ಉಡುಪಿ : ಸೌರಮಾಸದ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ದಿನಾಂಕ 14/09/2025 ರವಿವಾರ, ಉಡುಪಿ ವಲಯದ ಪ್ರಜಾಪಿತ ಬ್ರಹ್ಮಕುಮಾರೀಸ್ ಈಶ್ವರೀಯ ವಿಶ್ವ ವಿದ್ಯಾಲಯದಲ್ಲಿ ಮಕ್ಕಳಿಗಾಗಿ ನಡೆದ “ಮುದ್ದುಕೃಷ್ಣ ಮುದ್ದುರಾಧೆ ಸ್ವರ್ಧೆ” ಕಾರ್ಯಕ್ರಮದ ಭವ್ಯ ಸಾಂಸ್ಕೃತಿಕ ಉತ್ಸವ ಬಹಳ ಸಡಗರದಿಂದ ನಡೆಯಿತು.


ಕಾರ್ಯಕ್ರಮದಲ್ಲಿ ಅಧ್ಯಕ್ಷರಾಗಿ ಉಡುಪಿ ನಗರಸಭಾ ಅಧ್ಯಕ್ಷರಾದ ಶ್ರೀ ಪ್ರಭಾಕರ ಪೂಜಾರಿಯವರು, ಅತಿಥಿಗಳಾಗಿ ಗಣ್ಯರುಗಳಾದ ಸಿಲಾಸ್ ಪಿ.ಯು. ಕಾಲೇಜಿನ ಪ್ರಾಂಶುಪಾಲೆ ಡಾ. ಅಣ್ಣಪೂರ್ಣಾ ರಾವ್, ಎನ್.ಎಸ್.ಜಿ. ಕಮಾಂಡೋ ವಿಜಯ್ ಎಸ್. ಪುತ್ರನ್ ಹಾಗೂ ನಿವೃತ್ತ ಸೈನಿಕ ಕೋತಂಡ ರಾಮನ್ ಪಾಲ್ಗೊಂಡು ಸಂದರ್ಭನುಸಾರ ಮಾತಾಡಿದರು.
ಕಾರ್ಯಕ್ರಮದಲ್ಲಿ ಭಾರತದ ಸಾಂಸೃತಿಕ ವೈಭವ ಶೋಭೆಯಾದ ಭರತನಾಟ್ಯದಲ್ಲಿ ಅದ್ವಿತೀಯ ಸಾಧನೆ ಮಾಡಿದ ಯುವ ಪ್ರತಿಭೆ ಕುಮಾರಿ ಅದಿತಿ ಕೇಶವ ಮೆಹೆಂದಳೆ ಮತ್ತು ಅಖಿಲ ಭಾರತ ಮಟ್ಟದಲ್ಲಿ ತನ್ನ ಉತ್ಕೃಷ್ಟ ಶೈಕ್ಷಣಿಕ ಸಾಧನೆ ಹಾಗೂ ಧೈರ್ಯ/ಸಾಹಸ ದ ಕ್ಷೇತ್ರದಲ್ಲಿ ಭಾರತ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದಿಂದ ಕೊಡಮಾಡುವ ಅತ್ಯುನ್ನತ ಗೌರವಯುತ ಪ್ರಶಸ್ತಿಯಾದ “ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪ್ರಶಸ್ತಿ (PMRBP)”ಗೆ ನಾಮನಿರ್ದೇಶನಗೊಂಡಿದ್ದಕ್ಕಾಗಿ ಅಕಾಡಮಿ ಆಫ್ ಜನರಲ್ ಎಜುಕೇಶನ್ ಮಣಿಪಾಲದ ಟಿ.ಎ.ಪೈ ಇಂಗ್ಲಿಷ್ ಮೀಡಿಯಂ ಹೈಸ್ಕೂಲ್ ಕುಂಜಿಬೆಟ್ಟು ಉಡುಪಿಯ ಹತ್ತನೇ ತರಗತಿಯ ವಿದ್ಯಾರ್ಥಿ ಮಾಸ್ಟರ್ ದೀಪೇಶ್ ದೀಪಕ್ ಶೆಣೈ ರನ್ನು ಪ್ರಶಂಸಾಪೂರ್ವಕ ಸನ್ಮಾನಿಸಲಾಯಿತು.
