ಅಡಿಲೇಡ್ : ಆಸ್ಟ್ರೇಲಿಯಾ ವಿರುದ್ಧ ಏರ್ಪಟ್ಟಿದ್ದ 2 ನೇ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಸತತ 2ನೇ ಬಾರಿ ಡಕೌಟ್ ಆದರೆ, ಭಾರತವೂ ಸತತ 2 ನೇ ಬಾರಿ ಸೋಲುಂಡು ಸರಣಿಯನ್ನು ಇನ್ನೊಂದು ಪಂದ್ಯ ಬಾಕಿ ಇರುವಾಗಲೇ ಕಳೆದುಕೊಂಡಿದೆ.
ಮೊದಲ ಪವರ್ಪ್ಲೇನಲ್ಲಿ ತಾಳ್ಮೆಯಿಂದಲೇ ರನ್ ಕದಿಯುತ್ತಾ ಸಾಗಿದ್ದ ರೋಹಿತ್ ಶರ್ಮಾ ಹಾಗೂ ಶುಭಮನ್ ಗಿಲ್ ಕೇವಲ 17 ರನ್ಗಳಿಗೆ ಬೇಪಟ್ಟಿತು. 9 ರನ್ಗಳಿಸಿದ್ದ ಶುಭಮನ್ ಗಿಲ್ ಬಾರ್ಟ್ಲೆಟ್ ಎಸೆದ ಮೊದಲ ಎಸೆತದಲ್ಲಿ ವಿಕೆಟ್ ಒಪ್ಪಿಸಿದರೆ, ಅದೇ ಓವರ್ನ ೫ನೇ ಎಸೆತದಲ್ಲಿ ವಿರಾಟ್ ಎಲ್ಬಿ ಬಲೆಗೆ ಬಿದ್ದರು. ಇದಾದ ಬಳಿಕ ಶ್ರೇಯಸ್ ಹಾಗೂ ರೋಹಿತ್ ಶರ್ಮಾ ಅಮೋಘ 118 ರನ್ಗಳ ಜೊತೆಯಾಟ ನೀಡಿದರು.
97 ಎಸೆತಗಳಲ್ಲಿ 73 ರನ್ಗಳಿಸಿದ ರೋಹಿತ್ ಎಲ್ಲರಿಂದಲೂ ಚಪ್ಪಾಳೆ ಗಿಟ್ಟಿಸಿಕೊಂಡರು. ರೋಹಿತ್ಗೆ ಸಾಥ್ ನೀಡಿದ ಶ್ರೇಯಸ್ ಅಯ್ಯರ್ 61 ರನ್ಗಳಿಸಿ ಜಾಂಪಾಗೆ ಬೌಲ್ಡ್ ಆದರು. ಭಾರತೀಯ ಬ್ಯಾಟಿಂಗ್ನಲ್ಲಿ ಅಕ್ಷರ್ ಪಟೇಲ್ 44 ರನ್ಗಳಿಸಿದ್ದರಿಂದ ಭಾರತ 250ರ ಗಡಿ ದಾಟಿತು. ಡೆತ್ ಓವರ್ಗಳಲ್ಲಿ ಹರ್ಷಿತ್ ರಾಣಾ 24 ರನ್ಗಳಿಸಿ ತಂಡವನ್ನು 26೪ಕ್ಕೇರಿಸಿದರು. ಆಸ್ಟ್ರೇಲಿಯಾ ಕೂಡ 265ರನ್ಗಳ ಗೆಲುವಿನ ಗುರಿ ಬೆನ್ನತ್ತಲು ಹರಸಾಹಸವೇ ಪಟ್ಟಿತು. 3 ನೇ ಕ್ರಮಾಂಕದಲ್ಲಿ ಮ್ಯಾಥ್ಯೂ ಶಾರ್ಟ್ನ 74, ಕೂಪರ್ ಕೊನ್ಲಿಯ ಅಜೇಯ 61 ರನ್ಗಳ ಕಾಣಿಕೆ ಆಸೀಸ್ ಗೆಲುವಿಗೆ ಕಾರಣವಾಯಿತು.
ಸಂಕ್ಷಿಪ್ತ ಸ್ಕೋರ್: ಭಾರತ 50 ಓವರ್ಗಳಲ್ಲಿ 265/9. ಆಸ್ಟೆçÃಲಿಯಾ 46.9 ಓವರ್ಗಳಲ್ಲಿ 265/8 ರನ್. ಆಸೀಸ್ಗೆ 2 ವಿಕೆಟ್ ಜಯ.


