ಮಂಗಳೂರು: ಬೆಂಗಳೂರಿನಲ್ಲಿ ಡಿಸೆಂಬರ್ ೧೧ ರಿಂದ ೨೨ರ ತನಕ ನಡೆದ ೬೦ನೇ ರಾಷ್ಟ್ರ ಮಟ್ಟದ ರೋಲರ್ ಸ್ಕೇಟಿಂಗ್ ಚಾಂಪಿಯನ್‌ಶಿಪ್ ಬೆಂಗಳೂರು -೨೦೨೨ ಸ್ಪರ್ಧೆಯಲ್ಲಿ ಮಂಗಳೂರು ರೋಲರ್ ಸ್ಕೇಟಿಂಗ್ ಕ್ಲಬ್‌ನ ತಸ್ಮಯಿ ಮಂಜುನಾಥ್ ಶೆಟ್ಟಿ ದ್ವಿತೀಯ ಸ್ಥಾನ ಪಡೆದಿರುತ್ತಾರೆ.
ಇವರು ಕಟೀಲು ಮಿತ್ತಬೈಲುಗುತ್ತು ಚಿತ್ರ ಶೆಟ್ಟಿ ಹಾಗೂ ಐಕಳ ಬಾವ ಮಂಜುನಾಥ್ ಶೆಟ್ಟಿ ದಂಪತಿಯ ಸುಪುತ್ರಿ. ಇವರಿಗೆ ಮಹೇಶ್‌ಕುಮಾರ್ ತರಬೇತಿ ನೀಡಿದ್ದಾರೆ.


