Wednesday, February 4, 2026
Flats for sale
Homeಜಿಲ್ಲೆಉಡುಪಿ : ನಡುರಸ್ತೆಯಲ್ಲಿ ಬಸ್ ನಿಲ್ಲಿಸಿ ಪಟಾಕಿ ಸಿಡಿಸಿ ಕೇರಳ ವಿದ್ಯಾರ್ಥಿಗಳ ಹುಚ್ಚಾಟ,ವಿಡಿಯೋ ವೈರಲ್.

ಉಡುಪಿ : ನಡುರಸ್ತೆಯಲ್ಲಿ ಬಸ್ ನಿಲ್ಲಿಸಿ ಪಟಾಕಿ ಸಿಡಿಸಿ ಕೇರಳ ವಿದ್ಯಾರ್ಥಿಗಳ ಹುಚ್ಚಾಟ,ವಿಡಿಯೋ ವೈರಲ್.

ಉಡುಪಿ : ಇತ್ತಿಚ್ಚಿನ ಟೂರಿಸ್ಟ್ ಬಸ್ ಗಳು ಬೇಕಾಬಿಟ್ಟಿ ಲೈಟ್ ಸೌಂಡ್ ಹಾಕಿಕೊಂಡು ಸಂಚಾರಿ ನಿಯಮವನ್ನು ಉಲ್ಲಂಘಿಸುತ್ತಿರುವುದು ಅಲ್ಲಲ್ಲಿ ಕಂಡುಬರುತ್ತಿದೆ .ಅದರಂತೆಯೇ ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಹೆಜಮಾಡಿ ಟೋಲ್ ಬಳಿ ಕೇರಳದಿಂದ ಉಡುಪಿ ಕಡೆ ಪ್ರವಾಸಕ್ಕೆ ಬಂದ ವಿದ್ಯಾರ್ಥಿಗಳು ಬಸ್ಸನ್ನು ನಡುರಸ್ತೆಯಲ್ಲಿ ಇರಿಸಿ ಮನಬಂದಂತೆ ಡಿ.ಜೆ ಸೌಂಡ್ ಹಾಕಿ ಸಾರ್ವಜನಿಕರಿಗೆ ತೊಂದರೆ ಉಂಟುಮಾಡುವಂತೆ ಕುಣಿದು ಪಟಾಕಿ ಸಿಡಿಸಿ ಹುಚ್ಚಾಟ ಮೆರೆದಿದ್ದಾರೆ.

ಕೇರಳದಿಂದ ಪ್ರವಾಸಕ್ಕೆಂದು ಎರಡು ಬಸ್ ಗಳಲ್ಲಿ ವಿದ್ಯಾರ್ಥಿಗಳು ಬಂದಿದ್ದು ಟೋಲ್ ಗೇಟ್ ಬಳಿ ಬಸ್ ನಿಲ್ಲಿಸಿ ವಿದ್ಯಾರ್ಥಿಗಳ ಹುಚ್ಚಾಟದ ವಿಡಿಯೋ ಸಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಎಲ್ಲೆಡೆ ಆಕ್ರೋಶ ವ್ಯಕ್ತವಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular