ಕುಂದಾಪುರ : ದ್ವಿಚಕ್ರವಾಹನ ಮತ್ತು ಖಾಸಗಿ ಬಸ್ ನಡುವೆ ಭಾನುವಾರ ಕೋಟದಲ್ಲಿ ಸಂಭವಿಸಿದ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ವಕ್ವಾಡಿ ನಿವಾಸಿ ಗಣೇಶ್ ಪೂಜಾರಿ (33) ಅವರು ಸೋಮವಾರ ಮಣಿಪಾಲದ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಕುಂದಾಪುರದಿಂದ ಉಡುಪಿಗೆ ತೆರಳುತ್ತಿದ್ದ ಖಾಸಗಿ ಬಸ್ ಕೋಟ ಬಸ್ ನಿಲ್ದಾಣದ ಬಳಿ ಹೆದ್ದಾರಿಯಲ್ಲಿ ಏಕಾಏಕಿ ಬ್ರೇಕ್ ಹಾಕಿದೆ. ಗಣೇಶ್ ಮತ್ತು ಆತನ ಸ್ನೇಹಿತ ಸುಮಂತ್ ಎಂಬುವರು ತಮ್ಮ ಮೋಟಾರ್ ಸೈಕಲ್‌ನಲ್ಲಿ ಹಿಂಬದಿ ಸವಾರಿ ಮಾಡುತ್ತಿದ್ದು, ಬಸ್‌ನ ಹಿಂದೆ ಇದ್ದುದರಿಂದ ಬಸ್‌ಗೆ ಡಿಕ್ಕಿ ಹೊಡೆದಿದ್ದಾರೆ. ಇಬ್ಬರೂ ಗಂಭೀರವಾಗಿ ಗಾಯಗೊಂಡಿದ್ದಾರೆ.
ಗಣೇಶ್ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ತಂದೆ-ತಾಯಿ ಹಾಗೂ ತಂಗಿಯನ್ನು ಅಗಲಿದ್ದಾರೆ. ಗಣೇಶ್ ಸಹೋದರಿಯ ಮದುವೆ ನಿಶ್ಚಯವಾಗಿದ್ದು, ಕುಟುಂಬ ಆಧಾರ ಸ್ತಂಭವನ್ನೆ ಕಳೆದುಕೊಂಡಿದೆ.
ಖಾಸಗಿ ಬಸ್‌ಗಳು ಸರ್ವಿಸ್ ರಸ್ತೆಗೆ ಪ್ರವೇಶಿಸುವುದನ್ನು ಆರ್‌ಟಿಒ ಕಡ್ಡಾಯಗೊಳಿಸಬೇಕು. ಬಹುತೇಕ ಬಸ್‌ಗಳು ಪ್ರಯಾಣಿಕರನ್ನು ಕಂಡೊಡನೆ ಹೆದ್ದಾರಿಯಲ್ಲಿ ದಿಢೀರ್ ಬ್ರೇಕ್ ಹಾಕುವುದರಿಂದ ಅಪಘಾತಗಳು ಸಂಭವಿಸುತ್ತಿವೆ ಎಂಬುದು ಸ್ಥಳೀಯರ ಅಭಿಪ್ರಾಯ.