ಅನಂತ್ ನಾಗ್ : ಶಾಂತಿಯ ಕಡೆಗೆ ಮುಖ ಮಾಡುತ್ತಿದ್ದ ಕಣಿವೆ ನಾಡು ಜಮ್ಮು ಕಾಶ್ಮೀರ ಮಗದೊಮ್ಮೆ ರಕ್ಕಸರ ಅಟ್ಟಹಾಸಕ್ಕೆ ಗುರಿಯಾಗಿದೆ. ಅನಂತ್ನಾಗ್ ಜಲ್ಲೆಯ ಪಹಲ್ಗಾಮ್ ಪ್ರದೇಶದಲ್ಲಿ ರಣಹೇಡಿ ಉಗ್ರರು ಹಿಂದೂ ಪ್ರವಾಸಿಗರನ್ನೇ ಗುರಿಯಾಗಿಸಿ ಮಂಗಳವಾರ ಮಧ್ಯಾಹ್ನ2.30ರ ವೇಳೆಗೆ ಗುಂಡಿನ ದಾಳಿ ನಡೆಸಿದ್ದಾರೆ. ದಾಳಿಯಲ್ಲಿ ಕರ್ನಾಟಕದ ಶಿವಮೊಗ್ಗೆಯ ಮಂಜುನಾಥ್ ರಾವ್ ಹಾಗೂ ಬೆಂಗಳೂರಿನ ಮತ್ತೀ ಕೆರೆಯ ಭರತ್ ಭೂಷಣ ಅವರನ್ನೂ ಒಳಗೊಂಡು 30 ಜನ ಪ್ರವಾಸಿಗರು ಮೃತಪಟ್ಟಿದ್ದಾರೆ.
ಮೃತಪಟ್ಟ ಎಲ್ಲರೂ ಹಿಂದೂಗಳೇ. ಭಯೋತ್ಪಾದಕರು ಪ್ರವಾಸಿಗರ ಹೆಸರು ಹಾಗೂ ಧರ್ಮ ಕೇಳಿ ಗುಂಡುಹಾರಿಸಿದ್ದಾರೆ ಎAದು ಮಹಿಳಾ ಪ್ರವಾಸಿಯೊಬ್ಬರು ತಿಳಿಸಿದ್ದಾರೆ. ಅದೇ ರೀತಿ ಪುರುಷರ ಪ್ಯಾಂಟ್ ಬಿಚ್ಚಿಸಿ ಅವರು ಹಿಂದೂಗಳು ಹೌದೇ ಅಲ್ಲವೇ ಎಂದು ಖಚಿತವಾದ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಜತೆಗೆ ಕೇವಲ ಹಿಂದೂ ಪುರುಷ ಪ್ರವಾಸಿಗರನ್ನಷ್ಟೇ ಉಗ್ರರು ಹತ್ಯೆ ಮಾಡಿದ್ದಾರೆ.
ಜಮ್ಮು ಕಾಶ್ಮೀರದ ಜನಪ್ರಿಯ ಪ್ರವಾಸಿ ತಾಣಗಳಲ್ಲಿ ಒಂದಾಗಿರುವ ಪಹಲ್ಗಾಮ್ ಪ್ರದೇಶದಲ್ಲಿನ ಟೂರಿಸ್ಟ್ ಕ್ಯಾಂಪ್ಗೆ ಏಕಾಏಕಿ ನುಗ್ಗಿದ ಆರೇಳು ಜನ ಭಯೋತ್ಪಾದಕರು ಬಿಟ್ಟೂ ಬಿಡದೆ ಸತತ 7-8 ನಿಮಿಷ ಗುಂಡಿನ ದಾಳಿ ನಡೆಸಿದ್ದಾರೆ. ಪಾಕಿಸ್ತಾನದ ಲಷ್ಕರ್ಎ-ತೈಬಾದ ಸಂಘಟನೆ ಜತೆ ಸಂಪರ್ಕವಿರುವ ಉಗ್ರರು ಈ ದಾಳಿ ಮಾಡಿದ್ದಾರೆ ಎನ್ನಲಾಗುತ್ತಿದೆಯಾದರೂ ಖಚಿತತೆ ದೊರೆತಿಲ್ಲ. ಆದರೆ ಲಷ್ಕರ್-ಎ-ತೈಬಾದ ಸ್ಥಳೀಯ ಶಾಖೆಯಾದ ರೆಸಿಸ್ಟೆನ್ಸ್ ಫ್ರಂಟ್ ಈ ದಾಳಿಯ ಹೊಣೆಯನ್ನು ಹೊತ್ತುಕೊಂಡಿದೆ.
ಉಗ್ರದಾಳಿಯಾದ ಬೈಸರನ್ ಹುಲ್ಲುಗಾವಲು ಪಹಲ್ಗಾಂ ಗಿರಿಧಾಮದಿಂದ ಸುಮಾರು 5 ಕಿ.ಮೀನಷ್ಟು ದೂರದಲ್ಲಿದ್ದು ಈ ಜಾಗಕ್ಕೆ ಕೇವಲ ಕಾಲ್ನಡಿಗೆಯಿಂದ ಅಥವಾ ಕುದುರೆಗಳನ್ನು ಮಾತ್ರ ಏರಿ ಬರಲು ಸಾಧ್ಯ. ಆದರೆ ಮಿನಿ `ಮಿನಿ ಸ್ವಿಟ್ಜರ್ಲೆಂಡ್’ ಎಂದು ಕರೆಯಲ್ಪಡುವ ಈ ಹುಲ್ಲುಗಾವಲಿನೊಳಗೆ ಮಧ್ಯಾಹ್ನ 2.3೦ರ ವೇಳೆಗೆ ನುಗ್ಗಿದ ಉಗ್ರರು ಗುಂಡು ಹಾರಿಸಲು ಪ್ರಾರಂಭಿಸಿದ್ದಾರೆ. ಅಲ್ಲೇ ಕುಟುಂಬದೊAದಿಗೆ ಕುದುರೆ ಸವಾರಿ ಮಾಡುತ್ತಿದ್ದ ಹಾಗೂ ಬಯಲಿನಲ್ಲಿ ಊಟ ತಿಂಡಿ ಮಾಡುತ್ತಿದ್ದ ಪ್ರವಾಸಿಗರ ಮೇಲೆ ಭಯೋತ್ಪಾದಕರು ಗುಂಡಿನ ಮಳೆಗೆರೆದಿದ್ದಾರೆ.
ಹೋಗಿ ಮೋದಿಗೆ ಹೇಳು ಎಂದು ರಕ್ತಪಿಶಾಸು ಉಗ್ರರಿಂದ ಅವಾಜ್…
ಐಡಿ ಕಾರ್ಡ್, ಹೆಸರು ಕೇಳಿ ಉಗ್ರರು ದಾಳಿ ನಡೆಸಿದ್ದಾರೆ. ಮಹಿಳೆಯರು, ಮಕ್ಕಳನ್ನು ಬಿಟ್ಟು ಪುರುಷರನ್ನೇ ಅದರಲ್ಲೂ ಹಿಂದೂಗಳನ್ನೇ ಗುರಿಯಾಗಿಸಿ ಉಗ್ರರು ದಾಳಿ ನಡೆಸಿದ್ದಾರೆ. ಮಂಜುನಾಥ್ರನ್ನು ಗುಂಡಿಕ್ಕಿ ಕೊಂದ ಬಳಿಕ ಉಗ್ರರಿಗೆ ತಮ್ಮನ್ನು ಕೊಲ್ಲುವಂತೆ ಪತ್ನಿ ಪಲ್ಲವಿ ಮತ್ತು ಪುತ್ರ ಕೇಳಿಕೊಂಡಿದ್ದಾರೆ. ಅದಕ್ಕೆ ಉಗ್ರರು ಹೋಗಿ ಮೋದಿಗೆ ಹೇಳಿ ಎಂದು ಆವಾಜ್ ಹಾಕಿದರು ಎಂದು ಪಲ್ಲವಿ ದೂರವಾಣಿಯಲ್ಲಿ ತಮ್ಮ ಸಂಬAಧಿಕರಿಗೆ ತಿಳಿಸಿದ್ದಾರೆ.
ಅಲ್ಲಿದ್ದ ಮೂವರು ಬಿಸ್ಮಿಲ್ಲಾ, ಬಿಸ್ಮಿಲ್ಲಾ ಅಂತಿದ್ರು : ಮೃತ ಮಂಜುನಾಥ್ ಪತ್ನಿ
ಶ್ರೀನಗರ: ಕಾಶ್ಮೀರಕ್ಕೆ ಹೋಗುವುದು ನನ್ನ ಗಂಡನ ಕನಸಾಗಿತ್ತು. ಈಗ ಯಾಕಾದ್ರೂ ಬಂದಿದ್ದೇವೋ ಏನೋ ಈ ಕರ್ಮಕ್ಕೆ ಎಂದು ಉಗ್ರರ ದಾಳಿಯಲ್ಲಿ ಸಾವಿಗೀಡಾದ ಶಿವಮೊಗ್ಗ ಮೂಲದ ರಿಯಲ್ ಎಸ್ಟೇಟ್ ಉದ್ಯಮಿಯ ಪತ್ನಿ ಪಲ್ಲವಿ ಕಣ್ಣೀರಿಟ್ಟಿದ್ದಾರೆ. ನಾವು ಒಂದು ೫೦೦ ಜನ ಇದ್ವಿ. ಮಿನಿ ಸ್ವಿಡ್ಜರ್ಲ್ಯಾಂಡ್ ಅಂತಾ ಒಂದು ಪಾಯಿಂಟ್ ಅದು. ಆಗಷ್ಟೇ ಹೋಗಿ ಕುದುರೆ ಇಳಿದಿದ್ವಿ. ನನ್ನ ಮಗ ಬೆಳಗ್ಗೆಯಿಂದ ಏನೂ ತಿಂದಿರಲಿಲ್ಲ. ಅಲ್ಲೇನಾದ್ರೂ ತಗೊಳೋಕೆ ಅಂತಾ ನಮ್ಮ ಮನೆಯವರು, ಅಂಗಡಿಯವರ ಬಳಿ ವಿಚಾರಿಸಲು ಹೋದರು. ನನ್ನ ಮಗನ ಕರೆಯಲು ನಾನು ಹೋದೆ. ಗುಂಡಿನ ಥರ ಸೌಂಡ್ ಬಂತು. ನಾವೆಲ್ಲಾ ಆರ್ಮಿಯವರು ಇರಬೇಕು ಅಂನ್ಕೊAಡ್ವಿ. ನಾನು ಈ ಕಡೆ ತಿರುಗಿ ನೋಡೋ ಅಷ್ಟರಲ್ಲಿ ಬೇರೆಯವರೆಲ್ಲಾ ಓಡುತ್ತಿದ್ದರು. ನನ್ನ ಮಗನ ಕರೆದುಕೊಳ್ಳೋಕೆ ಅಂತಾ ನೋಡ್ತಿನಿ, ಅಷ್ಟರಲ್ಲಿ ನಮ್ಮ ಮನೆಯವರು ರಕ್ತದ ಮಡುವಿನಲ್ಲಿ ಇದ್ದರು. ಅವರು ತಲೆಗೆ ಹೊಡೆದಿದ್ದಾರೆ ಎಂದು ತಿಳಿಸಿದ್ದಾರೆ.
