Sunday, January 25, 2026
Flats for sale
Homeವಿದೇಶಆಸ್ಟ್ರೇಲಿಯಾ : ಸಿಡ್ನಿಯಲ್ಲಿ ಉಗ್ರರ ಗುಂಡಿನ ದಾಳಿ ; ಸಾವಿನ ಸಂಖ್ಯೆ 16 ಕ್ಕೆ ಏರಿಕೆ.

ಆಸ್ಟ್ರೇಲಿಯಾ : ಸಿಡ್ನಿಯಲ್ಲಿ ಉಗ್ರರ ಗುಂಡಿನ ದಾಳಿ ; ಸಾವಿನ ಸಂಖ್ಯೆ 16 ಕ್ಕೆ ಏರಿಕೆ.

ಆಸ್ಟ್ರೇಲಿಯಾ : ಇಲ್ಲಿನ ಸಿಡ್ನಿಯಲ್ಲಿ ಯಹೂದಿಗಳನ್ನು ಗುರಿಯಾಗಿಸಿಕೊಂಡು ನಡೆಸಿದ ಗುಂಡಿನ ದಾಳಿಯಲ್ಲಿ 16 ಮಂದಿ ಸಾವನ್ನಪ್ಪಿದ್ದಾರೆ. ಸಿಡ್ನಿ ಪೊಲೀಸರು ವಿದ್ವಂಸಕ ಕೃತ್ಯವನ್ನು ಭಯೋತ್ಪಾದಕ ದಾಳಿ ಎಂದು ಘೋಷಿಸಿದ್ದಾರೆ. ಇನ್ನು ಈ ಭೀಕರ ದಾಳಿ ನಡೆಸಿದ ಒಬ್ಬನನ್ನು ಪೊಲೀಸರು ಬಂಧಿಸಿದ್ದು ಆತನನ್ನು ನವೀದ್ ಅಕ್ರಮ್ ಎಂದು ಗುರುತಿಸಲಾಗಿದೆ.

ಸಿಡ್ನಿಯ ಬೊಂಡಿ ಬೀಚ್‌ನಲ್ಲಿ ಭಾನುವಾರ ಯಹೂದಿಗಳು ತಮ್ಮ ಸಾಂಪ್ರದಾಯಿಕ ಹನುಕ್ಕಾ ಹಬ್ಬದ ಆಚರಣೆಯಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಜನರ ಗುಂಪಿನ ಮಧ್ಯ ನುಗ್ಗಿದ ಇಬ್ಬರು ದುಷ್ಕರ್ಮಿಗಳು ಏಕಾಏಕಿ ಗುಂಡಿನ ಸುರಿಮಳೆ ಸುರಿಸಿದ್ದಾರೆ. ಮಕ್ಕಳು, ಮಹಿಳೆಯರು ಅಂತಲೂ ನೋಡದೇ ಗುಂಡು ಹಾರಿಸಿದ್ದಾರೆ. ಪೊಲೀಸ್ ಗುಂಡಿನ ದಾಳಿ ನಡೆಸಿದ ಇಬ್ಬರು ದುಷ್ಕರ್ಮಿಗಳ ಪೈಕಿ ಒಬ್ಬನ ಗುರುತು ಪತ್ತೆಹಚ್ಚಲಾಗಿದೆ. ಸಿಬ್ಬಂದಿ ಸೇರಿ ಒಟ್ಟು 12 ಮಂದಿ ಸಾವನ್ನಪ್ಪಿದ್ದು, 25ಕ್ಕೂ ಹೆಚ್ಚುಮಂದಿ ಗಾಯಗೊಂಡಿದ್ದಾರೆ. ಈ

ಯಹೂದಿಗಳ ಮೇಲೆ ಸಾಮೂಹಿಕ ಗುಂಡಿನ ದಾಳಿ ನಡೆಸಿದ ಒಬ್ಬನನ್ನು 24 ವರ್ಷದ ನವೀದ್ ಅಕ್ರಮ್ ಎಂದು ಗುರುತಿಸಲಾಗಿದೆ. ಕೃತ್ಯ ನಡೆದ ಸ್ಥಳದಲ್ಲಿ ದಾಳಿಕೋರ ನವೀದ್ ‘ಅಕ್ರಮ್‌ನ್ನು ಡ್ರೈವಿಂಗ್ ಲೈಸೆನ್ಸ್ ಪತೆ-ಯಾಗಿದ್ದು, ಗುರುತಿನ ಚೀಟಿಯಲ್ಲಿ ಆತ ಸಿಡ್ನಿಯ ನ್ಯೂಸೌಥ್ ವೆಲ್‌ನ ಬೊನ್ನಿರಿಗ್ ನಿವಾಸಿ ಎಂದು ತಿಳಿದುಬಂದಿದೆ. ಸದ್ಯ ಪೊಲೀಸರು ಈ ಚಾ ಮಾಹಿತಿ ಆಧರಿಸಿದ ಆತನ ಮನೆಯ ಮೇಲೆ ದಾಳಿ ನಡೆಸಿದ್ದು, ಆತನ ಹಿನ್ನೆಲೆ ಏನು?, ಉದ್ದೇಶ ಏನಿತ್ತು?, ಆತನ ಹಿಂದೆ ಯಾರಿದ್ದಾರೆ? ಎಂದು ಪೊಲೀಸರು ತೀವ್ರ ತನಿಖೆ ನಡೆಸುತ್ತಿದ್ದಾರೆ.

.

RELATED ARTICLES

LEAVE A REPLY

Please enter your comment!
Please enter your name here

Most Popular