Sunday, March 16, 2025
Flats for sale
Homeಗ್ಯಾಜೆಟ್ / ಟೆಕ್ಜನಸಾಮಾನ್ಯರ ವಾಟ್ಸಾಪ್ ಪರಿಚಯಿಸಿದ 7 ಫೀಚರ್‌ಗಳು ಇವು; ಈಗಲೇ ಅಪ್ಡೇಟ್ ಮಾಡಿದ್ರಾ ಇಲ್ಲದಿದ್ರೆ ಮಾಡಿ ಬಿಡಿ...

ಜನಸಾಮಾನ್ಯರ ವಾಟ್ಸಾಪ್ ಪರಿಚಯಿಸಿದ 7 ಫೀಚರ್‌ಗಳು ಇವು; ಈಗಲೇ ಅಪ್ಡೇಟ್ ಮಾಡಿದ್ರಾ ಇಲ್ಲದಿದ್ರೆ ಮಾಡಿ ಬಿಡಿ !

ದಿನದಿಂದ ದಿನಕ್ಕೆ ಸಾಮಾಜಿಕ ಜಾಲಾತಾಣದ ಭಾಗವಾದ wಟ್ಸ್ ಅಪ್ ದಿನಕೊಂದು ಹೊಸ ಅಪ್ಡೇಟ್ ಗಳೊಂದಿಗೆ ಜನರ ಮುಂದೆ ಇಡ್ತಾ ಇದೆ . ಪ್ರಪಂಚದಾದ್ಯಂತ 2 ಬಿಲಿಯನ್ ಬಳಕೆದಾರರನ್ನು ಹೊಂದಿರುವ ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್‌ ವಾಟ್ಸಾಪ್‌. ಒಟ್ಟಾರೆ ಬಳಕೆದಾರರ ಅನುಭವವನ್ನು ಸುಧಾರಿಸಲು ಮೆಟಾ-ಮಾಲೀಕತ್ವದ ಕಂಪನಿಯು ಇತ್ತೀಚೆಗೆ ಕೆಲವೊಂದು ಹೊಸ ವೈಶಿಷ್ಟ್ಯಗಳನ್ನು ಹೊರತಂದಿದೆ. ಈ ಎಲ್ಲಾ ಅಪ್ಡೇಟ್‌ಗಳತ್ತ ಒಂದು ನೋಟ ಇಲ್ಲಿದೆ…

WhatsApp Undo button: ಒಂದು ಬಳಕೆದಾರರು ‘ಎಲ್ಲರಿಗೂ ಅಳಿಸಿ(Delete for everyone)’ ಬದಲಿಗೆ ತಪ್ಪಿ ‘ಡಿಲೀಟ್‌ ಫರ್‌ ಮಿ(Delete for me)’ ಬಟನ್ ಅನ್ನು ಆಕಸ್ಮಿಕವಾಗಿ ಒತ್ತಿದರೆ, ಅದನ್ನು ರದ್ದುಗೊಳಿಸಲು ಈ ಫೀಚರ್‌ ನೆರವಾಗುತ್ತದೆ. ಅಂದರೆ ಅನ್‌ಡು ಆಯ್ಕೆಗೆ ಕ್ಲಿಕ್‌ ಮಾಡಿ ನಿಮ್ಮ ತಪ್ಪನ್ನು ಸರಿಪಡಿಸಿಕೊಳ್ಳಬಹುದು.

Whatsapp call links: ಇತರರನ್ನು ಗುಂಪು ಕರೆಗೆ ಆಹ್ವಾನಿಸಲು ಬಳಕೆದಾರರು ಈಗ ಲಿಂಕ್‌ಗಳನ್ನು ರಚಿಸಬಹುದು ಮತ್ತು ಹಂಚಿಕೊಳ್ಳಬಹುದು.

Whatsapp Avatars: ಬಳಕೆದಾರರು ಈಗ ತಮ್ಮದೇ ಆದ ಡಿಜಿಟಲ್ ‘ಅವತಾರ್‌’ ರಚಿಸಿ, ಅದನ್ನು ಪ್ರೊಫೈಲ್ ಫೋಟೋವಾಗಿ ಬಳಸಬಹುದು. ಅಲ್ಲದೆ ಇತರ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಹಂಚಿಕೊಳ್ಳಬಹುದು.

Message yourself: ಈ ವೈಶಿಷ್ಟ್ಯವು WhatsApp ನಲ್ಲಿ ಟಿಪ್ಪಣಿಗಳು, ಸಂದೇಶ ಮತ್ತು ಶಾಪಿಂಗ್ ಪಟ್ಟಿಗಳನ್ನು ಕಳುಹಿಸುವ ಅವಕಾಶ ನೀಡುತ್ತದೆ.

Whatsapp Polls: ವಾಟ್ಸಾಪ್‌ ಸಮೀಕ್ಷೆ ವೈಶಿಷ್ಟ್ಯವು ಬಳಕೆದಾರರಿಗೆ ವೈಯಕ್ತಿಕ ಚಾಟ್‌ಗಳಲ್ಲಿ ಸಮೀಕ್ಷೆಗಳನ್ನು ರಚಿಸಲು ಅನುಮತಿಸುತ್ತದೆ.

ಕರೆಗಳಲ್ಲಿ ಭಾಗವಹಿಸುವವರಿಗೆ ಸಂದೇಶ ಕಳುಹಿಸುವ ಅಥವಾ ಮ್ಯೂಟ್ ಮಾಡುವ ಅವಕಾಶ: ವಾಟ್ಸಾಪ್‌ ಕರೆಯಲ್ಲಿ ಭಾಗವಹಿಸುವ ಎಲ್ಲರೂ ಮಾತನಾಡುವುದರಿಂದ ವಿಡಿಯೋ ಅಥವಾ ಆಡಿಯೊ ಗುಣಮಟ್ಟ ಕಡಿಮೆಯಾಗುತ್ತದೆ. ಹೀಗಾಗಿ ಬಳಕೆದಾರರನ್ನು ಮ್ಯೂಟ್ ಮಾಡಲು ಅಥವಾ ಪ್ರತ್ಯೇಕವಾಗಿ ಸಂದೇಶವನ್ನು ಕಳುಹಿಸಲು ಈ ಫೀಚರ್‌ ಅನುಮತಿಸುತ್ತದೆ.

ಗುಂಪು ಚಾಟ್ ಪಟ್ಟಿಯನ್ನು ಫಿಲ್ಟರ್ ಮಾಡುವ ಅವಕಾಶ: ಬಳಕೆದಾರರು ಈಗ ಸೆರ್ಚ್‌ ಮಾಡಿದಾಗ, ಕಾಂಟ್ಯಾಕ್ಟ್‌ ಹೆಸರನ್ನು ಹುಡುಕಿದಾಗಲೆಲ್ಲಾ ‘ರೀಸೆಂಟ್‌ ಗ್ರೂಪ್ಸ್‌’ ನೋಡಬಹುದು.

RELATED ARTICLES

LEAVE A REPLY

Please enter your comment!
Please enter your name here

Most Popular