ಮೂವರು ಮುಸ್ಲಿಮರು ಬಿಸ್ಮಿಲ್ಲಾ, ಬಿಸ್ಮಿಲ್ಲಾ ಅಂತಿದ್ರು. ನಾನು ಅಲ್ಲೇ ಇದ್ದ ಭಯೋತ್ಪಾದಕನ ಬಳಿ ನನ್ನ ಪತಿಯನ್ನು ಸಾಯಿಸಿದ್ದೀರಾ, ನನ್ನನ್ನು ಸಾಯಿಸಿ ಎಂದು ನಾನು ಕೇಳಿದೆ. ನನ್ನ ಮಗ ಏ ನಾಯಿ ನನ್ನ ತಂದೆಯನ್ನು ಕೊAದೆಯಲ್ಲಾ, ನಮ್ಮನ್ನು ಕೊಂದುಬಿಡು ಎಂದ.. ಇಲ್ಲ ನಿಮ್ಮನ್ನು ಸಾಯಿಸಲ್ಲ ಎಂದು ಅವರು ಹೋದರು ಎಂದು ಮಾಹಿತಿ ನೀಡಿದ್ದಾರೆ.
26/11 ಬಳಿಕ ಅತಿದೊಡ ದಾಳಿ
2008 ರಲ್ಲಿ 160ಕ್ಕೂ ಹೆಚ್ಚು ನಾಗರಿಕರನ್ನು ಬಲಿ ಪಡೆದ 26/11 ಮುಂಬೈ ಉಗ್ರ ದಾಳಿಯ ನಂತರ ಜಮ್ಮು ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಈ ದಾಳಿಯೇ ಅತಿ ದೊಡ್ಡದು ಎಂದು ಹೇಳಲಾಗುತ್ತಿದೆ. ದಾಳಿಯಲ್ಲಿ ಹಿಂದೂ ಪ್ರವಾಸಿಗರನ್ನೇ ಗುರಿಯಾಗಿಸಿ ಗುಂಡು ಹೊಡೆದಿರುವ ಉಗ್ರರು, ದಕ್ಷಿಣ ಹಾಗೂ ಉತ್ತರ ಕಾಶ್ಮೀರದಿಂದ ಬAದಿದ್ದವರನ್ನು ಹಾಗೇ ಬಿಟ್ಟಿದ್ದಾರೆ ಉಗ್ರರ ದಾಳಿ ಬೆನ್ನಲ್ಲೇ ಪ್ರಧಾನಿ ಮೋದಿ ಸೌದಿಯಿಂದ ದೂರವಾಣಿಯಲ್ಲಿ ಗೃಹ ಸಚಿವ ಅಮಿತ್ ಶಾರನ್ನು ಸಂರ್ಕಿಸಿ ಕಾಶ್ಮೀರಕ್ಕೆ ಕೂಡಲೇ ತೆರಳುವಂತ ಸೂಚಿಸಿದರು. ಅದರ ಬೆನ್ನಲ್ಲೇ ಅಮಿತ್ ಶಾ ಕಾಶ್ಮೀರಕ್ಕೆ ವಿಶೇಷ ವಿಮಾನದಲ್ಲಿ ತೆರಳಿದ್ದಾರೆ.
ದಾಳಿಕೋರರನ್ನು ಯಾವ ಕಾರಣಕೂ ಬಿಡೋದಿಲ್ಲ ಜಮ್ಮು ಕಾಶ್ಮೀರದ ಉಗ್ರ ದಾಳಿಯ ಹಿಂದಿರುವವರನ್ನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ. ಅವರ ದುಷ್ಟ ಅಜೆಂಡಾ ಎಂದೂ ಯಶಸ್ವಿಯಾಗುವುದಿಲ್ಲ. ಭಯೋತ್ಪಾದನೆಯ ವಿರುದ್ಧ ಹೋರಾಡುವ ನಮ್ಮ ಸಂಕಲ್ಪ ಅಚಲ. ಅದು ಇನ್ನಷ್ಟು ಬಲಗೊಳ್ಳುವುದು ನಿಶ್ಚಿತ ಎಂದು ಪ್ರಧಾನಿ ನರೇಂದ್ರ ಮೋದಿ ಆಕ್ರೋಶ ಹೊರಹಾಕಿದ್ದಾರೆ .


