್ವಾಹಕ..!

ಉಡುಪಿ : ಕಳೆದ ವಾರ ಮಂಗಳೂರಿನಲ್ಲಿ ವಿದ್ಯಾರ್ಥಿನಿಗೆ ಥಟ್ಟನೆ ಎದೆನೋವು ಕಾಣಿಸಿಕೊಂಡು ತೀವ್ರ ಅಸ್ವಸ್ಥ ಗೊಂಡ ಯುವತಿಯನ್ನು ಬಸ್ ಚಾಲಕ ಹಾಗೂ ನಿರ್ವಾಹಕ ಬಸ್ಸಿನಲ್ಲಿಯೇ ಆಸ್ಪತ್ರೆಗೆ ಸಾಗಿಸಿ ಅಮೂಲ್ಯವಾದ ಜೀವವನ್ನು ಉಳಿಸಿ ಮೆಚ್ಚುಗೆಗೆ ಪಾತ್ರರಾದ ಬೆನ್ನಲ್ಲೇ ಮತ್ತೊಂದು ಘಟನೆ ಉಡುಪಿಯಲ್ಲಿ ನಡೆದಿದೆ.

ಸೋಮವಾರ ಬೆಳಗ್ಗೆ ಈ ಘಟನೆ ನಡೆದಿದ್ದು ನವೀನ್ ಹೆಸರಿನ ಬಸ್ ಶಿರ್ವದಿಂದ ಉಡುಪಿಗೆ ತೆರಳುತ್ತಿತ್ತು. ನಗರದ ಹಳೇ ತಾಲೂಕು ಕಚೇರಿಗೆ ಬಸ್ ಬರುತ್ತಿದ್ದಂತೆ ಯುವತಿಯೊಬ್ಬಳು ವಾಂತಿ ಮಾಡಿಕೊಂಡು ಪ್ರಜ್ಞೆ ತಪ್ಪಿ ಬಿದ್ದಿದ್ದಾಳೆ. ಕೂಡಲೆ ಚಾಲಕ ಶಶಿಕಾಂತ್​ ಬಸ್​ ಅನ್ನು ಟಿಎಂಎ ಪೈ ಆಸ್ಪತ್ರೆಗೆ ಕಡೆಗೆ ತಿರುಗಿಸಿದರು. ‌ಬಸ್​ ಅನ್ನು ನೇರವಾಗಿ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕದ ಬಳಿಕ ತೆಗೆದುಕೊಂಡು ಹೋಗಿ ಯುವತಿಯನ್ನು ದಾಖಲಿಸಿದರು. ತಕ್ಷಣ ಯುವತಿಗೆ ಪ್ರಥಮ ಚಿಕಿತ್ಸೆಗೆ ನೀಡಲಾಯಿತು. ಈ ವಿಚಾರವನ್ನು ಯುವತಿಯ ಮನೆಯವರಿಗೆ ತಿಳಿಸಲಾಯಿತು. ಪೋಷಕರು ಆಸ್ಪತ್ರೆಗೆ ಬರುವ ತನಕ ಯುವತಿಯ ಚಿಕಿತ್ಸೆಗೆ ಚಾಲಕ ಹಾಗೂ ನಿರ್ವಾಹಕ ಸಹಕಾರ ನೀಡಿದರು. ಬಸ್ ಸಿಬ್ಬಂದಿ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular