Monday, March 9, 2026
Flats for sale
Homeಕ್ರೀಡೆಅಹಮದಾಬಾದ್ : ಸಂಜು ಸಾಮ್ಸನ್,ಆಭಿಶೇಕ್ ಶರ್ಮ ಅಕ್ರಮಣಕಾರಿ ಬ್ಯಾಟಿಂಗ್‌, ಟಿ20 ವಿಶ್ವಕಪ್ ಫೈನಲ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ...

ಅಹಮದಾಬಾದ್ : ಸಂಜು ಸಾಮ್ಸನ್,ಆಭಿಶೇಕ್ ಶರ್ಮ ಅಕ್ರಮಣಕಾರಿ ಬ್ಯಾಟಿಂಗ್‌, ಟಿ20 ವಿಶ್ವಕಪ್ ಫೈನಲ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತಕ್ಕೆ ಭರ್ಜರಿ ಜಯ.

ಅಹಮದಾಬಾದ್ ; 2026ರ ಟಿ20 ವಿಶ್ವಕಪ್ ಫೈನಲ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಭರ್ಜರಿ ಜಯ ಸಾಧಿಸುವ ಮೂಲಕ ಭಾರತ ತಂಡವು ಐತಿಹಾಸಿಕವಾಗಿ ಟ್ರೋಫಿ ಗೆದ್ದು ಬೀಗಿದೆ. ಅಹಮದಾಬಾದ್‌ನಲ್ಲಿ ನಡೆದ ಪಂದ್ಯದಲ್ಲಿ 255/5 ರನ್ ಗಳಿಸಿ, ಸಂಜು ಸ್ಯಾಮ್ಸನ್, ಇಶಾನ್ ಕಿಶನ್ ಮತ್ತು ಅಭಿಷೇಕ್ ಶರ್ಮಾ ಅವರ ಆಕ್ರಮಣಕಾರಿ ಬ್ಯಾಟಿಂಗ್ ನೆರವಿನಿಂದ ಭಾರತ ದಾಖಲೆಯ ರನ್ ಮಳೆಯನ್ನು ಹರಿಸಿತು. ಜಸ್ಪ್ರಿತ್ ಬೂರ್ಮ ರವರ ಬರ್ಜರಿ ಬೌಲಿಂಗ್ ನ್ಯೂಜಿಲೆಂಡ್ ಕೊನೆಗೆ 159 ಕ್ಕೆ 10 ವಿಕೆಟ್ ಕಳೆದುಕೊಂಡು ಸೋಲನಪ್ಪಿದೆ.

ಪ್ರಮುಖ ಮುಖ್ಯಾಂಶಗಳು:
ದಾಖಲೆಯ ಮೊತ್ತ: ಫೈನಲ್‌ನಲ್ಲಿ ಭಾರತ 20 ಓವರ್‌ಗಳಲ್ಲಿ 255/5 ಗಳಿಸಿ ಅತಿ ಹೆಚ್ಚು ರನ್ ಗಳಿಸಿದ ತಂಡವಾಯಿತು. ಪ್ರಮುಖ ಪ್ರದರ್ಶನ: ಸಂಜು ಸ್ಯಾಮ್ಸನ್ (89), ಇಶಾನ್ ಕಿಶನ್ (54), ಮತ್ತು ಅಭಿಷೇಕ್ ಶರ್ಮಾ (52) ಅಮೋಘ ಆಟವಾಡಿದರು.

ಟೀಮ್ ಇಂಡಿಯಾ ಸತತ ಮೂರನೇ ಬಾರಿ ವಿಶ್ವಕಪ್ ಗೆದ್ದು, ತವರಿನಲ್ಲಿ ಪ್ರಶಸ್ತಿ ಉಳಿಸಿಕೊಂಡಿದೆ. ಈ ಜಯದೊಂದಿಗೆ ಭಾರತದ ಟಿ20 ಕ್ರಿಕೆಟ್ ಇತಿಹಾಸದಲ್ಲಿ ಹೊಸ ಅಧ್ಯಾಯ ಸೃಷ್ಟಿಯಾಗಿದೆ.

ಪ್ಲೇಯಿಂಗ್ 11

ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್, ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್ (ನಾಯಕ), ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಅಕ್ಸರ್ ಪಟೇಲ್, ವರುಣ್ ಚಕ್ರವರ್ತಿ, ಅರ್ಶದೀಪ್ ಸಿಂಗ್, ಜಸ್ಪ್ರೀತ್ ಬುಮ್ರಾ

ನ್ಯೂಜಿಲೆಂಡ್ ತಂಡದಲ್ಲಿ ಒಂದು ಬದಲಾವಣೆ

ಟಿಮ್ ಸೈಫರ್ಟ್, ಫಿನ್ ಅಲೆನ್, ರಾಚಿನ್ ರವೀಂದ್ರ, ಗ್ಲೆನ್ ಫಿಲಿಪ್ಸ್, ಮಾರ್ಕ್ ಚಂಪನ್, ಡರಿಲ್ ಮಿಚೆಲ್, ಜೇಮ್ಸ್ ನೀಶಮ್, ಮಿಚೆಲ್ ಸ್ಯಾಂಟ್ನರ್ (ನಾಯಕ), ಮ್ಯಾಟ್ ಹೆನ್ನಿ, ಲೂಕಿ ಫರ್ಗ್ಯೂಸನ್, ಜೇಕಬ್ ಡಫಿ

ಆಫ್ ಸ್ಪಿನ್‌ಗೆ ತಿಣುಕಾಡುತ್ತಿದ್ದ ಅಭಿಷೇಕ್ ಶರ್ಮಾ ಹಾಗೂ ಇಶಾನ್ ಕಿಶನ್‌ಗೆ ಗುಡ್ ನ್ಯೂಸ್ ಇದೆ. ನ್ಯೂಜಿಲೆಂಡ್ ಫೈನಲ್ ಪಂದ್ಯಕ್ಕೆ ಆಪ್ ಸಿಪನ್ನರ್ ಕಣಕ್ಕಿಳಿಸಿಲ್ಲ. ನ್ಯೂಜಿಲೆಂಡ್ ತಂಡದ ಬದಲಾವಣೆ ಅಭಿಷೇಕ್ ಶರ್ಮಾ ಹಾಗೂ ಇಶಾನ್ ಕಿಶನ್‌ಗೆ ವರವಾಗುವ ಸಾಧ್ಯತೆ ಇದೆ.

ರೆಡ್ ಆಯಂಡ್ ಬ್ಲಾಕ್ ಪಿಚ್

ಭಾರತ ಕೆಂಪು ಮಣ್ಣಿನ ಪಿಚ್‌ನಲ್ಲಿ ಹೆಚ್ಚು ಯಶಸ್ಸು ಸಾಧಿಸಿದೆ. ವಾಂಖೆಡೆಯಲ್ಲಿ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ದ ರೋಚಕ ಗೆಲುವು ಸಾಧಿಸಿತ್ತು. ಇದು ರೆಡ್ ಪಿಚ್ ಆಗಿತ್ತು. ಆದರೆ ಇದೇ ಅಹಮ್ಮದಾಬಾದ್‌ನಲ್ಲಿ ಸೂಪರ್ 8 ಹಂತದ ಪಂದ್ಯದಲ್ಲಿ ಭಾರತ ಸೌತ್ ಆಫ್ರಿಕಾ ವಿರುದ್ಧ ಮುಗ್ಗರಿಸಿತ್ತು. ಈ ವೇಳೆ ಬ್ಲಾಕ್ ಪಿಚ್‌ನಲ್ಲಿ ಆಡಲಾಗಿತ್ತು. ಇದೀಗ ಫೈನಲ್ ಪಂದ್ಯಕ್ಕೆ ರೆಡ್ ಹಾಗೂ ಪ್ಲಾಕ್ ಮಿಶ್ರಣದ ಪಿಚ್‌ನಲ್ಲಿ ಫೈನಲ್ ಆಡಲಾಗುತ್ತಿದೆ. ಹೀಗಾಗಿ ಇದು ಭಾರತಕ್ಕೆ ಹೇಗೆ ನೆರವಾಗಲಿದೆ ಅನ್ನೋ ಕುತೂಹಲ ಹೆಚ್ಚಾಗಿದೆ.

ಟಿ20 ವಿಶ್ವಕಪ್ ಫೈನಲ್ ಪಂದ್ಯಕ್ಕಿಂತ ಅಹಮ್ಮದಬಾದ್ ಕ್ರೀಡಾಂಗಣ ಭಾರತಕ್ಕೆ ಹೆಚ್ಚಿನನ ಯಶಸ್ಸು ಹಾಗೂ ಸಿಹಿ ನೀಡಿಲ್ಲ. 2023ರ ವಿಶ್ವಕಪ್ ಫೈನಲ್ ಪಂದ್ಯದಲ್ಲೇ ಇದೇ ಕ್ರೀಡಾಂಗಣದಲ್ಲಿ ಭಾರತ, ಆಸ್ಟ್ರೇಲಿಯಾ ವಿರುದ್ದ ಮುಗ್ಗರಿಸಿತ್ತು. 1.2 ಲಕ್ಷ ಅಭಿಮಾನಿಗಳ ಮುಂದೆ ಭಾರತ ತಂಡವನ್ನು ಆಸ್ಟ್ರೇಲಿಯಾ ಸ್ಥಬ್ಧ ಮಾಡಿತ್ತು. ಇದೀಗ ಇದೇ ಮೈದಾನದಲ್ಲಿ ಭಾರತ ಸಂಪ್ರದಾಯಕ್ಕೆ ಬ್ರೇಕ್ ಹಾಕಿ ಹೊಸ ಇತಿಹಾಸ ಬರೆಯಲು ಸಜ್ಜಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular