ಅಹಮದಾಬಾದ್ : ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಸೂಪರ್ ೮ರ ಹಂತದ ಮೊದಲ ಪಂದ್ಯದಲ್ಲಿ ಸೌತ್ಆಫ್ರಿಕಾ ವಿರುದ್ಧ ಟೀಂ ಇಂಡಿಯಾ ೭೬ರನ್ಗಳ ಅಂತರದಿಂದ ಸೋಲು ಕಂಡಿತು. ಸೋಲಿನ ಬೆನ್ನಲ್ಲೇ ಭಾರತದ ಮಾಜಿ ಆಲ್ರೌಂಡರ್ ರವಿಚAದ್ರನ್ ಅಶ್ವಿನ್ ತಂಡದ ಬದಲಾವಣೆ ಕುರಿತು ಟೀಕಿಸಿದ್ದಾರೆ.
ಭಾರತದ ಯಾವೊಬ್ಬ ಬ್ಯಾಟರ್ ಕೂಡ ಕ್ರಿಸ್ನಲ್ಲಿ ಸ್ಥಿರ ಪ್ರದರ್ಶನ ನೀಡದ ಕಾರಣ ಪಂದ್ಯ ಸೋಲಬೇಕಾಯಿತು ತಂಡದ ಉಪನಾಯಕ
ಅಕ್ಷರ್ ಪಟೇಲ್ ಅವರನ್ನ ಹೊರಗಿಟ್ಟು ವಾಷಿಂಗ್ಟನ್ ಸುಂದರ್ ಆಡಿಸಲಾಯಿತು. ಟೀಂಇAಡಿಯಾದ ಈ ನಿರ್ಧಾರವ್ನನು ಆರ್.ಅಶ್ವಿನ್
ಟೀಕಿಸಿದ್ದಾರೆ. ಐಪಿಎಲ್ ಟೂರ್ನಿಮೆಂಟ್ನಲ್ಲಿ ಆಟಗಾರರ ಬದಲಾವಣೆ ಸಹಜ. ಆದರೇ ಐಸಿಸಿ ವಿಶ್ವಕಪ್ನಲ್ಲಿ ಈ ಪ್ರಯೋಗ ಮಾಡಬಾರದು. ವಾಷಿಂಗ್ಟನ್ ಸುಂದರ್ ಆಯ್ಕೆ ಉಚಿತ. ಆದರೇ ಅಕ್ಷರ್ ಪಟೇಲ್ ಈ ಹಿಂದಿನ ಟಿ೨೦ ವಿಶ್ವಕಪ್ನಲ್ಲಿ ಕೊಹ್ಲಿಜತೆ ಉತ್ತಮ ಜತೆಯಾಟವಾಡಿದ್ದರು ಎಂದು ತಿಳಿಸಿದರು.