ಕಾರ್ಯಕ್ರಮವು ಬ್ರಹ್ಮಕುಮಾರಿ ದೇವಕಿಯವರ ಪ್ರಾರ್ಥನೆ, ಬ್ರಹ್ಮಕುಮಾರ ರಘುರಾಮ್ ಅವರ ಸ್ವಾಗತ ಮತ್ತು ಸಂಸ್ಥೆಯ ಪರಿಚಯ, ಉಪಸ್ಥಿತರಿದ್ದ ಅತಿಥಿಯವರಿಂದ ದೀಪಪ್ರಜ್ವಲನ ಹಾಗೂ ವೈಯುಕ್ತಿಕ ನೃತ್ಯವು ಅಶ್ವಿ ಶೆಟ್ಟಿ, ಐಸಿರಿ, ವಾಗ್ನಿ, ಬಿ. ಕೆ. ಸರಿತಾ. ಬಿ.ಕೆ. ಮಾಲಿನಿ ತಂಡದಿಂದ ಮತ್ತು ಸಮೂಹ ನೃತ್ಯವು ಕು.ವಂಶಿ ವೈ ಕೋಟಿಯಾನ್, ಕು. ಶಮಿತಾ ಜಿ. ಯು ಗಾಣಿಗ ಮತ್ತು ಕು. ಕೈರಾ ಪಿ.ಸಾಲಿಯಾನ್ ತಂಡದಿಂದ ನಡೆಯಿತು. ಸಂಗೀತದಲ್ಲಿ ರಕ್ಷಾ, ಬಿ ಕೆ ಲಕ್ಷ್ಮೀ, ಬಿ ಕೆ ದೇವಕಿಯವರು ಸಹಕರಿಸಿ, ಕೊಳಲು ವಾದ್ಯವನ್ನು ಪ್ರದ್ಯುಮ್ನ ಭಾಗವತ್ ನಡೆಸಿದರು. ಮುದ್ದುಕೃಷ್ಣ ಮುದ್ದುರಾಧೆ ಸ್ವರ್ಧೆ ವೇಷದಲ್ಲಿ ತನುಶ್ರೀ, ನಿಕ್ಷಿತ್, ನಿರಿಷ, ರಕ್ಷಿತ್, ಅದ್ವಿತ್ ಬಂಗೇರ, ಆರ್ವಿಕಾ ಜಿ, ಆಚಾರ್ಯ ಪಾಲ್ಗೊಂಡರು. ಅತಿಥಿಗಳ ಭಾಷಣ, ಸನ್ಮಾನಿತರ ಅನಿಸಿಕೆಗಳು, ಅಧ್ಯಕ್ಷರ ಭಾಷಣ ಮತ್ತು ಧನ್ಯವಾದ ಸಮರ್ಪಣೆಯೊಂದಿಗೆ ಪಾಲ್ಗೊಂಡ ಎಲ್ಲಾರಿಗೂ ಸಾಂಪ್ರದಾಯಿಕ ಸಹಭೋಜನ ಮತ್ತು ಓಂ ಶಾಂತಿಃ ನಾದದೊಂದಿಗೆ ವೈಭವಯುತ ಕಾರ್ಯಕ್ರಮವು ತೆರೆಕಂಡಿತು.
ಪ್ರಜಾಪಿತ ಬ್ರಹ್ಮಕುಮಾರೀಸ್ ಈಶ್ವರೀಯ ವಿಶ್ವ ವಿದ್ಯಾಲಯವು ಅಂತರಾಷ್ಟ್ರೀಯ ಆಧ್ಯಾತ್ಮಿಕ ಮತ್ತು ಶೈಕ್ಷಣಿಕ ಸಂಸ್ಥೆಯಾಗಿದ್ದು, ರಾಜಸ್ಥಾನದ ಮೌಂಟ್ ಆಬುವಿನಲ್ಲಿ ಪ್ರಧಾನ ಕಚೇರಿ ಹೊಂದಿದೆ. ಪ್ರಸ್ತುತ ರಾಜಯೋಗಿನಿ ಬ್ರಹ್ಮಕುಮಾರಿ ಮೋಹಿನಿ ದೀದಿ ಆಡಳಿತ ಮುಖ್ಯಸ್ಥೆಯಾಗಿರುವ ಸಂಸ್ಥೆಯು ಮಹಿಳಾ ನೇತೃತ್ವದ ಮಾದರಿಯಾಗಿ ವಿಶ್ವದ 110ಕ್ಕೂ ಹೆಚ್ಚು ದೇಶಗಳಲ್ಲಿ ಕೇಂದ್ರಗಳನ್ನು ಹೊಂದಿದೆ. ಉಡುಪಿ ವಲಯವನ್ನು ರಾಜಯೋಗಿನಿ ಬ್ರಹ್ಮಕುಮಾರಿ ಸುಮಾ ದೀದಿ (+91 77955 32979 ) ಯವರು ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ.