ಉಜಿರೆ : ದಕ್ಷಿಣ ಕನ್ನಡ ಮತ್ತು ಚಿಕ್ಕಮಗಳೂರು ಜಿಲ್ಲೆಗೆ ಸಂಪರ್ಕಿಸುವ ಚಾರ್ಮಾಡಿ ಘಾಟ್ ನಲ್ಲಿ ಒಂಟಿ ಸಲಗ ಪ್ರತ್ಯಕ್ಷವಾಗಿದ್ದು ರಸ್ತೆಯಲ್ಲಿ ಚಲಿಸುವ ಸವಾರರಿಗೆ ಭಯಬೀತರಾದ ಘಟನೆ ನಡೆದಿದೆ.
ಚಾರ್ಮಾಡಿ ಘಾಟ್ ನ ಎರಡನೇ ತಿರುವಿನಲ್ಲಿ ರಸ್ತೆಯಲ್ಲಿ ಒಂಟಿ ಸಲಗ ತಿರುಗುತ್ತಿದ್ದರಿಂದ ವಾಹನ ಸಂಚಾರರಿಗೆ ಗಾಬರಿಯ ಗಲಿಬಿಲಿ ಉಂಟಾಗಿ ವಾಹನಗಳು ಸರತಿ ಸಾಲುಗಟ್ಟಿ ನಿಂತಿದ್ದವು. ಮುಂದೆ ಹೋಗಲು ಆಗದೆ ಹಿಂದೆ ಹೋಗಲು ಆಗದೆ ಸವಾರರು ಕಾಡಾನೆಯನ್ನು ಕಂಡು ಭಯಭೀತರಾದರು. ಬಳಿಕ ಅರಣ್ಯ ಇಲಾಖೆಗೆ ಮಾಹಿತಿ ತಿಳಿಸಿದ ಸವಾರರು ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿದ ನಂತರ ನಿಟ್ಟುಸಿರು ಬಿಟ್ಟಿದ್ದಾರೆ.


