ಅಯೋಧ್ಯೆ : ಹಿಂದೂಗಳ ಆರಾಧ್ಯ ದೇವಾ ಶ್ರೀ ರಾಮ ಮಂದಿರದ ಉದ್ಘಾಟನೆ ಇನ್ನೇನು ಕೆಲವೇ ದಿನಗಳಲ್ಲಿ ನಡೆಯಲಿದೆ.ಉತ್ತರ ಪ್ರದೇಶದ ಅಯೋದ್ಯೆಯಲ್ಲಿ ೨೨ ರಂದು ನಡೆಯಲಿರುವ ಶ್ರೀರಾಮನ ಮೂರ್ತಿ ಪ್ರತಿಷ್ಠಾನಾ ಸಮಾರಂಭಕ್ಕೆ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ಅವರಿಗೆ ರಾಮಮಂದಿರ ತೀರ್ಥ ಕ್ಷೇತ್ರ ಟ್ರಸ್ಟ್ ಆಹ್ವಾನ ನೀಡಿಲ್ಲ ಎನ್ನುವ ಸಂಗತಿ ಬಯಲಾಗಿದೆ.
ರಾಮಮಂದಿರ ಟ್ರಸ್ಟ್ ನಿಗದಿಪಡಿಸಿದ ಮಾನದಂಡಗಳ ಆಧಾರದ ಮೇಲೆ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಆಮಂತ್ರಣ ಸ್ವೀಕರಿಸಲು ಅರ್ಹತೆ ಹೊಂದಿಲ್ಲದ ಕಾರಣ ಗಾಂಧಿ ಕುಟುಂಬದಿAದ ಸೋನಿಯಾ ಗಾಂಧಿ ಅವರನ್ನು ಮಾತ್ರ ರಾಮಮಂದಿರದಲ್ಲಿ ಪ್ರಾಣ ಪ್ರತಿಷ್ಠಾಪನೆ ಸಮಾರಂಭಕ್ಕೆ ಆಹ್ವಾನಿಸಲಾಗಿದೆ ಎಂದು ಟ್ರಸ್ಟ್ನ ಮೂಲಗಳು ತಿಳಿಸಿವೆ.
ಕಾಂಗ್ರೆಸ್ ಸಂಸದೀಯ ಪಕ್ಷದ ಮುಖ್ಯಸ್ಥೆಯಾಗಿ ಸೋನಿಯಾ ಅವರನ್ನು ದೇವಸ್ಥಾನ ನಿರ್ಮಾಣ ಸಮಿತಿ ಅಧ್ಯಕ್ಷ ನೃಪೇಂದ್ರ ಮಿಶ್ರಾ ಅವರು ಆಹ್ವಾನಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮುಖ್ಯವಾಹಿನಿಯ ಪಕ್ಷಗಳ ಅಧ್ಯಕ್ಷರು,ಲೋಕಸಭೆ ಮತ್ತು ರಾಜ್ಯಸಭೆಯ ವಿರೋಧ ಪಕ್ಷದ ನಾಯಕರು ಮತ್ತು 1984 ಮತ್ತು 1992 ರ ನಡುವೆ ರಾಮಮಂದಿರ ಚಳವಳಿಯಲ್ಲಿ ಭಾಗವಹಿಸಿದ ರಾಜಕೀಯ ಪಕ್ಷಗಳ ನಾಯಕರನ್ನು ಅತಿಥಿಗಳಿಗೆ ಟ್ರಸ್ಟ್ ಆಹ್ವಾನ ನೀಡಿದೆ.ಟ್ರಸ್ಟ್ ರೆಡ್ ಕಾರ್ಪೆಟ್ ಹಾಸುತ್ತಿರುವ ವಿಶೇಷ ಅತಿಥಿಗಳಲ್ಲಿ ದಾರ್ಶನಿಕರು, ಕೈಗಾರಿಕೋದ್ಯಮಿಗಳು, ಕಲಾವಿದರು ಮತ್ತು ಕ್ರೀಡಾಪಟುಗಳು ಸೇರಿದ್ದಾರೆ.
ವಿಎಚ್‌ಪಿ ಕಾರ್ಯಾಧ್ಯಕ್ಷ ಅಲೋಕ್ ಕುಮಾರ್ ಅವರು ಇತ್ತೀಚೆಗೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಆಹ್ವಾನಿಸಿದ್ದಾರೆ ರಾಜ್ಯ ವಿರೋಧ ಪಕ್ಷದ ನಾಯಕರೂ ಆಗಿದ್ದಾರೆ, ಏಕೆಂದರೆ ಲೋಕಸಭೆಯಲ್ಲಿ ಅಧಿಕೃತ ವಿರೋಧ ಪಕ್ಷದ ನಾಯಕರಿಲ್ಲದ ಕಾರಣ ವಿಎಚ್‌ಪಿ ಕಾಂಗ್ರೆಸ್‌ನ ಸಭಾನಾಯಕ ಅಧೀರ್ ರಂಜನ್ ಅವರಿಗೆ ಆಹ್ವಾನ ಕಳುಹಿಸಿದೆ.
ಎಸ್‌ಪಿ ಅಧ್ಯಕ್ಷ ಅಖಿಲೇಶ್ ಯಾದವ್ ಮತ್ತು ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಶೀಘ್ರದಲ್ಲೇ ತಮ್ಮ ಆಹ್ವಾನವನ್ನು ಸ್ವೀಕರಿಸಲಿದ್ದಾರೆ ಎಂದು ಟ್ರಸ್ಟ್ನ ಕಾರ್ಯಕಾರಿಯೊಬ್ಬರು ತಿಳಿಸಿದ್ದಾರೆ. ಬಿಜೆಪಿ ಹಿರಿಯರಾದ ಲಾಲ್ ಕೃಷ್ಣಾಲ್ ಅಡ್ವಾಣಿ ಮತ್ತು ಮುರಳಿ ಮನೋಹರ್ ಜೋಶಿ ಅವರನ್ನು ಈಗಾಗಲೇ ಸಮಾರಂಭಕ್ಕೆ ಆಹ್ವಾನಿಸಲಾಗಿದೆ.
“ರಾಮನು ಎಲ್ಲರಿಗೂ ಸಂಬAಧಿಸಿದವನು. ಯಾವುದೇ ತಾರತಮ್ಯವಿಲ್ಲ. ಸಮಾರಂಭ ರಾಜಕೀಯ ಇರದಂತೆ ನಾವು ನೋಡಿಕೊಳ್ಳುತ್ತೇವೆ ಎಂದು ವಿಎಚ್‌ಪಿ ರಾಷ್ಟಿçÃಯ ಕಾರ್ಯದರ್ಶಿ ಮಿಲಿಂದ್ಪ ರಾAಡೆ ತಿಳಿಸಿದ್ದಾರೆ. ಬಿಜೆಪಿ ಮತ್ತು ಆರೆಸ್ಸೆಸ್ ಧರ್ಮವನ್ನು ರಾಜಕೀಯ ಸಾಧನವನ್ನಾಗಿ ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿ ಹಲವು ವಿರೋಧ ಪಕ್ಷದ ನಾಯಕರು ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ಸಮಾರಂಭದಲ್ಲಿ ಭಾಗವಹಿಸುವುದಿಲ್ಲ ಎಂದು ಹೇಳಿದ ದಿನಗಳ ನಂತರ ವಿಎಚ್‌ಪಿ ನಾಯಕರಿಂದ ಈ ಹೇಳಿಕೆ ಬಂದಿದೆ.


