Thursday, November 5, 2026
Homeಜಿಲ್ಲೆಉಡುಪಿ : ಕಾಪು ಜೇಸಿಐಗೆ ವಲಯದ ಅತ್ಯುತ್ತಮ ಘಟಕ ಪ್ರಶಸ್ತಿ ಪ್ರದಾನ.

ಉಡುಪಿ : ಕಾಪು ಜೇಸಿಐಗೆ ವಲಯದ ಅತ್ಯುತ್ತಮ ಘಟಕ ಪ್ರಶಸ್ತಿ ಪ್ರದಾನ.

ಉಡುಪಿ : ಕಾಪು ಪರಿಸರದಲ್ಲಿ ಸೇವಾ ಚಟುವಟಿಕೆಗಳ ಮೂಲಕ ಗುರುತಿಸಿಕೊಂಡಿರುವ ಕಾಪು ಜೇಸಿಐಗೆ 2026ನೇ ಸಾಲಿನ ವಲಯ 15ರ ಅತ್ಯುತ್ತಮ ಘಟಕ ಪ್ರಶಸ್ತಿ ಲಭಿಸಿದೆ.

ಮಂಗಳೂರಿನ ಅಡ್ಯಾರ್ ಗಾರ್ಡನ್ ನಲ್ಲಿ ಅಕ್ಟೋಬರ್ 31 ಮತ್ತು ನವೆಂಬರ್ 1ರಂದು ನಡೆದ ಆರ್ಯ ವಲಯ ಸಮ್ಮೇಳನದಲ್ಲಿ ವಲಯಾಧ್ಯಕ್ಷ ಸಂತೋಷ್‌ ಶೆಟ್ಟಿ ಅವರು ಕಾಪು ಜೇಸಿಐಗೆ ವಲಯದ ‘ಅತ್ಯುತ್ತಮ ಘಟಕ’ ಪ್ರಶಸ್ತಿ ಪ್ರದಾನ ಮಾಡಿದರು.

2026ನೇ ಸಾಲಿನ ಘಟಕಾಧ್ಯಕ್ಷ ವಿಕ್ಕಿ ಪೂಜಾರಿ ಮಡುಂಬು ಅವರ ನಾಯಕತ್ವದಲ್ಲಿ ವಲಯ ಮತ್ತು ರಾಷ್ಟ್ರೀಯ ಮಟ್ಟದ ಸೂಚನಾ ಕಾರ್ಯಕ್ರಮಗಳ ಅನುಷ್ಠಾನದ ಜತೆಗೆ ಸಮಾಜಮುಖಿ ಸೇವಾ ಚಟುವಟಿಕೆಗಳು, ತರಬೇತಿ ಶಿಬಿರ ಹಾಗೂ ವಿವಿಧ ಜನಪರ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿದ್ದಕ್ಕಾಗಿ ಈ ಗೌರವ ಸಂದಿದೆ ಎಂದು ಪ್ರಕಟಣೆ ತಿಳಿಸಿದೆ.

ಮಂಗಳೂರಿನಲ್ಲಿ ನಡೆದ ವಲಯ ಸಮ್ಮೇಳನದಲ್ಲಿ ಜೇಸಿಐ ಕಾಪು ಘಟಕಕ್ಕೆ ಪ್ರಶಸ್ತಿ ಪ್ರದಾನ ಮಾಡಲಾಯಿತು

ವಲಯ ಉಪಾಧ್ಯಕ್ಷ ಅರುಣ್ ಮಾಂಜ, ಪೂರ್ವ ವಲಯಾಧ್ಯಕ್ಷ ರಾಕೇಶ್ ಕುಂಜೂರು, ಪೂರ್ವ ವಲಯ ಉಪಾಧ್ಯಕ್ಷೆ ಸೌಮ್ಯ ರಾಕೇಶ್, ಕಾಪು ಜೇಸಿಐ ಘಟಕಾಧ್ಯಕ್ಷ ವಿಕ್ಕಿ ಪೂಜಾರಿ ಮಡುಂಬು, ಕಾರ್ಯದರ್ಶಿ ಶ್ರುತಿ ಶೆಟ್ಟಿ, ನಿಕಟಪೂರ್ವ ಅಧ್ಯಕ್ಷೆ ಅನಿತಾ ಹೆಗ್ಡೆ, ಪೂರ್ವಾಧ್ಯಕ್ಷರಾದ ಸುಧಾಕರ್ ಸಾಲ್ಯಾನ್, ಜಗದೀಶ್ ಬಂಗೇರ, ರಮೇಶ್ ನಾಯ್ಕ್ ಸುಖಲಾಕ್ಷಿ ಬಂಗೇರ, ಜೇಸಿಐ ಉಡುಪಿ ಶಿವಳ್ಳಿ ಘಟಕದ ಅಧ್ಯಕ್ಷ ವಿನೋದ್‌ ಶೆಟ್ಟಿ, ಸದಸ್ಯರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular