Monday, March 16, 2026
Flats for sale
Homeಜಿಲ್ಲೆಉಡುಪಿ : ಧರ್ಮಸ್ಥಳದ ವತಿಯಿಂದ ಅಯೋಧ್ಯೆಯ ಶ್ರೀರಾಮ ಮಂದಿರಕ್ಕೆ ನಿತ್ಯ ಪೂಜೆಗಾಗಿ ಬೆಳ್ಳಿ ಸಾಮಗ್ರಿಗಳ ಹಸ್ತಾಂತರ.

ಉಡುಪಿ : ಧರ್ಮಸ್ಥಳದ ವತಿಯಿಂದ ಅಯೋಧ್ಯೆಯ ಶ್ರೀರಾಮ ಮಂದಿರಕ್ಕೆ ನಿತ್ಯ ಪೂಜೆಗಾಗಿ ಬೆಳ್ಳಿ ಸಾಮಗ್ರಿಗಳ ಹಸ್ತಾಂತರ.

ಉಡುಪಿ : ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ನಿತ್ಯ ಪೂಜೆಗಾಗಿ ನೀಡಿದ ಬೆಳ್ಳಿ ಪೂಜಾ ಸಾಮಗ್ರಿಗಳನ್ನು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಸದಸ್ಯರಾಗಿರುವ ಪೇಜಾವರ ಮಠದ ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಅವರಿಗೆ ಹಸ್ತಾಂತರಿಸಲಾಯಿತು. ಜನವರಿ 15, ಸೋಮವಾರ ಮಠದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರ ಸಹೋದರ ಹರ್ಷೇಂದ್ರ ಕುಮಾರ್ ಅವರು ಪೇಜಾವರ ಶ್ರೀಗಳಿಗೆ ಬೆಳ್ಳಿಯ ಸಾಮಗ್ರಿಗಳನ್ನು ಹಸ್ತಾಂತರಿಸಿದರು.

ದಾನ ಮಾಡಿದ ಬೆಳ್ಳಿಯ ವಸ್ತುಗಳಲ್ಲಿ ಕಲಶ, ಅಭಿಷೇಕ ಶಂಖ, ತಟ್ಟೆಗಳು, ಆರತಿ, ಬೀಸಣಿಗೆ, ಗಂಟೆ ಮತ್ತು ಅಭಿಷೇಕ ತೀರ್ಥ ಪಾತ್ರೆ ಸೇರಿವೆ.

ಧರ್ಮಸ್ಥಳದ ಪ್ರಧಾನ ಅರ್ಚಕ ರಾಮಕೃಷ್ಣ ಕಲ್ಲೂರಾಯ ಮತ್ತಿತರರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular