ಅಫಜಲಪುರ : ತಾಲೂಕಿನ ಬಳೂರ್ಗಿ ಗ್ರಾಮದ ಮಲ್ಲಿಗನಾಥ ಸೋಮಜಾಳ ಅವರ ಹೊಲದಲ್ಲಿ ಬಿತ್ತನೆ ಮಾಡಿದ ಸ್ಯಾಂಡೋಸ್ ಕಂಪನಿಯ ಸೂರ್ಯಕಾಂತಿ ಬೀಜ ಸಂಪೂರ್ಣ ಕಳಪೆ ಮಟ್ಟದಿಂದ ಕೂಡಿದೆ ಎಂದು ರಾಜ್ಯ ಕಬ್ಬು ಬೆಳೆಗಾರ ಸಂಘದ ತಾಲೂಕಾಧ್ಯಕ್ಷ ರಮೇಶ ಹೂಗಾರ ಆರೋಪಿಸಿದರು.
ಅಫಜಲಪುರ ಪಟ್ಟಣದ ತಾಲೂಕಾ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಎಸ್.ಎಚ್ ಗಡಗಿಮನಿ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದ ಅವರು ಬಿತ್ತನೆ ಮಾಡಿದ ಬೀಜದಿಂದ ಸಮೃದ್ಧಿಯಾಗಿ ಬರಬೇಕಾದ ಬೆಳೆ ಆರಂಭದ ಹಂತದಲ್ಲೇ ಟಿಸಳು ಒಡೆಯಲು ಪ್ರಾರಂಭಿಸಿದೆ. ಆರಂಭದಲ್ಲಿ ಟಿಸಳು ಒಡೆದರೆ ಮುಂದೆ ತೆನೆ ಹಿಡಿಯುವುದಿಲ್ಲ ಎಂದು ರೈತರಲ್ಲಿ ಆತಂಕ ಸೃಷ್ಟಿಯಾಗಿದೆ.
ಆದ್ದರಿಂದ ಸೂರ್ಯಕಾಂತಿ ಬೀಜ ಸಂಪೂರ್ಣ ಕಳಪೆ ಮಟ್ಟದಾಗಿದ್ದು ಇದರ ವಿರುದ್ಧ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥ ಕಂಪನಿಯ ವಿರುದ್ಧ ಕ್ರಮ ಜರುಗಿಸುವಂತೆ ಒತ್ತಾಯಿಸಿದರು
ಈ ಸಂದರ್ಭದಲ್ಲಿ ರೈತ ಮುಖಂಡರಾದ ಮಹಾದೇವಪ್ಪ ಶೇರಿಕಾರ, ಪ್ರಕಾಶ ಪುಲಾರಿ, ಅಶೋಕ ಹೂಗಾರ, ಶಾವರ್ಸಿದ್ದ ಜಮಾದಾರ, ಮಲ್ಲಿಗನಾಥ ಸೋಮಜಾಳ ಇದ್ದರು.


