Saturday, March 7, 2026
Flats for sale
Homeಜಿಲ್ಲೆಉಡುಪಿ : ಗಂಗೊಳ್ಳಿ ಜೆಟ್ಟಿಯಲ್ಲಿ ಅಗ್ನಿದುರಂತ, 8 ಬೋಟುಗಳು ಸುಟ್ಟು ಭಸ್ಮ.

ಉಡುಪಿ : ಗಂಗೊಳ್ಳಿ ಜೆಟ್ಟಿಯಲ್ಲಿ ಅಗ್ನಿದುರಂತ, 8 ಬೋಟುಗಳು ಸುಟ್ಟು ಭಸ್ಮ.

ಉಡುಪಿ : ಉಡುಪಿಯ ಬೈಂದೂರು ತಾಲೂಕಿನ ಗಂಗೊಳ್ಳಿ ಜೆಟ್ಟಿಯಲ್ಲಿ ಸೋಮವಾರ ಸಂಭವಿಸಿದ ಅಗ್ನಿ ಅವಘಡದಲ್ಲಿ ದೋಣಿಗಳು ಮತ್ತು ಮೀನುಗಾರಿಕೆ ಉಪಕರಣಗಳು ಸುಟ್ಟು ಭಸ್ಮವಾಗಿವೆ.

ಏಳು ದೋಣಿಗಳು ಜಖಂಗೊಂಡಿದ್ದು, ನಿಲ್ಲಿಸಿದ್ದ ಎರಡು ಬೈಕ್‌ಗಳಿಗೂ ಹಾನಿಯಾಗಿದೆ ಎಂದು ತಿಳಿದು ಬಂದಿದೆ. ಬೆಂಕಿ ನಂದಿಸಲು ಎರಡು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿವೆ.

ದೀಪಾವಳಿ ಹಬ್ಬದ ಹಿನ್ನಲೆ ಪೂಜೆ ನಡೆಯುವ ಸಂದರ್ಭದಲ್ಲಿ ಪಟಾಕಿಯ ಕಿಡಿ ಹೊತ್ತಿ ಈ ಘಟನೆ ನಡೆದಿರಬಹುದು ಎಂದು ಶಂಕಿಸಲಾಗಿದೆ , ಬೆಂಕಿ ಇನ್ನೂ ನಿಯಂತ್ರಣಕ್ಕೆ ಬಂದಿಲ್ಲ. ಸ್ಥಳದಲ್ಲಿ ಭಾರೀ ಸಂಖ್ಯೆಯಲ್ಲಿ ಜನ ಜಮಾಯಿಸಿದ್ದು,ಸುಮಾರು ಕೋಟ್ಯಾಂತರ ರೂಪಾಯಿ ನಷ್ಟ ಸಂಭವಿಸಿರಬಹುದೆಂದು ಅಂದಾಜಿಸಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular